ನನ್ನ ನಾಯಕತ್ವ ಸುಗಮವಾಗಿ ಸಾಗುತ್ತಿದೆ.. ಕಾರಣ ರಿಕಿ ಪಾಂಟಿಂಗ್ – ರಿಷಬ್ ಪಂತ್

1 min read
rishab pant Ricky Ponting delhi capitals ipl 2021 saakshatv

ನನ್ನ ನಾಯಕತ್ವ ಸುಗಮವಾಗಿ ಸಾಗುತ್ತಿದೆ.. ಕಾರಣ ರಿಕಿ ಪಾಂಟಿಂಗ್ – ರಿಷಬ್ ಪಂತ್

rishab pant Ricky Ponting delhi capitals ipl 2021 saakshatvಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ನಾಯಕ ರಿಷಬ್ ಪಂತ್ ಫುಲ್ ಖುಷಿಯಾಗಿದ್ದಾರೆ. ಕಾರಣ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಒಂದು ಪಂದ್ಯವನ್ನು ಮಾತ್ರ. ಇನ್ನುಳಿದಂತತೆ ಧೋನಿ, ರಾಹುಲ್ ಮತ್ತು ರೋಹಿತ್ ನಾಯಕತ್ವದ ತಂಡಗಳ ವಿರುದ್ಧ ಪಂತ್ ಗೆಲುವು ದಾಖಲಿಸಿದ್ದಾರೆ. ರಾಜಸ್ತಾನ ರಾಯಲ್ಸ್ ವಿರುದ್ಧ ತಾನೇ ಮಾಡಿರುವ ಪ್ರಮಾದದಿಂದ ಸೋಲು ಅನುಭವಿಸಬೇಕಾಯ್ತು. ಇದನ್ನು ಬಿಟ್ರೆ, ರಿಷಬ್ ಪಂತ್ ನಾಯಕನಾಗಿ ಮಿಂಚು ಹರಿಸುತ್ತಿದ್ದಾರೆ.
ಅನುಭವಿ ಆಟಗಾರ ಶಿಖರ್ ಧವನ್ ಜವಾಬ್ದಾರಿಯುತ ಆಟ, ಪೃಥ್ವಿ ಶಾ ಮಿಂಚಿನ ಆಟ, ಮಾರ್ಕಸ್ ಸ್ಟೋನಿಸ್ ಅವರ ಆಲ್ ರೌಂಡ್ ಆಟ ಸೇರಿದಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಸಾಂಘಿಕ ಆಟ ಹೊರಬರುತ್ತಿದೆ. ಹೀಗಾಗಿ ರಿಷಬ್ ಪಂತ್ ಗೆ ಹೆಚ್ಚಿನ ಒತ್ತಡವೇನೂ ಇಲ್ಲ. ಆದ್ರೂ ಸ್ವಲ್ಪ ಒತ್ತಡದಲ್ಲಿರುವುದಂತೂ ಸುಳ್ಳಲ್ಲ.

With Ponting around, my captaincy is going great: Rishab Pant
ಅದೇನೇ ಇರಲಿ, ತನ್ನ ನಾಯಕತ್ವದ ಯಶಸ್ಸಿನ ಬಗ್ಗೆ ರಿಷಬ್ ಪಂತ್ ಮಾತನಾಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನ ನಂತರ ರಿಷಬ್ ಪಂತ್ ಮನಬಿಚ್ಚಿ ಮಾತನಾಡಿದ್ದಾರೆ. \
ನನ್ನ ನಾಯಕತ್ವ ಸುಗಮವಾಗಿ ಸಾಗಲು ಪ್ರಮುಖ ಕಾರಣ ಹೆಡ್ ಕೋಚ್ ರಿಕಿ ಪಾಂಟಿಂಗ್. ತಂಡದ ಯಶಸ್ಸಿನ ಹಿಂದೆ ಪಾಂಟಿಂಗ್ ಅವರ ಅನುಭವ ಮತ್ತು ಚಾಣಕ್ಷತನವಿದೆ ಎಂದು ರಿಷಬ್ ಪಂತ್ ಮಾತಿನಿಂದ ಗೊತ್ತಾಗುತ್ತಿದೆ.
rishab pant Ricky Ponting delhi capitals ipl 2021 saakshatvವಿಕೆಟ್ ಕೀಪರ್ ಆಗಿ ನಾಯಕನಾಗಿ ಪಂದ್ಯದ ಗತಿಯನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಇದು ನಿಜ. ಅಷ್ಟೇ ಅಲ್ಲ, ರಿಕಿ ಪಾಂಟಿಂಗ್ ಕೂಡ ಮುಖ್ಯ ಕಾರಣ. ರಿಕಿ ಪಾಂಟಿಂಗ್ ಅವರು ನಮ್ಮ ತಂಡದ ಮ್ಯಾನೇಜ್ ಮೆಂಟ್. ಹೀಗಾಗಿ ನಾಯಕನಾಗಿ ಯಶಸ್ವಿಯಾಗಿ ಸಾಗಲು ಸಾಧ್ಯವಾಗುತ್ತಿದೆ ಎಂದು ರಿಷಬ್ ಪಂತ್ ಹೇಳಿದ್ದಾರೆ.
ಕೋವಿಡ್ 19ನಿಂದಾಗಿ ತಂಡದ ಪ್ರಯಾಣಕ್ಕೆ ಸ್ವಲ್ಪ ಮಟ್ಟಿನ ತೊಂದರೆಯಾಗುತ್ತಿದೆ. ಆದ್ರೆ ಬಿಸಿಸಿಐ ಎಲ್ಲ ರೀತಿಯಲ್ಲೂ ಸಹಕಾರ ನೀಡುತ್ತಿದೆ. ಜೈವಿಕ ಸುರಕ್ಷತೆಯಿಂದ ಹಿಡಿದು ಪ್ರತಿಯೊಂದು ಹೆಜ್ಜೆಯಲ್ಲೂ ಬಿಸಿಸಿಐ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದ್ರಿಂದ ನಮಗೆ ಆಟದ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತಿದೆ ಎಂದು ರಿಷಬ್ ಪಂತ್ ಕೋವಿಡ್ ಮಾರ್ಗಸೂಚಿಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd