ಮಡಿಕೇರಿ: ಅರಣ್ಯ ಗಸ್ತಿನಲ್ಲಿದ್ದ ಸಂದರ್ಭ ಕಾಡಾನೆಯೊಂದು ಅಟ್ಟಾಡಿಸಿಕೊಂಡು ಮಾರಣಾತಿಕವಾಗಿ ದಾಳಿ ಮಾಡಿ ವಾಚರ್ ರೊಬ್ಬರನ್ನು ಬಲಿ ತೆಗೆದುಕೊಂಡಿರುವ ಘಟನೆ ನಾಗರಹೊಳೆ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ನಡೆದಿದೆ.

ನಾಗರಹೊಳೆ ಹುಲಿ ಸಂರಕ್ಷಿತಾ ಪ್ರದೇಶದ ಕ್ಷೇಮಾಭಿವೃದ್ದಿ ನೌಕರ ಗುರುಪ್ರಸಾದ್ ಮೃತಪಟ್ಟ ದುರ್ದೈವಿ. ಕೆಲವು ವರ್ಷಗಳಿಂದ ಗೆಸ್ಟ್ ಹೌಸ್, ಐಬಿಗಳಲ್ಲಿ ಇಲಾಖೆಯ ಅಡುಗೆ ಕೆಲಸ ಮಾಡಿಕೊಂಡಿದ್ದ ಹಂಗಾಮಿ ನೌಕರ ಗುರುಪ್ರಸಾದ್ ಹಲವು ಅಧಿಕಾರಿಗಳಿಗೆ ಖಾಯಂ ಕೆಲಸ ನೀಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ, ಆದರೆ ಇಲಾಖೆಯು ಕೇವಲ ಹಂಗಾಮಿ ನೌಕರ ಎಂದು ಗುರುತಿಸಲಾಗಿತ್ತು ಎಂದು ತಿಳಿದು ಬಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








