ಕಾಂಗ್ರೆಸ್ ಗೆ ವೋಟ್ ಹಾಕಿ : ಜ್ಯೋತಿರಾಧಿತ್ಯ ಸಿಂಧಿಯಾ ಎಡವಟ್ಟು ( Jyotiraditya Scindia )
ಭೋಪಾಲ್ : ಕರ್ನಾಟಕದಂತೆ ಮಧ್ಯಪ್ರದೇಶದಲ್ಲೂ ಕೂಡ ಉಪಚುನಾವಣೆ ಅಬ್ಬರ ಜೋರಾಗಿದೆ. ಈ ಅಬ್ಬರದ ಮಧ್ಯೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಜ್ಯೋತಿರಾಧಿತ್ಯ ಸಿಂಧಿಯಾ ( Jyotiraditya Scindia ) ಭಾಷಣದ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ಇದು ಬಿಜೆಪಿಗೆ ಇರಿಸುಮುರಿಸು ತಂದಿದ್ರೆ, ಕಾಂಗ್ರೆಸ್ ಗೆ ಅಸ್ತ್ರವಾಗಿದೆ.
ಗ್ವಾಲಿಯರ್ ನ ದಬ್ರಾ ಪಟ್ಟಣದಲ್ಲಿ ಬಿಜೆಪಿ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿ ಅಭ್ಯರ್ಥಿ ಇಮರ್ತಿ ದೇವಿಯವರ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಮತದಾರರನ್ನುದ್ದೇಶಿಸಿ ಮಾತನಾಡಿದ ಸಿಂಧಿಯಾ, ತಮ್ಮ ಭಾಷಣದ ಕೊನೆಗೆ ಜನರಲ್ಲಿ ನವೆಂಬರ್ 3ರ ಉಪ ಚುನಾವಣೆ ದಿನ ನಿಮ್ಮ ಮತವನ್ನು ಕೈಗೆ ಒತ್ತಿ ಎಂದು ಕೇಳಿಕೊಂಡರು. ಇದರಿಂದ ಅಲ್ಲಿದ್ದ ಬಿಜೆಪಿ ನಾಯಕರು ಒಂದು ಕ್ಷಣ ದಂಗಾದರು. ಕೂಡಲೇ ತಮ್ಮ ತಪ್ಪನ್ನು ತಿದ್ದಿಕೊಂಡ ಸಿಂಧಿಯಾ, ನಿಮ್ಮ ಮತವನ್ನು ಕಮಲದ ಗುರುತಿಗೆ ಹಾಕಿ ಎಂದು ಕೇಳಿಕೊಂಡರು.
ಇದನ್ನೂ ಓದಿ : ಡಿಕೆಶಿ ಹಸು ಅಲ್ಲ.. ದರ್ಶನ್ ಕರು ಅಲ್ಲ.. : ಬಂಡೆಗೆ ಸಾಮ್ರಾಟ್ ಡಿಚ್ಚಿ
ಇನ್ನು ಈ ವಿಡಿಯೋವನ್ನು ಮಧ್ಯಪ್ರದೇಶ ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಸಿಂಧಿಯಾರವರೇ, ಮಧ್ಯ ಪ್ರದೇಶದ ಜನರು ನವೆಂಬರ್ 3 ರಂದು ಕೈಯ ಗುರುತಿಗೆ ಮತ ಹಾಕುತ್ತಾರೆ ಎಂದು ನಿಮಗೆ ಖಂಡಿತಾ ಭರವಸೆ ಕೊಡುತ್ತಾರೆ ಎಂದು ಬರೆದುಕೊಂಡಿದ್ದಾರೆ.
https://twitter.com/i/status/1322630165910884352
ಈ ವಿಚಾರವಾಗಿ ಬಿಜೆಪಿ ವಕ್ತಾರ ಪಂಕಜ್ ಚತುರ್ವೇದಿ ಪ್ರತಿಕ್ರಿಯಿಸಿದ್ದು, ಅಂತಹ ಪ್ರಮಾದಗಳು ಸರ್ವೇ ಸಾಮಾನ್ಯ. ಇವು ಯಾರಿಂದಲಾದರೂ ನಡೆಯುತ್ತದೆ. ಅದು ಬಾಯ್ತಪ್ಪಿ ಆಡಿದ ಮಾತಾಗಿದೆ. ಅದನ್ನು ಸಿಂಧಿಯಾ ತಕ್ಷಣವೇ ಸರಿಪಡಿಸಿದ್ದಾರೆ. ಪ್ರತಿಯೊಬ್ಬರಿಗೂ ಗೊತ್ತು ಅವರು ಬಿಜೆಪಿ ನಾಯಕರು ಎಂದು ಎಂದಿದ್ದಾರೆ.
ಇದನ್ನೂ ಓದಿ : ವಂಚನೆ, ಬೆನ್ನಿಗೆ ಚೂರಿ ಹಾಕುವುದು ಕಾಂಗ್ರೆಸ್ ಪರಂಪರೆ : ಆರ್.ಅಶೋಕ್
ಇನ್ನು 18 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಈ ವರ್ಷ ಮಾರ್ಚ್ ನಲ್ಲಿ ಬಿಜೆಪಿಗೆ ಸೇರಿದ್ದರು. ಇದರಿಂದಾಗಿ ಕಮಲ್ ನಾಥ್ ಸರ್ಕಾರ ಮುರಿದು ಬಿದ್ದು ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಅಸ್ತಿತ್ವಕ್ಕೆ ಬಂತು.
ಮಧ್ಯ ಪ್ರದೇಶದ 28 ಕ್ಷೇತ್ರಗಳಿಗೆ ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel