ರಿಷಬ್ ಬೇಡ.. ದಿನೇಶ್ ಕಾರ್ತಿಕ್ ಇರಲಿ
ಟಿ 20 ವಿಶ್ವಕಪ್ ಟೂರ್ನಿ ಹಿನ್ನೆಲೆಯಲ್ಲಿ ಭಾರತ ತಂಡ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಬಗ್ಗೆ ಟೀಂ ಇಂಡಿಯಾದ ಮಾಜಿ ಬ್ಯಾಟರ್ ವಾಸೀಂ ಜಾಫರ್ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.
ಪಂತ್ ಅವರನ್ನ ಮೆಗಾ ಈವೆಂಟ್ ನಲ್ಲಿ ಆಡಿಸದೇ ಇದ್ದರೇ ಚೆನ್ನಾಗಿರುತ್ತದೆ ಎಂದು ಹೇಳಿದ್ದಾರೆ. ಅವರ ಬದಲಿಗೆ ಟೀಂ ಇಂಡಿಯಾದ ಹಿರಿಯ ಬ್ಯಾಟರ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಎಂದಿದ್ದಾರೆ.
ರಿಷಬ್ ಪಂತ್ ಅವರನ್ನು ಪ್ಲೇಯಿಂಗ್ ಇಲೆವೆನ್ ನಲ್ಲಿ ಆಡಿಸಬೇಕೋ ಬೇಡವೋ ಎಂಬುದರ ಬಗ್ಗೆ ಟೀಂ ಮ್ಯಾನೇಜ್ ಮೆಂಟ್ ಒಂದು ಸ್ಪಷ್ಟತೆಗೆ ಬರಬೇಕು. ಟೆಸ್ಟ್, ಏಕದಿನ ಮ್ಯಾಚ್ ನಲ್ಲಿ ಟೀಂ ಇಂಡಿಯಾವನ್ನು ಗೆಲ್ಲಿಸುವ ತಾಕತ್ತು ಪಂತ್ ಗೆ ಇದೆ. ಆದ್ರೆ ಟಿ 20 ಯಲ್ಲಿ ರಿಷಬ್ ಅಂಕಿಅಂಶಗಳು ಹೇಳಿಕೊಳ್ಳುವಂತೆ ಇಲ್ಲ.
ಐಪಿಎಲ್ ನಲ್ಲಿ ರಿಷಬ್ ಪಂತ್ ಗಿಂತ ದಿನೇಶ್ ಕಾರ್ತಿಕ್ ಅವರ ದಾಖಲೆ ಚೆನ್ನಾಗಿದೆ. ನನ್ನ ಪ್ರಕಾರ ಬ್ಯಾಟಿಂಗ್ ಆರ್ಡರ್ ನಲ್ಲಿ ನಾಲ್ಕ ಅಥವಾ ಐದನೇ ಸ್ಥಾನದಲ್ಲಿ ರಿಷಬ್ ಸೂಟ್ ಆಗುವುದಿಲ್ಲ. ಓಪನರ್ ಆಗಿ ಪಂತ್ ಕಣಕ್ಕಿಳಿದರೇ ಉತ್ತಮ ಫಲಿತಾಂಶ ಇರುತ್ತದೆ ಎಂದು ಹೇಳಿದರು.
ಆದ್ರೆ ಸದ್ಯ ಟೀಂ ಇಂಡಿಯಾದಲ್ಲಿ ಓಪನರ್ ಗಳ ಸ್ಥಾನ ಭರ್ತಿಯಾಗಿದೆ. ಹೀಗಾಗಿ ರಿಷಬ್ ಬದಲಿಗೆ ದಿನೇಶ್ ಕಾರ್ತಿಕ್ ತಂಡದಲ್ಲಿ ಆಡಬೇಕು ಎಂದಿದ್ದಾರೆ ವಾಸೀಂ ಜಾಫರ್.