ದಿನೇಶ್ ಕಾರ್ತಿಕ್ ಕುತ್ತಿಗೆ ಹಿಡಿದ ರೋಹಿತ್ ಶರ್ಮಾ – ವಿಡಿಯೋ ವೈರಲ್
ಮಂಗಳವಾರ ಮೊಹಾಲಿಯಲ್ಲಿ ನಡೆದ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್ಗಳಿಂದ ಸೋಲನುಭವಿಸಿತು. ಉಭಯ ತಂಡಗಳು ನಡೆಸಿದ ಭರ್ಜರಿ ಬ್ಯಾಟಿಂಗ್ ನಿಂದ ಬೌಲರ್ ಗಳು ಮಾತ್ರ ಹೈರಾಣಾಗಿದ್ದಾರೆ.
ಪಂದ್ಯದ ವೇಳೆ ಆಕರ್ಷಕ ಸನ್ನಿವೇಶವೊದು ನಡೆದು ಹೋಯಿತು. ಇದು ತಮಾಷೆಗೆ ನಡೆದದ್ದಾದರೂ ನೊಡುವವರಿಗೆ ಇದೊಂದು ಅನಾಹುತವಾದಂತೆ ಕಾಣಿಸಿತು .
12 ಓವರ್ ನಲ್ಲಿ ಉಮೇಶ್ ಯಾದವ್ ಎಸೆದ ಚೆಂಡು ಸ್ಮಿತ್ ಬ್ಯಾಟ್ ಗೆ ತಾಗಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಗ್ಲೌಸ್ ಸೇರಿತ್ತು. ಈ ವೇಳೆ ನಾಯಕ ರೋಹಿತ್ ಶರ್ಮಾ DRS ತೆಗೆದುಕೊಂಡಾಗ ಸ್ಮಿತ್ ಔಟ್ ನೀಡಿದರು. ಇದರ ಬೆನ್ನಲ್ಲೆ ಉಮೇಶ್ ಯಾದವ್ ಎಸೆದ ಮತ್ತೊಂದು ಎಸೆತ ಗ್ಲೇನ್ ಮ್ಯಾಕ್ಸ್ವೆಲ್ ಬ್ಯಾಟನ್ನು ವಂಚಿಸಿ ಕೀಪರ್ ಕೈ ಸೇರಿತ್ತು. ಬೌಲರ್ ಉಮೇಶ್ ಯಾದವ್ ಮನವಿ ಮಾಡಿದರಾದರೂ ಅಂಪೈರ್ ನಿರಾಕರಿಸಿದರು. ಹೀಗಾಗಾ ನಾಯಕ ರೋಹಿತ್ ಶರ್ಮಾ ಡಿ ಆರ್ ಎಸ್ ತೆಗೆದುಕೊಳ್ಳಲು ದಿನೇಶ್ ಕಾರ್ತಿಕ ಸಹಾಯ ಕೇಳಿದರೂ ನಂತ ರಿವ್ಯೂ ಪಡೆದುಕೊಂಡರು.
अरे, कार्तिक भाई तुम भी न… 😂#INDvsAUS 🏏 #INDvAUS @DineshKarthik @ImRo45 https://t.co/FZfUZftyZZ pic.twitter.com/ERnH8gmcXi
— Ashish Mishra (@AshishMisraRBL) September 20, 2022
ನಿರೀಕ್ಷೆಯಂತೆ ರಿಪ್ಲೇನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಅವರ ಬ್ಯಾಟ್ಗೆ ಚೆಂಡು ಬಡಿದಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಹೀಗಾಗಿ ಮಾಕ್ಸವೆಲ್ ಸಹ ಕಡಿಮೆ ಸ್ಕೋರ್ ಗೆ ಮರಳಬೇಕಾಯಿತು. ಆದರೆ ಅತ್ತ ಮ್ಯಾಕ್ಸ್ವೆಲ್ ಔಟ್ ಎಂದು ತೀರ್ಪು ಬರುತ್ತಿದ್ದಂತೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ದಿನೇಶ್ ಕಾರ್ತಿಕ್ ಅವರ ಕುತ್ತಿಗೆಯನ್ನು ಹಿಡಿದು ತಮಾಷೆಗೆ ಆಕ್ರೋಶ ವ್ಯಕ್ತಪಡಿಸುವಂತೆ ನಟಿಸಿದರು. ಇದೀಗ ರೋಹಿತ್ ಶರ್ಮಾ ದಿನೇಶ್ ಕಾರ್ತಿಕ್ ಅವರ ಕುತ್ತಿಗೆ ಹಿಡಿಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.