ವಿಂಬಲ್ಡನ್ 2021 – 18ನೇ ಬಾರಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ರೋಜರ್ ಫೆಡರರ್..
ಸ್ವಿಸ್ ಮಾಸ್ಟರ್ ರೋಜರ್ ಫೆಡರರ್ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಮೂರನೇ ಸುತ್ತಿನ ಪಂದ್ಯದಲ್ಲಿ ರೋಜರ್ ಫೆಡರರ್ ಅವರು 6-4, 6-4, 5-7, 6-4ರಿಂದ ಬ್ರಿಟನ್ ನ ಕ್ಯಾಮರೊನ್ ನೊರಿಯ್ ಅವರನ್ನು ಮಣಿಸಿದ್ರು.
ಈ ಗೆಲುವಿನೊಂದಿಗೆ ರೋಜರ್ ಫೆಡರರ್ ಅವರು ವಿಂಬಲ್ಡನ್ ಟೂರ್ನಿಯಲ್ಲಿ 18ನೇ ಬಾರಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ.
ಇನ್ನು ಪುರುಷರ ಸಿಂಗಲ್ಸ್ ನ ಮೂರನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝಿವೆರ್ವ್ ಅವರು 6-7, 6-4, 6-3, 7-6ರಿಂದ ಅಮೆರಿಕಾದ ಟೇಲರ್ ಫ್ರಿಟ್ಜ್ ಅವರನ್ನು ಮಣಿಸಿದ್ರು.
ಹಾಗೇ ಇಟಲಿಯ ಮ್ಯಾಟ್ ಬೆರೆಟಿನಿ ಅವರು 6-4, 6-4, 6-4ರಿಂದ ಸ್ಲೊವೇನಿಯಾದ ಆಲ್ಝಾಜ್ ಬೆಡೆನ್ ಅವರನ್ನು ಪರಾಭವಗೊಳಿಸಿದ್ರು.
ಇನ್ನೊಂದೆಡೆ ಆಸ್ಟ್ರೇಲಿಯಾದ ನಿಕ್ ಕೈರ್ಗಿಸೊ ಅವರು ಗಾಯದಿಂದಾಗಿ ವಿಂಬಲ್ಡನ್ ಟೂರ್ನಿಯಿಂದ ಹೊರನಡೆದ್ರು. ಹೀಗಾಗಿ ಕೆನಡಾದ ಫೆಲಿಕ್ಸ್ ಔಜೆರ್ ಅವರು ಸುಲಭವಾಗಿ ನಾಲ್ಕನೇ ಸುತ್ತು ಪ್ರವೇಶಿಸಿದ್ರು.