ಬೆಂಗಳೂರು: ನಗರದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳನ್ನು ಎನ್ ಐಎ ವಿಚಾರಣೆ ನಡೆಸುತ್ತಿದೆ.
ಈ ಸಂದರ್ಭದಲ್ಲಿ ಹಲವಾರು ವಿಷಯಗಳನ್ನು ಉಗ್ರರು ಬಾಯಿ ಬಿಟ್ಟಿದ್ದಾರೆ. ಉಗ್ರರು ರಾಮೇಶ್ವರಂ ಕೆಫೆಗಿಂತಲೂ ಮೊದಲು ವೈಟ್ ಫೀಲ್ಡ್ ನ ಯಾವುದಾರೂ ಒಂದು ಐಟಿ ಕಂಪನಿಯಲ್ಲಿ ಸ್ಫೋಟಗೊಳಿಸಲು ನಿರ್ಧರಿಸಿದ್ದರು.
ವೈಟ್ಫೀಲ್ಡ್ನಲ್ಲಿ ಸ್ಫೋಟಗೊಳಿಸಬೇಕೆಂದು ಬಂಧಿತ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ಉಗ್ರರು ಮುಂದಾಗಿದ್ದರಂತೆ. ಈ ಪ್ರದೇಶದಲ್ಲಿ ದೊಡ್ಡ ದೊಡ್ಡ ಐಟಿಬಿಟಿ ಕಂಪನಿಗಳಿವೆ. ಸಾವಿರಾರು ಜನ ಟೆಕ್ಕಿಗಳು ಕೆಲಸ ಮಾಡುತ್ತಾರೆ. ಇಲ್ಲಿ ಬಾಂಬ್ ಸ್ಫೋಟಿಸಿದರೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ ಎಂದು ಇದನ್ನೇ ಆಯ್ಕೆ ಮಾಡಿಕೊಂಡಿದ್ದರು ಎಂದು ಬಾಯಿ ಬಿಟ್ಟಿದ್ದಾರೆ.
ಆದರೆ, ಐಟಿಬಿಟಿ ಪ್ರದೇಶದಲ್ಲಿ ಬಾಂಬ್ ಇಡುವುದು ಸುಲಭವಲ್ಲ ಎಂದು ಮನಗಂಡು ರಾಮೇಶ್ವರಂ ಕೆಫೆ ಆಯ್ದುಕೊಂಡಿದ್ದಾರೆ. ಅಲ್ಲದೇ, ಕೆಫೆ ಒಳಗೆ ಹೋಗಲು ಯಾವುದೇ ಅಡೆತಡೆ ಇರಲಿಲ್ಲ. ಸೆಕ್ಯುರಿಟಿ, ಮೆಟಲ್ ಡಿಟೆಕ್ಟರ್ ಕೂಡ ಇರಲಿಲ್ಲ. ಹೀಗಾಗಿ ಅಲ್ಲಿ ಸ್ಪೋಟಗೊಳಿಸಿದ್ದಾರೆ ಎಂದು ಬಾಯಿ ಬಿಟ್ಟಿದ್ದಾರೆ.