ಪಶ್ಚಿಮ ಬಂಗಾಳ – ಇಂದು ಸಂಜೆಯಿಂದ ಕಂಟೈನ್‌ಮೆಂಟ್ ವಲಯಗಳಲ್ಲಿ ಹೊಸ ಲಾಕ್‌ಡೌನ್

1 min read

ಪಶ್ಚಿಮ ಬಂಗಾಳ – ಇಂದು ಸಂಜೆಯಿಂದ ಕಂಟೈನ್‌ಮೆಂಟ್ ವಲಯಗಳಲ್ಲಿ ಹೊಸ ಲಾಕ್‌ಡೌನ್

ಕೊಲ್ಕತ್ತಾ, ಜುಲೈ 9: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಸಂಜೆ 5 ಗಂಟೆಯಿಂದ ರಾಜ್ಯದ ಕಂಟೈನ್‌ಮೆಂಟ್ ವಲಯಗಳಲ್ಲಿ ಹೊಸ ಲಾಕ್‌ಡೌನ್ ಅನ್ನು ಜಾರಿಗೊಳಿಸಿದ್ದಾರೆ. ಲಾಕ್‌ಡೌನ್ ಏಳು ದಿನಗಳವರೆಗೆ ಜಾರಿಯಲ್ಲಿರುತ್ತದೆ ಮತ್ತು ಅಗತ್ಯವಿದ್ದರೆ ವಿಸ್ತರಿಸಲಾಗುವುದು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇಡೀ ಜಿಲ್ಲೆಯನ್ನು ಲಾಕ್ ಮಾಡಲು ಸಾಧ್ಯವಿಲ್ಲ ಎಂದು ಅವರು ತಮ್ಮ ಅಧಿಕಾರಿಗಳು ಮತ್ತು ಸರ್ಕಾರಿ ಆಸ್ಪತ್ರೆಗಳ ವೈದ್ಯರೊಂದಿಗಿನ ವರ್ಚುವಲ್ ಸಭೆಯಲ್ಲಿ ಪಟ್ಟಿಯನ್ನು ಪರಿಶೀಲಿಸಿದ ನಂತರ ಹೇಳಿದ್ದು ಈ ಪಟ್ಟಿಯನ್ನು ಯಾರು ಸಿದ್ಧಪಡಿಸಿರುವುದು? ಮತದಾರರ ಪಟ್ಟಿಯ ಆಧಾರದ ಮೇಲೆ ಇದನ್ನು ಮಾಡಲಾಗಿದೆಯೇ? ನೀವು ಸಂಪೂರ್ಣ ವಾರ್ಡ್‌ಗಳನ್ನು ಸೇರಿಸಿದ್ದೀರಿ. ಇದು ಸರಿಯಾಗಿಲ್ಲ. ಪುನಃ ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ‌ಸೂಚಿಸಿದರು.
ಕಂಟೈನ್ ಮೆಂಟ್ ಝೋನ್ ಗಳನ್ನು ಪುನರ್ ಪರಿಷ್ಕರಿಸಿದ ಅವರು ಕಡಿಮೆ ಸೋಂಕು ಇರುವ ಪ್ರದೇಶಗಳನ್ನು ಪಟ್ಟಿಯಿಂದ ತೆರವುಗೊಳಿಸಿದರು ಮತ್ತು ಕೊರೋನವೈರಸ್ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡಿರುವ ಉತ್ತರ ಬಂಗಾಳದ ಸಿಲಿಗುರಿ ಮತ್ತು ಮಾಲ್ಡಾ ಬಗ್ಗೆ ಗಮನಹರಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು. ‌
ಜುಲೈ 1 ರಿಂದ ರಾಜ್ಯದಲ್ಲಿ 5,278 ಹೊಸ ಪ್ರಕರಣಗಳು ಮತ್ತು 136 ಸಾವುಗಳು ಸಂಭವಿಸಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd