ವೀಕೆಂಡ್ ಕರ್ಫ್ಯೂ : ಓಲಾ‌ – ಊಬರ್ ಚಾಲಕರ ಜೀವನಕ್ಕೆ ಕಂಟಕ

1 min read
Ola and Ubar President Saaksha tv

ವೀಕೆಂಡ್ ಕರ್ಫ್ಯೂ : ಓಲಾ‌ – ಊಬರ್ ಚಾಲಕರ ಜೀವನಕ್ಕೆ ಕಂಟಕ Saaksha tv

ಬೆಂಗಳೂರು: ನಗರದಲ್ಲಿ ದಿನೇ ದಿನೇ ಕೊರೊನಾ ಪ್ರಕ್ರರಣಗಳು ದ್ವಿಗುಣವಾಗುತ್ತಿದ್ದು ರಾಜ್ಯ ಸರಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ, ಇದರಿಂದಾಗಿ ಅಸಮಾಧಾನಗೋಡ ಓಲಾ‌ ಮತ್ತು ಊಬರ್ ಸಂಘಟನೆಯ ಅಧ್ಯಕ್ಷ ತನ್ವೀರ್  ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಚಾಲಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಆಟೋ ಮತ್ತು ಟ್ಯಾಕ್ಸಿ ಚಾಲಕರ ಜೀವನ ನಶಿಸಿ ಹೋಗುತ್ತಿದೆ, ಇದರಿಂದ ಅವರ ಕುಟುಂಬ ಬೀದಿಗೆ ಬರುತ್ತದೆ, ಇದು ದುಃಖಕರ ಸಂಗತಿಯಾಗಿದೆ, ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ಲಾಕ್ ಡೌನ್ ಒಂದೇ ಮಾರ್ಗನಾ, ವ್ಯಾಕ್ಸಿನ್ ತಗೊಂಡಿದ್ದು ಪ್ರಯೋಜನವಿಲ್ವ ಎಂದು ಪ್ರಶ್ನಿಸಿದ್ದಾರೆ.

ಇದೆ ವೇಳೆ ಶನಿವಾರ ಭಾನುವಾರ ನೇ ಚಾಲಕರಿಗೆ ಹೆಚ್ಚಿನ ಆದಾಯ ದೊರೆಯುತ್ತದೆ ಈ ದಿನಗಳಲ್ಲಿ ಕರ್ಪ್ಯು ಜಾರಿಗೊಳಿಸಿರುವುದು ಸರಿ ಅಲ್ಲ. 2000 ಕೇಸ್ ಬಂದಿದೆ ಅಂತ ಹೇಳುತ್ತಿದ್ದಾರೆ ಆದರೆ ಆಸ್ಪತ್ರೆಗಳಲ್ಲಿ ದಾಖಲಾತಿಗಳಿಲ್ಲ. ಕರ್ಪ್ಯು ಜಾರಿ ಮಾಡಿ ಮತ್ತೆ ನಮ್ಮನ್ನು ಆರ್ಥಕ ಸಂಕಷ್ಟಕ್ಕೆ ದೂಡುತ್ತಿದ್ದಾರೆ ಎಂದು ನೋವು ಹೊರ ಹಾಕಿದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd