ಒಂದೇ ವರ್ಷದಲ್ಲಿ 7 ಮಂದಿ ವಿರುದ್ಧ ರೇಪ್ ಕೇಸ್ ದಾಖಲಿಸಿದ ಮಹಿಳೆ – ಅದ್ರಲ್ಲಿ 2 ಸುಳ್ಳು ಕೇಸ್..!  

1 min read

ಒಂದೇ ವರ್ಷದಲ್ಲಿ 7 ಮಂದಿ ವಿರುದ್ಧ ರೇಪ್ ಕೇಸ್ ದಾಖಲಿಸಿದ ಮಹಿಳೆ – ಅದ್ರಲ್ಲಿ 2 ಸುಳ್ಳು ಕೇಸ್..!

ಹರಿಯಾಣ : ಮಹಿಳೆಯೊಬ್ಬಳು ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಒಂದಲ್ಲಾ ಎರಡಲ್ಲಾ 7 ಬಾರಿ , ಬೇರೆ ಬೇರೆ ವ್ಯಕ್ತಿಗಳ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಅಲ್ಲದೇ ಆ 7 ಪ್ರಕರಣಗಳಲ್ಲಿ 2 ಕೇಸ್ ಸುಳ್ಳು ಎಂದೀಗ ಸಾಬೀತಾಗಿದೆ.  ಇಂತಹ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.  ಮಹಿಳೆಯೊಬ್ಬರು ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಗುರುಗ್ರಾಮಧ ವಿವಿಧ ಠಾಣೆಗಳಲ್ಲಿ ದೂರು ದಾಖಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಸಾಮಾಜಿಕ ಕಾರ್ಯಕರ್ತೆ ದೀಪಿಕಾ ನಾರಾಯಣ ಭಾರದ್ವಾಜ್ ಅವರು ಹರಿಯಾಣ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.

ಯೂಟ್ಯೂಬ್ ವಿಡಿಯೋ ನೋಡಿ ಮಗುವಿಗೆ ಜನ್ಮ ನೀಡಿದ ಹುಡುಗಿ

ದೂರನ್ನು ಆಧರಿಸಿ ತನಿಖೆ ನಡೆಸುವಂತೆ ಡಿಸಿಪಿ ಹಾಗೂ ಎಸ್‍ಐಟಿ ತನಿಖೆಗೆ ವಹಿಸುವಂತೆ ಸಿಎಂಗೆ ಆಯೋಗ ಪತ್ರ ಬರೆದಿತ್ತು. ಇದೇ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಮತ್ತು ಸಾಕ್ಷ್ಯಚಿತ್ರ ತಯಾರಕ ನಾರಾಯಣ ಭಾರದ್ವಾಜ್ ಅವರು, ಹನಿಟ್ರ್ಯಾಪ್ ಮತ್ತು ನಕಲಿ ಅತ್ಯಾಚಾರ ಪ್ರಕರಣಗಳನ್ನು ದಾಖಲಿಸುವ ಮೂಲಕ ಪುರುಷರನ್ನು ಲೂಟಿ ಮಾಡುತ್ತಿದ್ದಾರೆಂದು ಆರೋಪಿಸಿ ಮಹಿಳೆ ವಿರುದ್ಧ ದೂರು ನೀಡಿದ್ದರು.

ಮನೆಗೆ ಕನ್ನ ಹಾಕಿ ಆಟೋ ಚಾಲಕನ ಜೊತೆಗೆ ಎಸ್ಕೇಪ್ ಆದಳು ಕೋಟ್ಯಾಧೀಶನ ಪತ್ನಿ..!

ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆಂದು ಆರೋಪಿಸಿ ಏಳು ಮಂದಿ ವಿರುದ್ಧ ಮಹಿಳೆ ದೂರು ನೀಡಿದ್ದರು. ಅದರಲ್ಲಿ ಎರಡು ಸುಳ್ಳು ಪ್ರಕರಣಗಳಾಗಿವೆ ಎಂಬುದನ್ನು ಪೊಲೀಸರು ಸಾಬೀತುಪಡಿಸಿದ್ದಾರೆ.  ಹರಿಯಾಣದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರೀತಿ ಭಾರದ್ವಾಜ್ ದಲಾಲ್ ಅವರು ಈ ಪ್ರಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಹಿಳೆಯರಿಗಾಗಿ ರಚಿಸಿರುವ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರಿಸಿದ್ದಾರೆ.

ಮದ್ಯಕ್ಕೆ 10.ರೂ  ಕೊಡದಕ್ಕೆ ಸ್ನೇಹಿತನನ್ನೇ ಬರ್ಬರವಾಗಿ ಕೊಂದ ಕಿಡಿಗೇಡಿಗಳು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd