Whatsapp : ವಾಟ್ಸ್ ಆಪ್ ಸ್ಟೇಟಸ್ ಗೆ ಬರುತ್ತಿದೆ ಹೊಸ ಫೀಚರ್…!!!
Whatsapp : ವಿಶ್ವದಲ್ಲಿ ಅತ್ಯಂತ ಪ್ರಚಲಿತದಲ್ಲಿರುವ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ಮೆಟಾ ಒಡೆತನದ ಸಂಸ್ಥೆಗೆ ಸೇರಿದ ಆಪ್ ಆಗಿದೆ..
ಅಂದ್ಹಾಗೆ ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಆಗಾಗ ಹೊಸ ಹೊಸ ಫೀಚರ್ ಗಳನ್ನ ಪರಿಚಯಿಸುತ್ತಲೇ ಇರುತ್ತದೆ..
ಇದೀಗ ಶೀಘ್ರದಲ್ಲೇ ವಾಟ್ಸ್ ಆಪ್ ಸ್ಟೇಟಸ್ ಗೆ ಹೊಸ ಫೀಚರ್ ಬರಲಿದೆ..
ಹೌದು..!
ವಾಟ್ಸ್ ಆ್ಯಪ್ ಸ್ಟೇಟಸ್ ನಲ್ಲಿ ಆಡಿಯೊ ಕ್ಲಿಪ್ ನ್ನು ಕೂಡ ಅಪ್ಲೋಡ್ ಮಾಡುವ ಫೀಚರ್ ಅನ್ನು ವಾಟ್ಸ್ ಆ್ಯಪ್ ಶೀಘ್ರದಲ್ಲೇ ಪರಿಚಯಿಸುತ್ತಿದೆ ಎಂದು , ವೆಬೀಟಾಇನ್ಫೊ ವರದಿ ಮಾಡಿದೆ.
ಸದ್ಯ ಇದು ಪ್ರಾಯೋಗಿಕ ಹಂತದಲ್ಲಿದ್ದು ಮುಂದಿನ ಮೂರು ತಿಂಗಳ ಒಳಗಾಗಿ ಎಲ್ಲ ಬಳಕೆದಾರರಿಗೆ ಮುಕ್ತವಾಗಿ ಸಿಗಲಿದೆ ಎಂದು ತಿಳಿಸಿದೆ.
ಈ ಫೀಚರ್ ಬಂದರೆ ಬಳಕೆದಾರರು 30 ಸೆಕೆಂಡ್ ನ ಆಡಿಯೊ ಕ್ಲಿಪ್ ಅನ್ನು ಸ್ಟೇಟಸ್ ರೂಪದಲ್ಲಿ ಹಾಕಿಕೊಳ್ಳಬಹುದಾಗಿದೆ ಮತ್ತು ಅತ್ಯಂತ ಹೆಚ್ಚು ಖಾಸಗಿತನವನ್ನು ಕಾಪಾಡಿಕೊಳ್ಳಬಹುದಾದ ಅವಕಾಶವನ್ನು ಇದು ಒದಗಿಸುತ್ತಿದೆ..
Whatsapp , Whatsapp status new feature