ಅಮೆರಿಕಾದ ಕೊಲೊರಾಡೋನಲ್ಲಿ ಕಾಡ್ಗಿಚ್ಚು – 500 ಕ್ಕೂ  ಹೆಚ್ಚು ಮನೆಗಳು ನಾಶ

1 min read

ಅಮೆರಿಕಾದ ಕೊಲೊರಾಡೋನಲ್ಲಿ ಕಾಡ್ಗಿಚ್ಚು – 500 ಕ್ಕೂ  ಹೆಚ್ಚು ಮನೆಗಳು ನಾಶ

ಅಮೆರಿಕಾ : ಅಮೆರಿಕದ ಕೊಲೊರಾಡೋನಲ್ಲಿ ಭೀಕರ ಕಾಡ್ಗಿಚ್ಚು ಸಂಭವಿಸಿದ್ದು , ಸುಮಾರು 500ಕ್ಕೂ ಹೆಚ್ಚು ಮನೆಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ..

ಅಲ್ಲದೇ ಸ್ಥಳೀಯ ನಿವಾಸಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಕೊಲೊರಾಡೋ ಸುತ್ತಮುತ್ತ ಬೆಂಕಿ  ಹಬ್ಬಿದ್ದು,  ಘಟನೆಯಿಂದ ಕೆಲವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಕಾಳ್ಗಿಚ್ಚಿಗೆ ಸಿಲುಕಿ ಗಾಯಗೊಂಡಿದ್ದ 6 ಮಂದಿಯನ್ನು ಯುಸಿ ಹೆಲ್ತ್‌ ಬ್ರೂಮ್‌ಫೀಲ್ಡ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಈವರೆಗೂ ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ. 2.5 ಚದರ ಮೈಲುಗಷ್ಟು ಕಾಳ್ಗಿಚ್ಚು ಆವರಿಸಿದೆ..

ಲೂಯಿಸ್‌ವೆಲ್‌ ಪ್ರದೇಶದಲ್ಲಿ ಸುಮಾರು 21,000 ಜನಸಂಖ್ಯೆ ಇದೆ. ಎಲ್ಲರೂ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆಯ ಮುಂದುವರೆದಿದೆ..

ಯುಎಸ್‌ ಹೆದ್ದಾರಿ-36 ಬಂದ್‌ ಮಾಡಲಾಗಿದೆ. ಈ ರಸ್ತೆ ಮಾರ್ಗವಾಗಿ ಯಾವುದೇ ವಾಹನಗಳು ಸಂಚರಿಸದಂತೆ ಕ್ರಮವಹಿಸಲಾಗಿದೆ.

https://twitter.com/i/status/1476786963390910465

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd