ವಿಶ್ವದ 3ನೇ ಅತಿ ಉದ್ದದ ರೈಲ್ವೆ ಫ್ಲಾಟ್ ಫಾರ್ಮ್ ಇರುವುದು ಭಾರತದ ಪಶ್ಚಿಮ ಬಂಗಾಳದಲ್ಲಿ
ಈ ಪ್ರಸಿದ್ಧ ರೈಲ್ವೆ ನಿಲ್ದಾಣವನ್ನು 1898 ರಲ್ಲಿ ಸ್ಥಾಪನೆಯಾಯ್ತು. ಅಂದಿನಿಂದ ಪಶ್ಚಿಮ ಬಂಗಾಳವನ್ನು ದಕ್ಷಿಣ ಭಾರತಕ್ಕೆ ಸಂಪರ್ಕಿಸುತ್ತಿದೆ. ಖರಗ್ ಪುರವು ವಿಶ್ವದ 3ನೇ ಅತಿ ಉದ್ದದ ರೈಲ್ವೆ ಫ್ಲಾಟ್ ಫಾರ್ಮ್ ಹೊಂದಿರುವ ಹೆಗ್ಗಳಿಕೆ ಪಾತ್ರವಾಗಿದೆ. ಇದರ ವಿಸ್ತೀರ್ಣವು ,072.5 ಮೀ (3,519 ಅಡಿ). ಆದರೆ, ಗೋರಖ್ಪುರ ರೈಲು ನಿಲ್ದಾಣವನ್ನು ಮರುರೂಪಿಸಿದ ನಂತರ, ಅದು ಮೊದಲನೇ ಸ್ಥಾನ ಪಡೆಯಿತು. ಖರಗ್ಪುರ ರೈಲು ನಿಲ್ದಾಣವು ಅತಿ ಉದ್ದದ ರೈಲು ನಿಲ್ದಾಣದಿಂದ 3ನೇ ಸ್ಥಾನಕ್ಕೆ ಕುಸಿಯಿತು. ಇಂದು, ಇದು ವಿಶ್ವದ ಮೂರನೇ ಅತಿ ಉದ್ದದ ರೈಲ್ವೆ ಪ್ಲಾಟ್ಫಾರ್ಮ್ ಆಗಿದೆ. ಅಂದ್ಹಾಗೆ ಕೇರಳದ ಕೊಲ್ಲಂ ಜಂಕ್ಷನ್ 2ನೇ ಸ್ಥಾನವನ್ನು ಹೊಂದಿದೆ. ಮೂರು ಭಾರತೀಯ ರೈಲ್ವೆ ನಿಲ್ದಾಣಗಳು – ಗೋರಖ್ಪುರ, ಕೊಲ್ಲಂ ಮತ್ತು ಖರಗ್ಪುರ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್ಫಾರ್ಮ್ಗಳನ್ನ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸುಮಾರು 164 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಜನ ಮೊದಲ ಬಾರಿಗೆ ರೈಲಿನಲ್ಲಿ ಪ್ರಯಾಣಿಸಿದ್ದರು.. ಇಂದು ರೈಲುಗಳು , ಅಲ್ಲಿನ ಜನರ ಜೀವನದ ಅವಿಭಾಜ್ಯ ಅಂಗವಾಗಿದೆ. ಕೇವಲ ಪಶ್ಚಿಮ ಬಂಗಾಳ ಮಾತ್ರವೇ ಅಲ್ಲ.. ಇತರೇ ಬಹುತೇಕ ರಾಜ್ಯಗಳು ಕೇವಲ ಸಾರಿಗೆಯ ವ್ಯವಸ್ತೆ ಅನ್ನೋದಕ್ಕಿಂತ ಲಕ್ಷಾಂತರ ಜನರ ಜೀವನದ ಅವಿಭಾಜ್ಯ ಅಂಗವೇ ಆಗಿದೆ.. ಫ್ಲಾಟ್ ಫಾರ್ಮ್ ಅಂಗಡಿಗಳು ಹೋಟೆಲ್ ಗಳು , ಕೂಲಿ ಕಾರ್ಮಿಕರು , ಟೀ ಬಿಸ್ಕೆಟ್ ಸ್ನಾಕ್ಸ್ ಮಾಡುವವರಿಂದ ಹಿಡಿದು ಟ್ಯಾಕ್ಸಿ ಆಟೋ ಚಾಲಕರು ರೈಲುನಿಲ್ದಾಣಗಳನ್ನೇ ಅವಲಂಬಿತರಾಗಿ ಬದುಕು ಕಟ್ಟಿಕೊಂಡಿದ್ದಾರೆ.
ಇನ್ನೂ ರೈಲು ನಿಲ್ದಾಣಗಳು ಅದ್ರಲ್ಲೂ ನಿಗೂಢತೆ ಅಥವ ರಹಸ್ಯಗಳು ಹಾಗೂ ವಿಭಿನ್ನತೆಗಳಿಂದ ಕೂಡಿದ ರೈಲು ನಿಲ್ದಾಣಳ ಬಗ್ಗೆ ನಾವೇನಾದರೂ ಮಾತನಾಡಿದ್ರೆ ಮೊದಲಿಗೆ ಪಶ್ಚಿಮ ಬಂಗಾಳವೇ ನೆನಪಾಗೋದು.. ಕಾರಣ ಇಲ್ಲಿನ ಕೆಲ ರೈಲು ನಿಲ್ದಾಣಗಳು ಸಾಕಷ್ಟು ರಹಸ್ಯಮಯವಾಗಿದೆ.. ಕೆಲವೊಂದು ವಿಭಿನ್ನವಾಗಿದೆ.. ಅದರದ್ದೇ ಆದ ವಿಶೇಷತೆಗಳಿಂದ ಗುರುತಿಸಿಕೊಂಡಿದೆ… ಪಶ್ಚಿಮ ಬಂಗಾಳದ ಅನೇಕ ಭಾರತೀಯ ರೈಲ್ವೆ ನಿಲ್ದಾಣಗಳು ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿವೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.