ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಣಕಾಸು ಹಗರಣದ ಹಿನ್ನೆಲೆಯಲ್ಲಿ ಇತ್ತೀಚೆಗೆ ಇನ್‌ಫೋರ್ಸ್‌ಮೆಂಟ್ ಡೈರೆಕ್ಟೊರೇಟ್ (ED) ಅಧೀನದಲ್ಲಿ ಕಾಂಗ್ರೆಸ್ ಸಂಸದರು, ಮಾಜಿ ಸಚಿವರು ಮತ್ತು ಶಾಸಕರ ಮನೆಮೇಲೆ ದಾಳಿ ನಡೆದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರ ಪ್ರಶ್ನೆ ಎಸೆದಿದ್ದಾರೆ.
ಖರ್ಗೆ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ದಾಳಿಗೆ ನಿಖರ ಕಾರಣವೇನು ಅನ್ನೋದು ಇಡಿಯವರಿಗೆ ಮಾತ್ರ ಗೊತ್ತಾಗಿರಬಹುದು. ಇಡಿಯ ದಾಳಿಗಳು ಹೊಸದಾಗಿ ಆಗ್ತಿಲ್ಲ. ಇವುಗಳು ಚುನಾವಣಾ ಸಮಯದಲ್ಲಿ ಸಾಮಾನ್ಯವಾಗಿವೆ, ಎಂದು ಹೇಳಿದರು.
ಚುನಾವಣೆ ವೇಳೆಯ ದಾಳಿಗಳ ಕುರಿತು ಪ್ರಶ್ನೆ
ಖರ್ಗೆ ತಮ್ಮ ಮಾತು ಮುಂದುವರೆಸುತ್ತಾ, ಚುನಾವಣೆ ಸಮಯದಲ್ಲಿ ಎಲ್ಲ ಪಕ್ಷಗಳೇ ಹಣ ಸೀಜ್ ಆಗಿತ್ತು. ಲಕ್ಷಾಂತರ ಕೋಟಿ ರೂಪಾಯಿ ಹಣ ಜಪ್ತಿ ಮಾಡಲಾಗಿತ್ತು. ಆದರೆ, ಆ ಹಣ ಎಲ್ಲಿಗೆ ಹೋಯಿತು ಅನ್ನೋದನ್ನ ಇವತ್ತಿಗೂ ಯಾವುದೇ ಸಂಸ್ಥೆ ಸ್ಪಷ್ಟಪಡಿಸಿಲ್ಲ, ಎಂದು ಗಂಭೀರ ಪ್ರಶ್ನೆ ಎಸೆದಿದ್ದಾರೆ.
ರಾಜಕೀಯದ ಪಿತೂರಿ ಆರೋಪ?
ಇಡಿಯ ದಾಳಿಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮಾರ್ಗದರ್ಶನದಲ್ಲಿ ನಡೆಯುತ್ತಿವೆ ಎಂಬ ಆರೋಪಗಳನ್ನು ಖರ್ಗೆ ಹಿಂದೆಯೂ ಹಲವಾರು ಬಾರಿ ಮಾಡಿದ್ದಾರೆ. ಈ ಬಾರಿ ಕೂಡ ಅವರು ಪರೋಕ್ಷವಾಗಿ ಅದೇ ಅರ್ಥ ನೀಡುವ ಹೇಳಿಕೆ ನೀಡಿದ್ದಾರೆ.