ದೇವನಹಳ್ಳಿ : ಮುಂಬೈನಿಂದ ಸುಮಾರು 7000 ಮಂದಿ ಮಂಡ್ಯ ಜಿಲ್ಲೆಗೆ ಹಿಂದುರುಗಿದ್ದು, ಅವರನ್ನೆಲ್ಲಾ ಜಿಲ್ಲಾಡಳಿತ ಸರಿಯಾಗಿ ಕ್ವಾರಂಟೈನ್ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಆರೋಪಿಸಿದ್ದಾರೆ.
ದೇವನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈನಲ್ಲಿ ಮಂಡ್ಯ ಜಿಲ್ಲೆಯ ಸುಮಾರು 15 ಸಾವಿರ ಜನರಿದ್ದಾರೆ. ಅದರಲ್ಲಿ 7 ಸಾವಿರ ಜನ ಮಂಡ್ಯಕ್ಕೆ ವಾಪಸ್ಸಾಗಿದ್ದಾರೆ. ಬಂದವರನ್ನು ಸರಿಯಾಗಿ ಕ್ವಾರಂಟೈನ್ ಮಾಡಿಲ್ಲ. ವೈದ್ಯಕೀಯ ಪರೀಕ್ಷೆಗೂ ಒಳಪಡಿಸಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಸರ್ಕಾರ ನಿರ್ಲಕ್ಷ್ಯತನದಿಂದ ದೊಡ್ಡ ಅನಾಹುತ ಆಗಲಿದ್ದು, ಈಗಲೇ ಸರ್ಕಾರ ಕ್ರಮಕೈಗೊಳ್ಳಲು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಮಂಡ್ಯದಲ್ಲಿ ದೊಡ್ಡ ಅನಾಹುತ ಮಾಡಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದ ಹೆಚ್ ಡಿಕೆ, ಮುಂಬೈನಿಂದ ಅಷ್ಟು ಜನರು ಬಂದಿದ್ದರೂ ಯಾವುದೇ ಮುಂಜಾಗ್ರತೆಯನ್ನೂ ತೆಗೆದುಕೊಂಡಿಲ್ಲ. ಮಾತ್ರವಲ್ಲದೇ ಈ ಘಟನೆಗೆ ಕಾರಣಕರ್ತರಾಗಿರುವ ಬೇಜಬ್ದಾರಿ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.