ನವದೆಹಲಿ: ರಾಜಸ್ಥಾನದಲ್ಲಿ ಗೆಲುವು ಸಾಧಿಸಲು ಕೆಲವು ಪಕ್ಷಗಳು ಶ್ರಮಿಸುತ್ತಿವೆ. ಆದರೆ, ಮತದಾರ ಯಾರಿಗೆ ಮಣೆ ಹಾಕಬಹುದು ಎನ್ನುವುದನ್ನು ಸಮೀಕ್ಷೆ ಹೇಳಿದೆ.
ರಾಜಸ್ಥಾನದಲ್ಲಿ ಪ್ರತಿ ಬಾರಿಯೂ ಸರ್ಕಾರ ಬದಲಾಗುತ್ತಿತ್ತು. ಈ ಬಾರಿ ಕೂಡ ಅದೇ ಆಗಲಿದೆ ಎನ್ನಲಾಗುತ್ತಿದ್ದು, ಕಾಂಗ್ರೆಸ್ ಈ ಬಾರಿ ಸೋಲು ಅನುಭವಿಸಬಹುದು ಎನ್ನಲಾಗುತ್ತಿದೆ. ಸಿಎಂ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಜಗಳ ಬಿಜೆಪಿ ಅಧಿಕಾರ ನಡೆಸಲು ದಾರಿ ಮಾಡಿಕೊಡಬಹುದು ಎನ್ನಲಾಗುತ್ತಿದೆ. 199 ಸ್ಥಾನಗಳಿರುವ ರಾಜಸ್ಥಾನದಲ್ಲಿ ಸರಳ ಬಹುಮತಕ್ಕೆ 100 ಸ್ಥಾನಗಳ ಅಗತ್ಯವಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 100, ಬಿಜೆಪಿ 73, ಬಿಎಸ್ಪಿ 6, ಆರ್ ಎಲ್ ಪಿ 3, 13 ಜನ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.
ಸದ್ಯ ಸಮೀಕ್ಷೆಯಂತೆ ಇಂಡಿಯಾ ಟುಡೇ: ಬಿಜೆಪಿ 80-100, ಕಾಂಗ್ರೆಸ್ 86-106, ಬಿಎಸ್‌ಪಿ 1-2, ಜನ್‌ಕೀ ಬಾತ್: ಬಿಜೆಪಿ 100-122, ಕಾಂಗ್ರೆಸ್ 62-85, ಪೂಲ್‌ಸ್ಟಾರ್ಟ್ : ಬಿಜೆಪಿ 100-110, ಕಾಂಗ್ರೆಸ್ 90-100, ಟೈಮ್ಸ್ ನೌ: ಬಿಜೆಪಿ 108-128, ಕಾಂಗ್ರೆಸ್ 56-72 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.