VLC Media Player Ban – ಭಾರತದಲ್ಲಿ VLC ಮೀಡಿಯಾ ಪ್ಲೇಯರ್ ಬ್ಯಾನ್
ದೇಶದ ಅಂತ್ಯಂತ ಜನಪ್ರಿಯ ಮಲ್ಟಿ ಮೀಡಿಯಾ ಪ್ಲೇಯರ್ ಸಾಫ್ಟ್ವೇರ್, VLC ಪ್ಲೇಯರ್ ನ್ನ ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. VideoLAN ಪ್ರಾಜೆಕ್ಟ್ನಿಂದ ಅಭಿವೃದ್ಧಿಪಡಿಸಲಾದ ಈ ಮೀಡಿಯಾ ಪ್ಲೇಯರ್ ನ್ನ ಭಾರತದಲ್ಲಿ ಸುಮಾರು 2 ತಿಂಗಳ ಹಿಂದೆ ನಿಷೇಧಿಸಲಾಗಿದೆ.
ಸದ್ಯಕ್ಕೆ, ಕಂಪನಿಯಾಗಲಿ ಅಥವಾ ಭಾರತ ಸರ್ಕಾರವಾಗಲಿ ನಿಷೇಧದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೇ ಈಗಾಗಲೇ ಇನ್ಸ್ಟಾಲ್ ಆಗಿರುವ ಸಾಧನಗಳಲ್ಲಿ ಇದು ಇನ್ನೂ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ, ದೇಶದಲ್ಲಿ VLC ಮೀಡಿಯಾ ಪ್ಲೇಯರ್ ವೆಬ್ಸೈಟ್ ಮತ್ತು ಡೌನ್ಲೋಡ್ ಲಿಂಕ್ ಅನ್ನು ಮಾತ್ರ ನಿಷೇಧಿಸಲಾಗಿದೆ.
ಸರಳವಾಗಿ ಹೇಳುವುದಾದರೆ ಭಾರತದಲ್ಲಿ ಸದ್ಯಕ್ಕೆ VLC ಮೀಡಿಯಾ ಪ್ಲೇಯರ್ ನ್ನ ಡೌನ್ ಲೋಡ್ ಮಾಡಲು ಸಾಧ್ಯವಿಲ್ಲ. ಈಗಾಗಲೇ ತಮ್ಮ ಕಂಪ್ಯೂಟರ್ ಮತ್ತು ಮೊಬೈಲ್ ಸಾಧನಗಳಲ್ಲಿ ಬಳಸುತ್ತಿರುವವರಿಗೆ ಇದು ಕಾರ್ಯನಿರ್ವಹಿಸುತ್ತಿದೆ.
ಕೆಲವು ವರದಿಗಳ ಪ್ರಕಾರ, VLC ಮೀಡಿಯಾ ಪ್ಲೇಯರ್ ನ್ನ ಚೀನಾ ಬೆಂಬಲಿತ ಹ್ಯಾಕಿಂಗ್ ಗ್ರೂಪ್ ಸಿಕಾಡಾ ಸೈಬರ್ ದಾಳಿಗೆ ಬಳಸುತ್ತಿದೆ ಎನ್ನಲಾಗಿದೆ. ದೀರ್ಘಾವಧಿಯ ಸೈಬರ್ ದಾಳಿ ನಡೆಸುವ ದುರುದ್ದೇಶದಿಂದ ಮಾಲ್ವೇರ್ ಲೋಡರ್ ನ್ನು ನಿಯೋಜಿಸಲು ಸಿಕಾಡಾ ಗ್ರೂಪ್ VLC ಮೀಡಿಯಾ ಪ್ಲೇಯರ್ ಅನ್ನು ಬಳಸುತ್ತಿದೆ ಎಂದು ಭದ್ರತಾ ತಜ್ಞರು ಕಂಡು ಹಿಡಿದಿದ್ದಾರೆ. ಆದರೆ VLC ಮೀಡಿಯಾ ಪ್ಲೇಯರ್ ಚೀನಾದ ಕಂಪನಿಗಳನ್ನ ಬೆಂಬಲಿಸುತ್ತಿಲ್ಲ. ಪ್ಯಾರಿಸ್ ಮೂಲದ ಸಂಸ್ಥೆಯಾದ VideoLAN ಇದನ್ನು ಅಭಿವೃದ್ಧಿಪಡಿಸಿದೆ.
ಸರ್ಕಾರವು ಇಲ್ಲಿಯವರೆಗೆ 270 ಕ್ಕೂ ಹೆಚ್ಚು ಚೀನೀ ಅಪ್ಲಿಕೇಶನ್ಗಳನ್ನು ನಿಷೇಧಿಸಿದೆ. ಅಂತಹ ಕೆಲವು ಅಪ್ಲಿಕೇಶನ್ಗಳು ಹೆಸರು ಬದಲಾಯಿಸಿಕೊಂಡು ಮತ್ತೆ ಹೊಸ ಅವತಾರದಲ್ಲಿ ಭಾರತಕ್ಕೆ ಬರುತ್ತಿವೆ. ಇತ್ತೀಚಿಗೆ PUBG ಯ ಭಾರತೀಯ ಆವೃತ್ತಿಯನ್ನು ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ಎಂದು ಕರೆಯಲಾಗಿದ್ದು, ಇದನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಮತ್ತು Google Play ಸ್ಟೋರ್ ಮತ್ತು Apple App ಸ್ಟೋರ್ನಿಂದ ತೆಗೆದುಹಾಕಲಾಗಿದೆ.