ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಸೇರಲಿದ್ದಾರಾ ಅಶ್ವಿನ್..? Ashwin saaksha tv
ಮುಂದಿನ ವರ್ಷದ ಜನವರಿಯಲ್ಲಿ ಐಪಿಎಲ್ 15ನೇ ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ಭಾರಿ ಲೆಕ್ಕಾಚಾರ ಹಾಕಿಕೊಳ್ಳುತ್ತಿವೆ. ಸದ್ಯ ತಮಗೆ ಬೇಕಾಗಿರುವ ಆಟಗಾರರನ್ನು ರಿಟೈನ್ಡ್ ಮಾಡಿಕೊಂಡಿರುವ ಫ್ರಾಂಚೈಸಿಗಳು ಬಲಿಷ್ಠ ತಂಡ ಕಟ್ಟಲು ಮೆಗಾ ಹರಾಜಿಗಾಗಿ ಕಾಯುತ್ತಿವೆ. ಅದರಂತೆ ಕೆಲ ಸ್ಟಾರ್ ಆಟಗಾರರು ಕೂಡ ಈ ಬಾರಿಯ ಮೆಗಾ ಹರಾಜಿಗಾಗಿ ಕಾಯುತ್ತಿದ್ದಾರೆ.
ತಮ್ಮ ನೆಚ್ಚಿನ ತಂಡದ ಪರ ಆಡಲು ಆಟಗಾರರು ಕಾಯುತ್ತಿದ್ದಾರೆ. ಅದರಂತೆ ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ನೆಚ್ಚಿನ ತಂಡದ ಬಗ್ಗೆ ಮಾತನಾಡಿದ್ದಾರೆ. ಸದ್ಯ ಉತ್ತಮ ಟಚ್ ನಲ್ಲಿ ಕಾಣಿಸುತ್ತಿರುವ ಅಶ್ವಿನ್, ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸಿಎಸ್ ಕೆ ಪರ 94 ಮ್ಯಾಚ್ ಗಳನ್ನಾಡಿರುವ ಅಶ್ವಿನ್, 90 ವಿಕೆಟ್ ಪಡೆದಿದ್ದಾರೆ. ಇನ್ನು ಚೆನ್ನೈ ತಂಡದ ಬಗ್ಗೆ ಮಾತನಾಡಿರುವ ಅಶ್ವಿನ್, ಸಿಎಸ್‌ಕೆ ನನಗೆ ತುಂಬಾ ಹತ್ತಿರವಾದ ಫ್ರಾಂಚೈಜಿ, ಎಸ್‌ಎಸ್‌ಕೆ ನನಗೆ ಒಂದು ಸ್ಕೂಲ್‌ನಂತಹದ್ದು. ಅಲ್ಲಿ ನಾನು ಪ್ರೀ ಕೆಜಿ, ಎಲ್‌ಕೆಜಿ, ಯುಕೆಜಿ, ಪ್ರೈಮರೀ ಓದಿದ್ದೇನೆ. ನಂತರ ಹೈಸ್ಕೂಲ್ ಶಿಕ್ಷಣವನ್ನು ಸಹ ಅಲ್ಲೇ ಪ್ರಾರಂಭಿಸಿ, 10 ತರಗತಿಯ ಪರೀಕ್ಷೆಗಳನ್ನು ಮುಗಿಸಿ, ನಾನು ಬೇರೆ ತರಗತಿಗಳಿಗೆ ಹೋದೆ. ನಾನು ನನ್ನ 11,12 ತರಗತಿಗಳನ್ನು ಬೇರೆ ಕಡೆ ಮಾಡಿದ್ದೇನೆ. ಆದರೆ ಎಲ್ಲವನ್ನೂ ಪೂರ್ಣಗೊಳಿಸಿದ ನಂತರ, ಖಂಡಿತವಾಗಿಯೂ ಯಾರಾದರೂ ಮನೆಗೆ ಬರಬೇಕು? ಹೀಗಗಿ ನಾನು ನನ್ನ ಸ್ವಂತ ಮನೆಗೆ( ಸಿಎಸ್ ಕೆ) ವಾಪಸ್ ಹೋಗುದಕ್ಕೆ ಇಷ್ಟಪಡುತ್ತೇನೆ ಎಂದಿದ್ದಾರೆ.