ಬೆಂಗಳೂರು: ಜಾತಿ ಜನಗಣತಿ (Caste Census) ಸರಿಯಾಗಿ ಆಗಿಲ್ಲ. ಹೀಗಾಗಿ ಮತ್ತೊಮ್ಮೆ ಮಾಡಬೇಕು ಎಂಬ ಆಗ್ರಹ ವೀರಶೈವ (Veerashaiva Lingayat) ನಾಯಕರಲ್ಲಿದೆ ಎಂದು ಸಚಿವ ಈಶ್ವರ್ ಖಂಡ್ರೆ (Eshwara Khandre) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜು ವರದಿಯಲ್ಲಿ (Kantharaj Commission) ಏನಿದೆ ಎಂಬುವುದು ಯಾರಿಗೂ ಗೊತ್ತಿಲ್ಲ. ಜಾತಿ ಜನಗಣತಿ ಬಗ್ಗೆ ಯಾರದ್ದೂ ವಿರೋಧ ಇಲ್ಲ. ಅದರಲ್ಲಿ ರಾಜಕೀಯವೂ ತರಬಾರದು. ಲಿಂಗಾಯತ ಸಮುದಾಯದ ನಾಯಕರು ವೈಜ್ಞಾನಿಕ ಸಮೀಕ್ಷೆ ಆಗಲಿ ಎನ್ನುತ್ತಿದ್ದಾರೆ. 2011 ರಲ್ಲಿ ಜನಗಣತಿ ಆಗಿದ್ದು. ಇನ್ನೂ ಜನಗಣತಿ ಆಗಿಲ್ಲ. ಜನಗಣತಿ ಸಮಯದಲ್ಲೇ ಜಾತಿ ಗಣತಿ ಮಾಡಬೇಕು ಎಂಬ ಬೇಡಿಗೆ ಇದೆ ಎಂದಿದ್ದಾರೆ.
ವರದಿ ಕ್ಯಾಬಿನೆಟ್‌ಗೆ ಬಂದ ಬಳಿಕ ಅಲ್ಲಿಯೇ ನನ್ನ ಅಭಿಪ್ರಾಯ ತಿಳಿಸುತ್ತೇನೆ. ಹತ್ತು ವರ್ಷ ವರದಿ ವಿಳಂಬ ಆಗಿದೆ ಎಂದಿದ್ದಾರೆ.








