weekend with Ramesh : ಸೀಸನ್ 5 ಕ್ಕೆ ಮುಹೂರ್ತ ಫಿಕ್ಸ್ ; ಮಾರ್ಚ್ 25 ಕ್ಕೆ ಮೊದಲ ಎಪಿಸೋಡ್….
ನಟ ರಮೇಶ್ ಅರವಿಂದ್ ನಡೆಸಿಕೊಡುವ ಜೀ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ 5 ನೇ ಸೀಸನ್ ಆರಂಭಕ್ಕೆ ಕೊನೆಗೂ ಕ್ಷಣಗಣನೆ ಪ್ರಾರಂಭವಾಗಿದೆ. ಸೀಸನ್ 5 ಆರಂಭವಾಗಲಿದೆ ಎಂದು ಸುದ್ದಿ ತಿಳಿದಾಗಹಿನಿಂದ ಯಾವಗ ಬರಲಿದೆ ಮತ್ತು ಅತಿಥಿಗಳು ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ.
ನಟ ರಮೇಶ್ ಅರವಿಂದ್ 4 ಸೀಸನ್ ಗಳನ್ನ ಯಶಸ್ವಿಯಾಗಿ ಮುಗಿಸಿ 5 ನೇ ಸೀಸನ್ ಗೆ ಕಾಲಿಟ್ಟಿದ್ದಾರೆ. ಒಂದು ತಿಂಗಳುಗಳಿಂದ ಪ್ರೋಮೋ ಮೂಲಕ ಕುತೂಹಲವನ್ನ ಹಿಮ್ಮಡಿಗೊಳಿಸಿದ್ದ ಜೀ ತಂಡ ಕೊನೆಗೂ ಡೇಟ್ ಅನೌನ್ಸ್ ಮಾಡಿದ್ದು, ಮಾರ್ಚ್ 25 ಶನಿವಾರದಂದು ರಾತ್ರಿ 9 ಗಂಟೆಯಿಂದ ಸೀಸನ್ 5 ರ ಮೊದಲ ಎಪಿಸೋಡ್ ಪ್ರಸಾರವಾಗಲಿದೆ. ಆದರೇ ಮೊದಲ ಎಪಿಸೋಡ್ ನ ಅತಿಥಿ ಯಾರು ಎಂಬುದು ಇನ್ನೂ ಕುತೂಹಲಕಾರಿಯಾಗಿಯೇ ಉಳಿದಿದೆ. ಈ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಪ್ರೋಮೊ ಹಂಚಿಕೊಳ್ಳುವ ಮೂಲಕ ಖಚಿತಪಡಿಸಿದೆ ಜೀ ಕನ್ನಡ ವಾಹಿನಿ.
ಈ ಬಾರಿ ಅತಿಥಿಗಳಾಗಿ ಯಾರು ಬರಬಹುದು ಎಂಬ ಕುತೂಹಲ ಹೆಚ್ಚಾಗಿದ್ದು, ಅಶ್ವಿನಿ ಪುನೀತ್ ರಾಜ್‌ಕುಮಾರ್, ರಿಷಭ್ ಶೆಟ್ಟಿ, ಪ್ರಭುದೇವ, ಖ್ಯಾತ ಯೂಟ್ಯೂಬರ್ ಡಾ. ಬ್ರೋ, ಡಾಲಿ ಧನಂಜಯ್, ಧ್ರುವ ಸರ್ಜಾ, ಕ್ರಿಕೆಟಿಗ ಕೆ.ಎಲ್ ರಾಹುಲ್, ರಚಿತಾ ರಾಮ್, ಅನುಶ್ರೀ, ರಮ್ಯಾ ಮೊದಲಾದವರು ಭಾಗವಹಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೇ ಜೀ ವಾಹಿನಿ ತಂಡ ಮಾತ್ರ ಹೆಸರು ಬಹಿರಂಗಗೊಳಿಸಿದೇ ಕುತೂಹಲವನ್ನ ಕಾಯ್ದುಕೊಂಡಿದೆ.
Weekend with Ramesh: Muhurta Fix for Season 5; First episode on March 25th….