ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ ಮತ್ತು ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನ ತಾರಾ ಅವರ ಪ್ರೇಮ ಕಥೆ ಭಾರಿ ಸದ್ದು ಮಾಡಿತ್ತು. ಇವರು ಮದುವೆ ಸಹ ಮಾಡಿಕೊಂಡಿದ್ದಾರೆ ಎಂದೂ ಕೂಡ ಹೇಳಲಾಗಿತ್ತು. ಆದ್ರೆ ಇಬ್ಬರ ನಡುವೆ ಬಿರುಕು ಮೂಡಿ ಬೇರಾದರು. ಆದ್ರೆ ಈಗ ನಯನತಾರಾ ಮತ್ತು ಪ್ರಭುದೇವಾ ಒಂದಾಗಲಿದ್ದಾರಂತೆ. ಈ ಬಾರಿ ನಿಜಜೀವನದಲ್ಲಲ್ಲ ಬದಲಿಗೆ ಸಿನಿಮಾದಲ್ಲಿ ಒಂದಾಗಲಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ.
ಹೌದು..! 2017 ರಲ್ಲಿ ಪ್ರಭುದೇವಾ ‘ಕರಪ್ಪು ರಾಜಾ ವೆಲ್ಲೈ ರಾಣಿ’ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರಲ್ಲಿ ಸೂರ್ಯ ಮತ್ತು ಕಾರ್ತಿ ಪ್ರಮುಖ ಪಾತ್ರದಲ್ಲಿದ್ದರು. ಆದರೆ ಈ ಸಿನಿಮಾ ಮುಂದುವರೆಯಲಿಲ್ಲ. ಈಗ ಮತ್ತೆ ಆ ಸಿನಿಮಾವನ್ನು ಮುಂದುವರೆಸಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಇದರಲ್ಲಿ ನಯನತಾರಾ ನಾಯಕಿ ಆಗಲಿದ್ದಾರೆ ಎನ್ನಲಾಗುತ್ತಿದೆ.
ವಿಘ್ನೇಶ್ ಶಿವನ್ ಜೊತೆ ಮದುವೆ
ಪ್ರಭುದೇವಾ ಜೊತೆ ಬ್ರೇಕ್ ಅಪ್ ಆದ ನಂತರ ನಯನತಾರಾ, ನಿರ್ದೇಶಕ ವಿಘ್ನೇಶ್ ಶಿವನ್ ಸಖ್ಯ ಬೆಳೆಸಿದ್ದು, ಈ ಜೋಡಿ ಸದ್ಯದಲ್ಲಿಯೇ ದೇವಸ್ಥಾನದಲ್ಲಿ ಮದುವೆ ಸಹ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.








