WhatsApp ಬಳಕೆದಾರರಿಗೆ ಗುಡ್ ನ್ಯೂಸ್! – ಮಲ್ಟಿ-ಡಿವೈಸ್ ಸಪೋರ್ಟ್ ಫೀಚರ್ ಪರಿಚಯ
ಖ್ಯಾತ ಸಾಮಾಜಿಕ ಫ್ಲಾಟ್ ಫಾರ್ಮ್ ಮೆಸೇಜಿಂಗ್ ಆಪ್ ಆಗಿರುವ ವಾಟ್ಸಾಪ್ ತನ್ನ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಉತ್ತಮ ಫೀಚರ್ ಗಳನ್ನ ಪರಿಚಯಿಸುತ್ತಿದೆ. ಇದೀಗ ಬಳಕೆದಾರರು ಬಹಳ ಸಮಯದಿಂದ ಕಾಯುತ್ತಿದ್ದ ಫೀಚರ್ ಹೊರಬಂದಿದೆ. ಈ ಫೀಚರ್ ನ ಲಾಭವನ್ನು ನಾನ್ ಬೀಟಾ ಬಳಕೆದಾರರಿಗೂ ಲಭ್ಯವಾಗುವಂತೆ ನೀಡಲಾಗಿದೆ. ಇದು ಇಲ್ಲಿಯವರೆಗೆ ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು. ಈ ವಿಶೇಷ ವೈಶಿಷ್ಟ್ಯದ ಮೂಲಕ, ಬಳಕೆದಾರರು ತಮ್ಮ WhatsApp ಖಾತೆಯನ್ನು ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ನಂತಹ ಒಂದಕ್ಕಿಂತ ಹೆಚ್ಚು ಸಾಧನಗಳಲ್ಲಿ ಏಕಕಾಲದಲ್ಲಿ ಚಲಾಯಿಸಬಹುದಾಗಿದೆ.
ಇದಕ್ಕೆ ಮೊದಲು ಅಪ್ಲಿಕೇಶನ್ ಅನ್ನು ನವೀಕರಿಸಬೇಕು. ವಾಟ್ಸಾಪ್ ಟ್ರ್ಯಾಕರ್ WABetaInfo ಪ್ರಕಾರ, ಆಪ್ನ ಆವೃತ್ತಿ 2.21.19.9 ಅನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ಹೊರತರಲಾಗಿದೆ. ಆಪ್ ಅನ್ನು ಹೊಸ ಆವೃತ್ತಿಗೆ ಅಪ್ಡೇಟ್ ಮಾಡುವ ಮೂಲಕ ನೀವು ವಾಟ್ಸಾಪ್ ಮಲ್ಟಿ-ಡಿವೈಸ್ ಸಪೋರ್ಟ್ ಫೀಚರ್ ಅನ್ನು ಬಳಸಬಹುದು. ವರದಿಯ ಪ್ರಕಾರ, ಭವಿಷ್ಯದ ಅಪ್ಡೇಟ್ಗಳಿಗಾಗಿ WhatsApp ಬಹು-ಸಾಧನ ಆವೃತ್ತಿ ನವೀಕರಣಗಳನ್ನು ಕಡ್ಡಾಯಗೊಳಿಸಬಹುದು. ಇನ್ನೂ ವಿಶೇಷ ಅಂದ್ರೆ ಇದು ಇಂಟರ್ ನೆಟ್ ಇಲ್ಲದೇ ಇದ್ದರೂ ಕಾರ್ಯ ನಿರ್ವಹಿಸುತ್ತದೆ. ಜುಲೈನಲ್ಲಿ ವಾಟ್ಸಾಪ್ ಈ ವಿಶೇಷ ಮಲ್ಟಿ-ಡಿವೈಸ್ ಫೀಚರ್ ಅನ್ನು ಪರಿಚಯಿಸಿದೆ ಇದರ ವಿಶೇಷತೆ ಎಂದರೆ ಬಳಕೆದಾರರ ಸ್ಮಾರ್ಟ್ ಫೋನ್ ಇಂಟರ್ನೆಟ್ ಸಂಪರ್ಕವನ್ನು ಹೊಂದಿಲ್ಲದಿದ್ದರೂ, ವಾಟ್ಸಾಪ್ ಖಾತೆಯನ್ನು ನಾಲ್ಕು ವಿಭಿನ್ನ ಸಾಧನಗಳಲ್ಲಿ ರನ್ ಮಾಡಬಹುದು. ಅಲ್ಲದೆ, ಬಳಕೆದಾರರ ಫೋನ್ ಆಫ್ ಆಗಿದ್ದರೂ, ಲ್ಯಾಪ್ಟಾಪ್ ಅಥವಾ ಪಿಸಿಯಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುತ್ತಲೇ ಇರುತ್ತದೆ.
WhatsApp ಬಹು-ಸಾಧನ ಬೆಂಬಲ ವೈಶಿಷ್ಟ್ಯವನ್ನು ಹೇಗೆ ಸಕ್ರಿಯಗೊಳಿಸುವುದು..?
ಮಲ್ಟಿ-ಡಿವೈಸ್ ಸಪೋರ್ಟ್ ಫೀಚರ್ ಅನ್ನು ಸಕ್ರಿಯಗೊಳಿಸಲು, ಮೊದಲು ಸ್ಮಾರ್ಟ್ ಫೋನಿನಲ್ಲಿ ವಾಟ್ಸಾಪ್ ತೆರೆಯಿರಿ.
ಮೇಲಿನ ಮೂರು ಚುಕ್ಕೆಗಳನ್ನ ಕ್ಲಿಕ್ ಮಾಡಿ ಮೆನ್ಯುವಿಗೆ ಹೋಗಿ.
ಇಲ್ಲಿ ಕ್ಲಿಕ್ ಮಾಡಿ ಲಿಂಕ್ ಮಾಡಿದ ಡಿವೈಸ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಇದನ್ನು ಮಾಡಿದ ನಂತರ, ಈಗ ಮಲ್ಟಿ-ಡಿವೈಸ್ ಬೀಟಾ ಆಯ್ಕೆಯನ್ನು ಟ್ಯಾಪ್ ಮಾಡಿ.
ಇಲ್ಲಿ ನೀವು ಬೀಟಾ ಸೇರಲು ಅಥವಾ ಹೊರಡುವ ಆಯ್ಕೆಯನ್ನು ಹೊಂದಿರುತ್ತೀರಿ.