800 ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಿದ ಮಹಿಳಾ ಪೈಲಟ್ – Saaksha Tv
ನವದೆಹಲಿ: ಆಪರೇಷನ್ ಗಂಗಾ ಕಾರ್ಯಾಚರಣೆಯಲ್ಲಿ ಭಾಗವಹಿಸಿ 800 ಭಾರತೀಯ ವಿದ್ಯಾರ್ಥಿಗಳನ್ನು ಮಹಿಳಾ ಪೈಲಟ್ ಮಹಾಶ್ವೇತಾ ಚಕ್ರವರ್ತಿ ಅವರು ರಕ್ಷಣೆ ಮಾಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ 24 ವರ್ಷದ ಮಹಿಳಾ ಪೈಲಟ್ ಮಹಾಶ್ವೇತಾ ಚಕ್ರವರ್ತಿ ಅವರು ಪೋಲೆಂಡ್ ಮತ್ತು ಹಂಗೇರಿಗಡಿಗಳಿಂದ ಸುಮಾರು 800 ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತಂದಿದ್ದಾರೆ. ಆಪರೇಷನ್ ಗಂಗಾದ ಹೆಮ್ಮೆಯ ಸದಸ್ಯರಾದ ಮಹಾಶ್ವೇತಾ ಚಕ್ರವರ್ತಿ ಅವರು ಕೋಲ್ಕತ್ತಾದ ನ್ಯೂಟೌನ್ ನಿವಾಸಿಯಾಗಿದ್ದು, ಫೆಬ್ರವರಿ 27 ಮತ್ತು ಮಾರ್ಚ್ 7ರ ನಡುವೆ ಆರು ಬಾರಿ ಸ್ಥಳಾಂತರಿಸುವ ವಿಮಾನಗಳನ್ನು ಹಾರಿಸಿದ್ದರು.
She is Mahasweta Chakraborty, Daughter of Tanuja Chakraborty (President of WB State BJP Mahila Morcha).
Mahasweta, a 24yr old pilot from Kolkata, rescued more than 800 Indian students from the border of Ukraine, Poland & Hungary.
Huge Respect for her. 🙏🏻https://t.co/Sn5JVJbAco pic.twitter.com/4ISOHHfq14— Priyanka Sharma 🇮🇳 (@Priyankabjym) March 12, 2022
ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಉಪಾಧ್ಯಕ್ಷೆ ಪ್ರಿಯಾಂಕಾ ಶರ್ಮಾ ಈ ಕುರಿತಾದ ಮಾಹಿತಿಯನ್ನ ಟ್ವೀಟ್ ಮಾಡಿದ್ದು, ಮಹಾಶ್ವೇತಾ ಪಶ್ಚಿಮ ಬಂಗಾಳದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ತನುಜಾ ಚಕ್ರವರ್ತಿ ಅವರ ಪುತ್ರಿ, ಪೋಲೆಂಡ್ ಮತ್ತು ಹಂಗೇರಿಯಿಂದ 800 ವಿದ್ಯಾರ್ಥಿಗಳನ್ನು ಸ್ಥಳಾಂತರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 24ರಂದು ರಷ್ಯಾ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅಂದಿನಿಂದ ಆಪರೇಷನ್ ಗಂಗಾ ಕಾರ್ಯಾಚರಣೆಯಡಿ ಭಾರತವು ಈವರೆಗೆ 20,000ಕ್ಕೂ ಹೆಚ್ಚು ಭಾರತೀಯರನ್ನ ಯುದ್ಧ ಪೀಡಿತ ಉಕ್ರೇನ್‌ನಿಂದ ಸ್ಥಳಾಂತರಿಸಿದೆ.