Weekend With Ramesh-5 : ಎರಡನೇ ಅತಿಥಿಯಾಗಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಎಂಟ್ರಿ…
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಸೀಸನ್ 5 ಗೆ ಅದ್ದೂರಿಯಾಗಿ ಚಾಲನೆ ನೀಡಲಾಗಿದೆ. ಶೋ ನ ಮೊದಲ ಅತಿಥಿಯಾಗಿ ರಮ್ಯಾ ಎಂಟ್ರಿ ನೀಡಿದ್ದರು. ಇದೀಗ ಎರಡನೇ ಅತಿಥಿಯಾಗಿ ಭಾರತದ ಮೈಕಲ್ ಜಾಕ್ಸನ್ ಎಂಟ್ರಿ ಕೊಟ್ಟಿದ್ದಾರೆ. ಈ ಫ್ರೋಮೋವನ್ನ ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.
ನಟ, ನಿರ್ದೇಶಕ, ನೃತ್ಯ ನಿರ್ದೇಶಕ ಪ್ರಭುದೇವ ಅವರು ಬೆಳೆದು ಬಂದ ದಾರಿಯನ್ನ ಶೋ ನಲ್ಲಿ ನೋಡಬಹುದಾಗಿದೆ. ಮುಂಬರುವ ಏಪ್ರಿಲ್ 1 & 2ರಂದು ಶನಿವಾರ ಮತ್ತು ಭಾನುವಾರ ರಾತ್ರಿ 9 ಕ್ಕೆ ಪ್ರಭುದೇವ ಅವರ ಸಂಚಿಕೆ ಪ್ರಸಾರವಾಗಲಿದೆ.
ಪ್ರಭುದೇವ ತಂದೆ ಮೂಗೂರು ಸುಂದರ್ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅಲ್ಲದೇ ಕುಟುಂಬ ಸಹ ಆಗಮಿಸಿದ್ದಾರೆ. ಪ್ರಭುದೇವ ಅಂದರೇನೇ ಡ್ಯಾನ್ಸ್ ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲೂ ಪ್ರಭುದೇವ ಭರ್ಜರಿಯಾಗಿ ಡ್ಯಾನ್ಸ್ ಸ್ಟೆಪ್ ಹಾಕಿದ್ದಾರೆ. ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ತಂದೆ ಮೂಗೂರ್ ಸುಂದರ್ ಜೊತೆ ಹೆಜ್ಜೆ ಹಾಕಿದ್ದಾರೆ. ನಿರೂಪಕ ರಮೇಶ್ ಅರವಿಂದ್ ಜೊತೆಗೂ ಮೂನ್ ವಾಕ್ ಮಾಡಿದ್ದಾರೆ.
Weekend With Ramesh-5 : Entry of Indian Michael Jackson Prabhudev as the second guest…