ಒಣ ಶುಂಠಿಯು ತಾಜಾ ಶುಂಠಿಗಿಂತ ಹಗುರವಾಗಿದ್ದು ಜೀರ್ಣಿಸಿಕೊಳ್ಳಲು ಸುಲಭವಾಗಿದೆ. ಅತಿಸಾರದಲ್ಲಿ ಇದರ ಬಳಕೆಯು ಪ್ರಯೋಜನಕಾರಿಯಾಗಿದೆ. ಇದರೊಂದಿಗೆ, ಕಫವನ್ನು ಕಡಿಮೆ ಮಾಡಲು ಮತ್ತು ಅಗ್ನಿಯನ್ನು ಹೆಚ್ಚಿಸಲು ಇದು ಉತ್ತಮ ಉತ್ತೇಜಕವಾಗಿದೆ. ಅದಕ್ಕಾಗಿಯೇ ಒಣ ಶುಂಠಿಯನ್ನು ಪ್ರತಿ ಋತುವಿನಲ್ಲಿ ಮಸಾಲೆ ಅಥವಾ ಔಷಧಿಯಾಗಿ ಬಳಸಬಹುದು.ನೀರಿಗೆ ಒಣ ಶುಂಠಿ ಪುಡಿಯನ್ನು ಬೆರೆಸಿ ಚೆನ್ನಾಗಿ ಕುದಿಸಿ ಕುಡಿದ್ರೆ ಚಳಿಗಾಲದಲ್ಲಿ ಕಾಡುವ ಸಣ್ಣ ಪುಟ್ಟ ರೋಗಗಳಿಂದ ದೂರವಿರಬಹುದು.
ಒಣ ಶುಂಠಿಯ ನೀರಿನ ಪ್ರಯೋಜನಗಳು
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ತೂಕವನ್ನು ಕ್ರಮಬದ್ಧ ಗೊಳಿಸುತ್ತದೆ
ಶೀತ ಮತ್ತು ಕೆಮ್ಮನ್ನು ತಡೆಗಟ್ಟುತ್ತದೆ
ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.
ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್ಟ್ರಿಕ್ ನಿವಾರಿಸುತ್ತದೆ
ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ.








