ಈ ದೇಶದ ಸ್ವಾತಂತ್ರ್ಯಕ್ಕೆ ಮೋದಿ Modi’s ಕೊಡುಗೆ ಏನು : ಸಿದ್ದರಾಮಯ್ಯ saaksha tv
ಮಂಡ್ಯ : ನಾನು ಮೋದಿಯನ್ನ ಕೇಳ್ತೀನಿ. ಈ ದೇಶದ ಸ್ವಾತಂತ್ರ್ಯಕ್ಕೆ ನಿಮ್ಮ ಕೊಡುಗೆ ಏನು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸಂಸ್ಥಾಪನ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಸ್ಥಾಪನೆಯಾಗಿ 136 ವರ್ಷ ಕಳೆದಿದೆ.
ಇದೀಗ 137ನೇ ವರ್ಷಾಚರಣೆ ಮಾಡ್ತಿದ್ದೇವೆ. ಸ್ವಾತಂತ್ರ್ಯ ಹೋರಾಟ ಮಾಡಲಿಕ್ಕೆ ಹುಟ್ಟಿದ್ದಲ್ಲ ಕಾಂಗ್ರೆಸ್, ಭಾರತೀಯರ ಕಷ್ಟ ಸುಖ ಆಲಿಸೋಕೆ ಹುಟ್ಟಿದ ಪಕ್ಷ.
ಬ್ರಿಟಿಷ್ ಸರ್ಕಾರದ ದುರಾಡಳಿತದ ವಿರುದ್ಧ ಹೋರಾಟಕ್ಕೆ ಹುಟ್ಟಿದ ಸಂಘಟನೆ ಕಾಂಗ್ರೆಸ್. ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ ಕಾಂಗ್ರೆಸ್ ನ ಇತಿಹಾಸ ಈ ದೇಶದ ಇತಿಹಾಸ ಎಂದು ಹೇಳಿದರು.
ಮೈಸೂರು ಮಹಾರಾಜರು ಕೂಡ ಬ್ರಿಟಿಷರ ಅಧೀನದಲ್ಲಿದ್ದರು. ಬ್ರಿಟಿಷರ ಆದೇಶವನ್ನೇ ಮೈಸೂರು ಮಹಾರಾಜರು ಪಾಲನೆ ಮಾಡಬೇಕಿತ್ತು.
ಬ್ರಿಟಿಷರ ವಿರುದ್ಧ ಎದೆ ಕೊಟ್ಟ, ರಕ್ತ ಸುರಿಸಿದ ಜನರ ಶ್ರಮದ ಫಲವೇ ನಾವು. ಮೋದಿ ಪ್ರಧಾನಿ ಆಗಿರೋದು ಕೂಡ ಸ್ವಾತಂತ್ರ್ಯ ಹೋರಾಟಗಾರರ ಶ್ರಮದಿಂದ.
RSSನವರು ಯಾರೂ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಲಿಲ್ಲ, ಪ್ರಾಣ ಕೊಡಲಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿಗರ ಪಾಲು ಶೂನ್ಯ. ಅಂತಹವರು ಇಂದು ಕಾಂಗ್ರೆಸ್ ಬಗ್ಗೆ ಮಾತಾಡ್ತಾರೆ ಎಂದು ಕಿಡಿಕಾರಿದರು.
ಇನ್ನು ಮೋದಿ ಕಾಂಗ್ರೆಸ್ ಕೊಡುಗೆ ಏನು ಅಂತಾ ಕೇಳ್ತಾರೆ. ಅವರಿಗೆ ಇತಿಹಾಸ ಗೊತ್ತಿಲ್ಲದಿರಬಹುದು. ಗೊತ್ತಿದ್ದು, ರಾಜಕೀಯಕ್ಕಾಗಿ ಸುಳ್ಳು ಹೇಳ್ತಿರಬಹುದು. ನಾನು ಮೋದಿಯನ್ನ ಕೇಳ್ತೀನಿ.
ಈ ದೇಶದ ಸ್ವಾತಂತ್ರ್ಯಕ್ಕೆ ನಿಮ್ಮ ಕೊಡುಗೆ ಏನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ದೇಶಕ್ಕೆ ಸಾಮಾಜಿಕ, ಆರ್ಥಿಕವಾಗಿ ಕೊಡುಗೆ ಕೊಟ್ಟಿದ್ದು ಕಾಂಗ್ರೆಸ್ ಎಂದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಸದಸ್ಯನಾಗಿರೋದೇ ನಮ್ಮ ಹೆಮ್ಮೆ.
ರೈತರಿಗೆ ವಿರುದ್ಧವಾದ ಮೂರು ಕಾಯ್ದೆ ತಂದರು. ಮೂರು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಈಗ ಕಾಯ್ದೆ ವಾಪಸ್ ಪಡೆದಿದೆ.
ನಮ್ಮದು ರೈತರು, ದೇಶದ ಜನರ ಪರವಾದ ಕಾನೂನು. ಇವರು ಕೊಡ್ತಿರೋದು ದೇಶಕ್ಕೆ ಮಾರಕವಾದ ಕಾನೂನು ಎಂದು ಬಿಜೆಪಿ ವಿರುದ್ಧ ಗುಡುಗಿದರು.









