ಬಾಯಲ್ಲೇನು ಇಟ್ಕೊಂಡಿದೀರಾ ಎನ್ನುತ್ತಾ ಸ್ಕೂಟರ್ ಏರಿ ಸವಾರಿ ಹೊರಟ ‘ದೀದಿ’..!
ಕೋಲ್ಕತ: ದೇಶದಲ್ಲಿ ಶತಕ ಬಾರಿಸಿರುವ ಪೆಟ್ರೋಲ್ ಡೀಸೆಲ್ ದರ ಏರಿಕೆಯ ಪರ್ವ ನಿಲ್ಲವ ಲಕ್ಷಣ ಕಾಣಿಸುತ್ತಿಲ್ಲ. ಇತ್ತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂಧನ ದರ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕುತ್ತಿಗೆಗೆ ಪ್ಲೇಕಾರ್ಡ್ ನೇತು ಹಾಕಿಕೊಂಡು ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಸವಾರಿ ಮಾಡಿದ್ದಾರೆ. ಪ್ಲೇ ಕಾರ್ಡ್ ನಲ್ಲಿ ‘ನಿಮ್ಮ ಬಾಯಲ್ಲಿ ಏನು ತುಂಬಿಕೊಂಡಿದ್ದೀರಿ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ದರ ಏರಿಕೆಯಾಗುತ್ತಿದೆ’ ಎನ್ನುವ ಬರಹವು ಕಂಡುಬಂದಿದೆ.
ಮಹಿಳೆಯ ಹೃದಯವನ್ನ ಆಲೂಗಡ್ಡೆ ಜೊತೆ ಬೇಯಿಸಿ ಉಣಬಡಿಸಿ ತಿಂದ ರಾಕ್ಷಸ..!
ಮಮತಾ ಬ್ಯಾಜರ್ಜಿ ಅವರನ್ನು ಸಚಿವ ಫಿರ್ಹಾದ್ ಹಕೀಮ್ ಅವರು ಸ್ಕೂಟರ್ನಲ್ಲಿ ಕೂರಿಸಿಕೊಂಡು ಸವಾರಿ ನಡೆಸಿದ್ದಾರೆ. ಮಮತಾ ಅವರು ದಾರಿಯುದ್ದಕ್ಕೂ ರಸ್ತೆ ಬಳಿ ಸೇರಿದ್ದ ಜನರಿಗೆ ಕೈ ಬೀಸುತ್ತಾ ಸಾಗಿದ್ದಾರೆ. ದೇಶದಲ್ಲಿ ಮೋದಿ ಸರ್ಕಾರ ಬರುವಾಗ ಬಂದ ನಂತರ ಇಂಧನ ಬೆಲೆ ಯಾವ ರೀತಿಯಲ್ಲಿ ವ್ಯತ್ಯಾಸವಾಗಿದೆಯನ್ನುವುದನ್ನು ನೀವೇ ನೋಡಬಹುದು. ಮೋದಿ ಮತ್ತು ಅಮಿತ್ ಷಾ ಜೋಡಿ ದೇಶವನ್ನು ಮಾರಾಟ ಮಾಡುತ್ತಿದೆ. ಬಿಜೆಪಿ ದೇಶದ್ರೋಹಿಗಳ ಪಕ್ಷ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶ್ ವಾಸಿಯೋ ಗಮನಿಸಿ : ಬೆಲೆ ಏರಿಕೆ ಖಂಡಿಸಿ ನಾಳೆ ಭಾರತ್ ಬಂದ್