ಪಶ್ಚಿಮ ಬಂಗಾಳದಲ್ಲಿ ಗಲಭೆಗೆ ದೀದಿ ಸೋಲು ಕಾರಣ : ಶೋಭಾ

1 min read
Shobha Declare health emergency

ಪಶ್ಚಿಮ ಬಂಗಾಳದಲ್ಲಿ ಗಲಭೆಗೆ ದೀದಿ ಸೋಲು ಕಾರಣ : ಶೋಭಾ

ಉಡುಪಿ : ಪಶ್ಚಿಮ ಬಂಗಾಳದಲ್ಲಿ ಮತೀಯ ಗಲಭೆಗೆ ಪ್ರಚೋದನೆ ಕೊಡುತ್ತಿದ್ದಾರೆ. ಮಮತಾ ಸೋತು ಹತಾಶರಾಗಿದ್ದೇ ಗಲಭೆಗೆ ಕಾರಣ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ನಡೆದ ಗಲಭೆ ವಿರೋಧಿಸಿ ಉಡುಪಿ ಬಿಜೆಪಿ ಕಚೇರಿ ಮುಂದೆ ಬಿಜೆಪಿ ಪ್ರತಿಭಟನೆ ನಡೆಸಿತು. ಇದರಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ನಾಯಕರು ಭಾಗಿಯಾಗಿದ್ದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಪಶ್ಚಿಮ ಬಂಗಾಳದಲ್ಲಿ ಮತೀಯ ಗಲಭೆಗೆ ಪ್ರಚೋದನೆ ಕೊಡುತ್ತಿದ್ದಾರೆ. ಒಂದು ಕೋಮಿನ ಜನ ಕೊಲೆ, ಗೂಂಡಾಗಿರಿಯಲ್ಲಿ ತೊಡಗಿದ್ದಾರೆ.

shobha karandlaje

ಬಿಜೆಪಿ ಕಚೇರಿ, ಎಬಿವಿಪಿ ಕಚೇರಿ ಗೆ ಬೆಂಕಿ ಹಚ್ಚುತ್ತಿದ್ದಾರೆ. ಇಂತಹ ಗೂಂಡಾಗಿರಿ ದೇಶ ಹಿಂದೆಂದೂ ಕಂಡಿಲ್ಲ.

ಮಮತಾ ಬ್ಯಾನರ್ಜಿ ಪ್ರಚೋದನೆ ಜೊತೆ ಕುಮ್ಮಕ್ಕು ನೀಡಿದ್ದಾರೆ. ಮಮತಾ ಸೋತು ಹತಾಶರಾಗಿದ್ದೇ ಗಲಭೆಗೆ ಕಾರಣ ಎಂದರು.

ಇನ್ನು ಇದೇ ವೇಳೆ ಕರ್ನಾಟಕದಲ್ಲಿ ಕೋವಿಡ್ ಬೆಡ್ ದಂಧೆ ವಿಚಾರ ಮಾತನಾಡಿ, ಇದು ಅಮಾನವೀಯ ಬೆಳವಣಿಗೆ. ವ್ಯವಸ್ಥಿತ ಜಾಲ ಸರ್ಕಾರಿ ವ್ಯವಸ್ಥೆಯ ಒಳಗೆ ನುಗ್ಗಿದೆ. ಬೆಡ್ ದಂದೆ ಮಾಡಿದವರಿಗೆ 347 ಕೇಸು ದಾಖಲಿಸಬೇಕು.

ಬೆಡ್ ದಂದೆ ಕೊಲೆ ಮಾಡಿದಕ್ಕಿಂತ ಘೋರ ಅಪರಾಧ. ಕೊಲೆ ಕೇಸು ದಾಖಲು ಮಾಡಿ ಆ ಕಂಪನಿಯನ್ನು ಪೂರ್ತಿ ಬರ್ಕಾಸ್ತು ಮಾಡಬೇಕು. ಇದರಲ್ಲಿ ಭಾಗಿಯಾದ ಎಲ್ಲರಿಗೂ ಉಗ್ರ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd