ನವದೆಹಲಿ: ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಅವರ ನೇತೃತ್ವದ ಮಂತ್ರಿ ಮಂಡಲ ಕೂಡ ರಚನೆಯಾಗಿದೆ.
ಮಂತ್ರಿ ಮಂಡಲದಲ್ಲಿ ಜೆ.ಪಿ. ನಡ್ಡಾ ಕೂಡ ಸ್ಥಾನ ಪಡೆದಿದ್ದಾರೆ. ಹೀಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ.
ಬಿಜೆಪಿಯಲ್ಲಿ ಪಕ್ಷದ ಅಧ್ಯಕ್ಷ ಸಚಿವ ಸ್ಥಾನ ನಿಭಾಯಿಸುವಂತಿಲ್ಲ ಅಥವಾ ಸಚಿವರಿಗೆ ಆ ಹುದ್ದೆ ನೀಡುವಂತಿಲ್ಲ. ಹೀಗಾಗಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಈಗ ಖಾಲಿಯಿದೆ. ಹಲವರು ಆ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ. ಹೀಗಾಗಿ ಜೆ.ಪಿ. ನಡ್ಡಾ ಶೀಘ್ರದಲ್ಲೇ ಬಿಜೆಪಿ ಅಧ್ಯಕ್ಷ ಹುದ್ದೆಗೆ ಅವರು ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಮಹಿಳೆ ಸೇರಿ 5 ಬಿಜೆಪಿ ನಾಯಕರ ಹೆಸರು, ನಡ್ಡಾ ಉತ್ತರಾಧಿಕಾರಿಯ ಪಟ್ಟಕ್ಕೆ ಕೇಳಿ ಬರುತ್ತಿವೆ. ವಿನೋದ ತಾವ್ಡೆ, ಸುನೀಲ್ ಬನ್ಸಲ್, ಓಂ ಮಾಥುರ್. ಕೆ. ಲಕ್ಷ್ಮಣ ಹಾಗೂ ಸ್ಮೃತಿ ಇರಾನಿ ಹೆಸರುಗಳು ಸದ್ಯ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ವಿನೋದ್ ತಾವ್ಡೆ ಅವರು ಮರಾಠಾ ನಾಯಕರಾಗಿದ್ದು, ಹಾಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ. ಬಿ.ಎಲ್.ಸಂತೋಷ್ ನಂತರ ಬಿಜೆಪಿಯ ಅತ್ಯಂತ ಪ್ರಭಾವಿ ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದಾರೆ.
ಕೆ. ಲಕ್ಷ್ಮಣ್ ಬಿಜೆಪಿಯ ಒಬಿಸಿ ಮೋರ್ಚಾ ಮುಖ್ಯಸ್ಥ. ಆಂಧ್ರ-ತೆಲಂಗಾಣದಿಂದ ಬಂದ ಇವರು ಆಕ್ರಮಣಕಾರಿ ಹಾಗೂ ತಾಳ್ಮೆಯುತ ನಾಯಕ ಆಗಿದ್ದಾರೆ. ಸುನಿಲ್ ಬನ್ಸಲ್ ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳ ಪ್ರಧಾನ ಕಾರ್ಯದರ್ಶಿ ಹಾಗೂ ಉಸ್ತುವಾರಿ. ಹಿಂದೆ ಉತ್ತರ ಪ್ರದೇಶದಲ್ಲೂ ಉತ್ತಮ ಸಂಘಟನೆ ಮಾಡಿದವರು. ಆರೆಸ್ಸೆಸ್ ಹಿನ್ನೆಲೆಯವರು. ಹೀಗಾಗಿ ಅವರ ಹೆಸರು ಕೂಡ ಮುಂಚೂಣಿಯಲ್ಲಿದೆ.
ರಾಜಸ್ಥಾನದ ರಾಜ್ಯಸಭಾ ಸದಸ್ಯ ಹಾಗೂ ಭೈರೋನ್ ಸಿಂಗ್ ಶೆಖಾವತ್ ಅವರ ಆಪ್ತರಾಗಿದ್ದ ಓಂ ಮಾಥುರ್ ಕೂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗುವ ಸ್ಪರ್ಧೆಯಲ್ಲಿದೆ. ಈಗ ಮೋದಿ ಅವರ ತವರು ಗುಜರಾತ್ ಉಸ್ತುವಾರಿ. ನಗುವಿನಲ್ಲೇ ಎಲ್ಲ ಸಮಸ್ಯೆ ಪರಿಹರಿಸಬಲ್ಲರು ಎಂಬ ಚರ್ಚೆ ಪಕ್ಷದಲ್ಲಿದೆ. ಬಿಜೆಪಿಯ ಫೈರ್ ಬ್ರಾಂಡ್ ನಾಯಕಿ. ಹಿಂದಿ-ಇಂಗ್ಲಿಷ್ ಚೆನ್ನಾಗಿ ಬಲ್ಲರು. ಪ್ರಧಾನಿ ನರೇಂದ್ರ ಮೋದಿ ಆಪ್ತೆ ಕೂಡ. ಈಗ ಗಾಂಧಿ ಕುಟುಂಬದ ಪ್ರಭಾವ ಇರುವ ಅಮೇಠಿಯಲ್ಲಿ ಅವರು ಸೋತಿರಬಹುದು. ಆದರೂ ಪ್ರಭಲ ನಾಯಕರಲ್ಲಿ ಒಬ್ಬರು. ಹೀಗಾಗಿ ಇವರ ಹೆಸರು ಕೂಡ ಮುಂಚೂಣಿಯಲ್ಲಿದೆ.