ದೆಹಲಿ: ದೇಶದಲ್ಲಿ ಪಂಚ ರಾಜ್ಯಗಳಲ್ಲಿ ಚುನಾವಣೆ ಇತ್ತೀಚೆಗೆ ನಡೆದಿತ್ತು. ಇಂದು ನಾಲ್ಕು ರಾಜ್ಯಗಳ ಫಲಿತಾಂಶ ಹೊರ ಬಿದ್ದಿದ್ದು, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ಸಂಭ್ರಮದಲ್ಲಿ ಬಿಜೆಪಿ ಇದ್ದು, ಪ್ರಧಾನಿ ಅವರು ಸಿಹಿ ನುಡಿ ನುಡಿದಿದ್ದಾರೆ.
ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. 3 ರಾಜ್ಯಗಳ ಗೆಲುವು 2024ರ ಹ್ಯಾಟ್ರಿಕ್ ಗೆಲುವಿನ ದಿಕ್ಸೂಚಿಯಾಗಿದೆ. ಹೀಗಾಗಿ ಇದೇ ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದಿದ್ದಾರೆ. ಭಾರತದ ಮತದಾರರು ಪ್ರಬುದ್ಧತೆ ಹೊಂದಿರುವುದನ್ನು ಇಡೀ ವಿಶ್ವ ನೋಡ್ತಿದೆ. ಈ ಗೆಲುವು ವಿಶ್ವದ ಭರವಸೆ ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ನಾರಿಶಕ್ತಿಯ ವಿಕಾಸವೇ ಬಿಜೆಪಿಯ ಆಧಾರಸ್ತಂಭವಾಗಿದೆ. ಇದು ಮೋದಿಯ ಕೇವಲ ಗ್ಯಾರಂಟಿ ಅಲ್ಲ, ಪೂರ್ಣಗೊಳಿಸುವ ಗ್ಯಾರಂಟಿ. ತೆಲಂಗಾಣದಲ್ಲಿ ಈ ಬಾರಿ ಬಿಜೆಪಿ ಉತ್ತಮ ಗೆಲುವು ಸಾಧಿಸಿದೆ. ನನ್ನ ಮನಪೂರ್ವಕ ನಮಸ್ಕಾರಗಳು. ದೇಶದಲ್ಲಿ ನನ್ನ ಪ್ರಕಾರ 4 ಜಾತಿಗಳು ಮಾತ್ರ ದೊಡ್ಡದಾಗಿವೆ. ಮಹಿಳಾ ಶಕ್ತಿ, ಯುವಶಕ್ತಿ, ರೈತರು, ಹಾಗೂ ಬಡವರ್ಗ ಎಂದು ಹೇಳಿದ್ದಾರೆ. ಮೊದಲ ಬಾರಿಗೆ ಮತ ಹಾಕಿದವರು ಕೂಡ ಹೆಮ್ಮೆಯಿಂದ ಹೇಳುತ್ತಿದ್ದಾರೆ. ಮಹಿಳೆಯರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.