ನೀವು ಹಣವನ್ನು ಬೇರೊಬ್ಬರ ಬ್ಯಾಂಕ್ ಖಾತೆಗೆ ತಪ್ಪಾಗಿ ಜಮಾ ಮಾಡಿದರೆ ಏನು ಮಾಡಬೇಕು?
ಇದು ಡಿಜಿಟಲ್ ಯುಗ, ಈಗ ನಾವು ಆನ್ಲೈನ್ನಲ್ಲಿ ಯಾರಿಗಾದರೂ ನಿಮಿಷಗಳಲ್ಲಿ ಹಣವನ್ನು ವರ್ಗಾಯಿಸಬಹುದು. ಆದರೆ ಈ ಸೌಲಭ್ಯವು ಸುಲಭವಾಗಿದ್ದರೂ ಅಪಾಯಕಾರಿಯು ಆಗಿದೆ. ಏಕೆಂದರೆ ನಾವು ಅನೇಕ ಬಾರಿ ತಪ್ಪಾಗಿ ಬೇರೆ ವ್ಯಕ್ತಿಯ ಖಾತೆಗೆ ಅವಸರದಲ್ಲಿ ಹಣವನ್ನು ಕಳುಹಿಸುತ್ತೇವೆ.
ಉದಾಹರಣೆಗೆ, ಒಂದು ಸಂಖ್ಯೆಯ ಹೆಚ್ಚಳ ಮತ್ತು ತಪ್ಪು ಸಂಖ್ಯೆ ನಮೂದಿಸಿದ ಕಾರಣದಿಂದ ನಮ್ಮ ಹಣವು ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆ ಆಗಬಹುದು.
ನಮ್ಮ ದೇಶದ ಎಲ್ಲಾ ಬ್ಯಾಂಕುಗಳು ಆರ್ಬಿಐ ಮಾರ್ಗಸೂಚಿಗಳ ಮೇಲೆ ಕಾರ್ಯನಿರ್ವಹಿಸುತ್ತವೆ. ಆರ್ಬಿಐನ ಮಾರ್ಗಸೂಚಿಯು ನಿಮ್ಮ ಹಣವನ್ನು ಬೇರೊಬ್ಬರ ಖಾತೆಗೆ ತಪ್ಪಾಗಿ ಜಮಾ ಮಾಡಿದರೆ ನಿಮ್ಮ ಬ್ಯಾಂಕ್ ಅದನ್ನು ಆದಷ್ಟು ಬೇಗ ಪಡೆಯಬೇಕು. ಶೀಘ್ರದಲ್ಲೇ ಸರಿಯಾದ ಕ್ರಮಗಳನ್ನು ತೆಗೆದುಕೊಂಡು, ತಪ್ಪಾದ ಖಾತೆಯಿಂದ ಹಣವನ್ನು ಸರಿಯಾದ ಖಾತೆಗೆ ಹಿಂದಿರುಗಿಸಲು ಬ್ಯಾಂಕ್ ವ್ಯವಸ್ಥೆ ಮಾಡಬೇಕು ಎಂದು ಹೇಳುತ್ತದೆ.
ನೀವು ಹಣವನ್ನು ವರ್ಗಾಯಿಸುವಾಗ ತಪ್ಪು ಮಾಡಿದರೆ ಏನು ಮಾಡಬೇಕು?
ತಪ್ಪಾಗಿ ನೀವು ಇನ್ನೊಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿದ್ದರೆ, ಮೊದಲನೆಯದಾಗಿ, ನೀವು ನಿಮ್ಮ ಬ್ಯಾಂಕ್ಗೆ ಫೋನ್ ಅಥವಾ ಇಮೇಲ್ ಮೂಲಕ ತಿಳಿಸಬೇಕು. ನೀವು ಬೇಗನೆ ಶಾಖಾ ವ್ಯವಸ್ಥಾಪಕರನ್ನು ಭೇಟಿ ಮಾಡುವುದು ಉತ್ತಮ. ನೀವು ಹಣವನ್ನು ವರ್ಗಾವಣೆ ಮಾಡಿದ ಬ್ಯಾಂಕ್ ಮಾತ್ರ ಈ ಸಮಸ್ಯೆಯನ್ನು ಪರಿಹರಿಸಬಹುದು.
ತಪ್ಪಾದ ವಹಿವಾಟುಗಳ ಬಗ್ಗೆ ನಿಮ್ಮ ಬ್ಯಾಂಕ್ಗೆ ವಿವರವಾಗಿ ತಿಳಿಸಿ. ಇದು ವ್ಯವಹಾರದ ದಿನಾಂಕ ಮತ್ತು ಸಮಯ, ತಪ್ಪಾಗಿ ಹಣವನ್ನು ವರ್ಗಾಯಿಸಿದ ಖಾತೆ ಸಂಖ್ಯೆ, ಠೇವಣಿ ರಶೀದಿ, ನಿಮ್ಮ ಖಾತೆ ಸಂಖ್ಯೆ ಇತ್ಯಾದಿಯನ್ನು ಒಳಗೊಂಡಿರುತ್ತದೆ.
ನೀವು ತಪ್ಪಾಗಿ ಹಣವನ್ನು ಕಳುಹಿಸಿದ ಬ್ಯಾಂಕ್ ಖಾತೆಯ ಶಾಖೆಗೆ ಹೋಗಿ ಶಾಖಾ ವ್ಯವಸ್ಥಾಪಕರಿಗೆ ದೂರು ನೀಡಿ. ಬ್ಯಾಂಕ್ ತನ್ನ ಗ್ರಾಹಕರ ಅನುಮತಿಯಿಲ್ಲದೆ ಯಾರಿಗೂ ಹಣವನ್ನು ಕಳುಹಿಸಲು ಸಾಧ್ಯವಿಲ್ಲ. ಇದಲ್ಲದೆ, ಬ್ಯಾಂಕುಗಳು ಸಹ ಗ್ರಾಹಕರ ಬಗ್ಗೆ ಮಾಹಿತಿಯನ್ನು ನೀಡುವುದಿಲ್ಲ. ಆದ್ದರಿಂದ, ದೂರನ್ನು ನೋಂದಾಯಿಸುವಾಗ, ನೀವು ತಪ್ಪಾಗಿ ವರ್ಗಾಯಿಸಿದ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸುವಂತೆ ವಿನಂತಿಸಬೇಕು.
ಪ್ರತಿದಿನ ಬೆಳಿಗ್ಗೆ ನಿಂಬೆ ರಸ ಕುಡಿಯುವುದರ ಆರೋಗ್ಯ ಪ್ರಯೋಜನಗಳು https://t.co/vDadOmnHSd
— Saaksha TV (@SaakshaTv) February 15, 2021
ಪಾಸ್ಟ್ಯಾಗ್ಗಳಿಂದ ಡಬಲ್ ಹಣ ಕಡಿತಗೊಳಿಸಿದರೆ ಏನು ಮಾಡಬೇಕು? https://t.co/TA0xAI07Rl
— Saaksha TV (@SaakshaTv) February 19, 2021
What to do If you send money to wrong account