WIvsIND | ನತದೃಷ್ಟ ವಾಷಿಂಗ್ ಟನ್ ಸುಂದರ್ washington-sundar-ruled-out-t20-series saaksha tv
ಐದು ವರ್ಷಗಳ ನಂತರ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯೊಂದಿಗೆ ಏಕದಿನಕ್ಕೆ ರೀ ಎಂಟ್ರಿ ಕೊಟ್ಟಿದ್ದ ವಾಷಿಂಗ್ಟನ್ ಸುಂದರ್ ಗೆ ದುರದೃಷ್ಟ ಬೆನ್ನು ಬಿದ್ದಿದೆ.
ಏಕದಿನ ಸರಣಿಯಲ್ಲಿ ವಾಷಿಂಗ್ ಟನ್ ಸುಂದರ್ ಉತ್ತಮ ಬ್ಯಾಟಿಂಗ್ ನೊಂದಿಗೆ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿ ಎಲ್ಲರ ಗಮನ ಸೆಳೆದಿದ್ದರು.
ವಿಂಡೀಸ್ ಸರಣಿಯಲ್ಲಿ ಮೂರು ಏಕದಿನ ಪಂದ್ಯಗಳಲ್ಲಿ 64 ರನ್ ಗಳಿಸಿದ್ದ ವಾಷಿಂಗ್, ನಾಲ್ಕು ವಿಕೆಟ್ ಕಬಳಿಸಿದ್ದರು.
ಮುಖ್ಯವಾಗಿ ಅಂತಿಮ ಏಕದಿನ ಪಂದ್ಯದಲ್ಲಿ 33 ರನ್ ಗಳಿಸಿದ್ದ ಸುಂದರ್.. ಏಳನೇ ವಿಕೆಟ್‌ಗೆ ದೀಪಕ್ ಚಹರ್ ಜೊತೆ 60 ರನ್‌ಗಳ ಜೊತೆಯಾಟವಾಡಿದ್ದರು.
ರೀ ಎಂಟ್ರಿಯಲ್ಲಿ ಸೂಪರ್ ಎನಿಸಿಕೊಂಡಿದ್ದ ಸುಂದರ್ ಇದೀಗ ಮತ್ತೆ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.
ವಿಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ವಾಷಿಂಗ್ ಟನ್ ಸುಂದರ್, ಗಾಯಗೊಂಡಿದ್ದಾರೆ.
ಹೀಗಾಗಿ ಟಿ 20 ಸರಣಿಯಿಂದ ಹೊರ ಬಿದ್ದಿದ್ದಾರೆ. ಸುಂದರ್ ಬದಲಿಗೆ ಲೆಗ್ ಸ್ಪಿನ್ನರ್ ಕುಲದೀಪ್ ಯಾದವ್ ಆಯ್ಕೆಯಾಗಿದ್ದಾರೆ.
ಈಗಾಗಲೇ ಗಾಯಗೊಂಡಿರುವ ಕೆಎಲ್ ರಾಹುಲ್ ಹಾಗೂ ಅಕ್ಷರ್ ಪಟೇಲ್ ಅವರನ್ನು ಪುನರ್ವಸತಿ ಹೆಸರಿನಲ್ಲಿ ಟಿ20 ಸರಣಿಯಿಂದ ಹೊರಗಿಟ್ಟಿದ್ದಾರೆ.
ಕೆಎಲ್ ರಾಹುಲ್ ಹಾಗೂ ಅಕ್ಷರ್ ಪಟೇಲ್ ಸ್ಥಾನಕ್ಕೆ ದೀಪಕ್ ಹೂಡಾ ಹಾಗೂ ರುತುರಾಜ್ ಆಯ್ಕೆಯಾಗಿದ್ದಾರೆ. ಫೆಬ್ರವರಿ 16, 18 ಮತ್ತು 20 ರಂದು ಮೂರು ಟಿ20 ಪಂದ್ಯಗಳನ್ನು ಆಡಲಿದೆ.