ಆರ್ ಸಿಬಿ ಕನಸನ್ನು ಭಗ್ನಗೊಳಿಸಿದ ಸನ್ ರೈಸರ್ಸ್…!
2020ರ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಮ್ಯಾಚ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದ್ರಬಾದ್ ತಂಡಗಳ ನಡುವಿನ ಪಂದ್ಯ.
ಬಹುತೇಕ ನಿರೀಕ್ಷೆಯಂತೆ ಸನ್ ರೈಸರ್ಸ್ ಹೈದ್ರಬಾದ್ ತಂಡ ಗೆಲುವಿನ ನಗೆ ಬೀರಿದೆ. ಅನಿರೀಕ್ಷಿತವಾಗಿ ಜಯ ಸಾಧಿಸಬಹುದು ಅಂದುಕೊಂಡಿದ್ದ ಆರ್ ಸಿಬಿ ಸೋಲು ಅನುಭವಿಸಿದೆ.
ಸತತ ನಾಲ್ಕು ಸೋಲುಗಳನ್ನು ಕಂಡ್ರೂ ಆರ್ ಸಿಬಿ ಪ್ಲೇ ಆಫ್ ಗೆ ಎಂಟ್ರಿ ಪಡೆದುಕೊಂಡಿತ್ತು. ಹೀಗಾಗಿ ಎಲಿಮಿನೇಟರ್ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶವನ್ನು ಆರ್ ಸಿಬಿ ನೀಡುತ್ತೆ ಅಂದುಕೊಂಡವರಿಗೆ ನಿರಾಸೆಯಾಗಿದೆ.
ಅಬುಧಾಬಿಯಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದ್ರಬಾದ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.
ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಬ್ಯಾಟಿಂಗ್ ನಲ್ಲಿ ಬದಲಾವಣೆಯನ್ನು ಮಾಡಿಕೊಂಡಿತ್ತು.
ದೇವದತ್ತ್ ಪಡಿಕ್ಕಲ್ ಜೊತೆ ನಾಯಕ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಿದ್ರು.
ಆದ್ರೆ ವಿರಾಟ್ ಕೊಹ್ಲಿಯ ಗೇಮ್ ಪ್ಲಾನ್ ವರ್ಕ್ ಔಟ್ ಆಗಲಿಲ್ಲ. ವಿರಾಟ್ ಕೊಹ್ಲಿ ಕೇವಲ ಆರು ರನ್ ಗಳಿಸಿ ಜೇಸನ್ ಹೋಲ್ಡರ್ ಗೆ ವಿಕೆಟ್ ಒಪ್ಪಿಸಿದ್ರು.
ಇನ್ನೊಂದೆಡೆ ದೇವದತ್ ಪಡಿಕ್ಕಲ್ ಅವರು ಕೇವಲ ಒಂದು ರನ್ ಗೆ ಸೀಮಿತವಾದ್ರು.
ನಂತರ ಆರೋನ್ ಫಿಂಚ್ ಭರವಸೆ ಮೂಡಿಸಿದ್ರೂ 30 ರನ್ ಗೆ ತನ್ನ ಹೋರಾಟವನ್ನು ಮುಗಿಸಿದ್ರು.
ಮತ್ತೊಂದೆಡೆ ಆರ್ ಸಿಬಿಯ ಅಪತ್ಭಾಂದವ ಎಬಿಡಿ ವಿಲಿಯರ್ಸ್ ಏಕಾಂಗಿಯಾಗಿ ಹೋರಾಟ ನಡೆಸಿದ್ರು.
ಇನ್ನುಳಿದಂತೆ ಮೋಯಿನ್ ಆಲಿ ರನೌಟಾದ್ರೆ, ಶಿವಮ್ ದುಬೆ ಎಂಟು ರನ್ ಹಾಗೂ ವಾಷಿಂಗ್ಟನ್ ಸುಂದರ್ ಐದು ರನ್ ಗಳಿಸಿದ್ರು.
ಈ ನಡುವೆ ಎಬಿಡಿ ವಿಲಿಯರ್ಸ್ 43 ಎಸೆತಗಳಲ್ಲಿ ಐದು ಬೌಂಡರಿಗಳ ಸಹಾಯದಿಂದ ಆಕರ್ಷಕ 56 ರನ್ ಸಿಡಿಸಿದ್ರು. ಅಂತಿಮವಾಗಿ ಆರ್ ಸಿಬಿ ತಂಡ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತ್ತು.
ಸವಾಲನ್ನು ಬೆನ್ನಟ್ಟಿದ್ದ ಎಸ್ ಆರ್ ಎಚ್ ತಂಡ ಕ್ಕೆ ಆರ್ ಸಿಬಿ ಬೌಲರ್ ಗಳು ಆರಂಭದಲ್ಲೇ ಆಘಾತ ನೀಡಿದ್ರು.
ಶ್ರೀವಾಸ್ತವ್ಸ್ ಶೂನ್ಯ ಸುತ್ತಿದ್ರೆ, ಡೇವಿಡ್ ವಾರ್ನರ್ 17 ರನ್ ಗಳಿಸಿ ನಿರಾಸೆ ಮೂಡಿಸಿದ್ರು.
ಇನ್ನು ಮನೀಷ್ ಪಾಂಡೆ ಭರವಸೆ ಮೂಡಿಸಿದ್ರೂ 24 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು. ಅದೇ ರೀತಿ ಪ್ರಿಯಮ್ ಗರ್ಗ್ ಏಳು ರನ್ ಗಳಿಸಿ ಚಾಹಲ್ ಗೆ ವಿಕೆಟ್ ಒಪ್ಪಿಸಿದ್ರು.
ಈ ನಡುವೆ ಕೇನ್ ವಿಲಿಯಮ್ಸನ್ ಅವರು ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದ್ರು. ಇವರಿಗೆ ಜೇಸನ್ ಹೋಲ್ಡರ್ ಉತ್ತಮ ಸಾಥ್ ನೀಡಿದ್ರು. ಪರಿಣಾಮ ಎಸ್ ಆರ್ ಎಚ್ ತಂಡ 19.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 132 ರನ್ ದಾಖಲಿಸಿ ಗೆಲುವಿನ ನಗೆ ಬೀರಿತ್ತು.
ಕೇನ್ ವಿಲಿಯಮ್ಸ್ ಅವರು 44 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ ಅಜೇಯ 50 ರನ್ ದಾಖಲಿಸಿದ್ರು.
ಹಾಗೇ ಜೇಸನ್ ಹೋಲ್ಡರ್ 20 ಎಸೆತಗಳಲ್ಲಿ ಮೂರು ಬೌಂಡರಿಗಳ ನೆರವಿನಿಂದ ಅಜೇಯ 24 ರನ್ ಗಳಿಸಿದ್ರು.
ತಾಳ್ಮೆಯ ಆಟದೊಂದಿಗೆ ತಂಡದ ಗೆಲುವಿನ ರೂವಾರಿಯಾದ ಕೇನ್ ವಿಲಿಯಮ್ಸನ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.