ಮತ್ತೆ ಮುಂದೂಡಲ್ಪಟ್ಟ  ಆರ್ ಆರ್ ಆರ್ ?? ಕರ್ನಾಟಕದಲ್ಲಿ ಪ್ರಿ ರಿಲೀಸ್ ಈವೆಂಟ್ ರದ್ದು…

1 min read

ಮತ್ತೆ ಮುಂದೂಡಲ್ಪಟ್ಟ  ಆರ್ ಆರ್ ಆರ್ ?? ಕರ್ನಾಟಕದಲ್ಲಿ ಪ್ರಿ ರಿಲೀಸ್ ಈವೆಂಟ್ ರದ್ದು…

ಕೋವಿಡ್ ಪ್ರಕರಣಗಳ ಹೆಚ್ಚಳ ಮತ್ತು  ಒಮಿಕ್ರಾನ್ ಆತಂಕದಿಂದಾಗಿ  ಭಾರತದ  ಎಲ್ಲೆಡೆ  ನಿರ್ಭಂಧಗಳು ಹೇರಲ್ಪಡುತ್ತಿವೆ.  ಇದಕ್ಕೆ ಚಿತ್ರ ರಂಗವೂ ಹೊರತಾಗಿಲ್ಲ.  ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಹಾಕಿರುವುದರಿಂದ  ನೈಟ್ ಶೋಗಳನ್ನ ರದ್ದು ಮಾಡಲಾಗಿದೆ. ಕೆಲವೊಂದು ರಾಜ್ಯಗಳಲ್ಲಿ 50 – 50 ಆಸನಕ್ಕೆ ಮಾತ್ರ ಅವಕಾಶ  ನೀಡಲಾಗಿದೆ.  ಇದರಿಂದ ಸಂಕ್ರಾಂತಿಗೆ ಬಿಡುಗಡೆಯಾಗಬೇಕು ಎಂದು ಕೊಂಡಿರುವ ಚಿತ್ರಗಳು ಮತ್ತೆ ಮುಂದಕ್ಕೋಗುವ ಸಾಧ್ಯತೆ ಹೆಚ್ಚಾಗುತ್ತಿದೆ.

ಸುಮಾರು 400 ಕೊಟಿ ರೂ ಬಜೆಟ್ ನಲ್ಲಿ ತಯರಾಗಿರುವ ಚಿತ್ರ  ಆರ್ ಆರ್ ಆರ್ ಹಲವು ಅಡ್ಡಿ ಆತಂಕಗಳನ್ನ ದಾಟಿಕೊಂಡು ಜನವರಿಗೆ ತೆರೆಗೆ ಬರಲು ರೆಡಿಯಾಗಿತ್ತು ಆದ್ರೆ ಮತ್ತೆ ಚಿತ್ರವನ್ನ ಮುಂದೂಡಲು ಚಿತ್ರ ತಂಡ ನಿರ್ಧರಿಸಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.  ಚಿತ್ರ ತಂಡ  ಅಧಿಕೃತವಾಗಿ ಘೋಷಣೆ ಮಾಡುವುದೊಂದೆ ಬಾಕಿ  ಉಳಿದಿದೆ  ಎನ್ನಲಾಗುತ್ತಿದೆ.

400 ಕೋಟಿ ಹೂಡಿ ನಿರ್ಮಿಸಿರುವ ಚಿತ್ರದ ಬಂಡವಾಳವನ್ನ ಮರಳಿ ಪಡೆಯಬೇಕು ಎಂದರೆ  ಸಿನಿಮಾ ನೋಡುವುದಕ್ಕೆ ಯಾವುದೇ ನಿರ್ಬಂಧಗಳಿರಬಾರದು ಆಗಲೇ ಚಿತ್ರತಂಡ ಹಣ ಗಳಿಸಲು ಸಾಧ್ಯ.  ಹಾಗಾಗಿ ಚಿತ್ರತಂಡ ಮಹತ್ವದ ತೀರ್ಮಾನವನ್ನ ತೆಗೆದುಕೊಂಡು ಮತ್ತೆ ದಿನಾಂಕವನ್ನ ಮುಂದೂಡೂಲು ನಿರ್ಧರಿಸಿದೆ ಎನ್ನುವ ಮಾಹಿತಿಗಳು ಹೊರ ಬೀಳುತ್ತಿವೆ.

ಇದಕ್ಕೆ ಪುಷ್ಠಿ ನೀಡುವಂತೆ ಕರ್ನಾಟಕದಲ್ಲಿ ನಡೆಯ ಬೇಕಿದ್ದ ಪ್ರೀ ರಿಲೀಸ್ ಈವೆಂಟ್  ಮುಂದೂಡಲ್ಪಟ್ಟಿದೆ.  ಜನವರಿ 2 ರಂದು ಕರ್ನಾಕದಲ್ಲಿ ಪ್ರಿ ರಿಲೀಸ್ ಈವೆಂಟ ನಡೆಬೇಕಿತ್ತು. ಅತಿಥಿಗಳಾಗಿ ರಾಕಿಂಗ್ ಸ್ಟಾರ್ ಯಶ್  ಶಿವರಾಜ್ ಕುಮಾರ್ ಉಪೇಂದ್ರ ಹಾಗು ಧ್ರುವ ಸರ್ಜ ಆಗಮಿಸಬೇಕಿತ್ತು.  ಸದ್ಯ ಕಾರ್ಯಕ್ರಮ ಮುಂದೂಡಲ್ಪಟ್ಟಿರುವುದು ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೋಗಿದೆ ಎನ್ನುವುದಕ್ಕೆ ಪುಷ್ಠಿ ಸಿಕ್ಕಂತಾಗಿದೆ. ಯಾವುದೇ ಕ್ಷಣದಲ್ಲಾದರೂ ಆರ್ ಆರ್ ಆರ್ ತಂಡ ಅಧಿಕೃತ ಈ ಸುದ್ದಿಯನ್ನ ಹೇಳಬಹುದು.

ಆರ್ ಆರ್ ಆರ್ ಚಿತ್ರದ ಹಲವು ಹಾಡುಗಳು ಈಗಾಗಲೆ ಬಿಡುಗಡೆಯಾಗಿದ್ದು ಎಲ್ಲಾ ಭಾಷೆಗಳಲ್ಲೂ ಸೂಪರ್ ಹಿಟ್ ಆಗಿವೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd