Women’s Cricket: ಭಾರತ ಇಂಗ್ಲೆಂಡ್ ನಡುವೆ 2 ನೇ ಏಕದಿನ ಪಂದ್ಯ
ಮಹಿಳಾ ಕ್ರಿಕೆಟ್‌ನಲ್ಲಿ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವು ಇಂದು ಸಂಜೆ, ಸೆಪ್ಟೆಂಬರ್ 21 ರಂದು ಕ್ಯಾಂಟರ್ಬರಿಯ ಸೇಂಟ್ ಲಾರೆನ್ಸ್ ಮೈದಾನದಲ್ಲಿ ನಡೆಯಲಿದೆ. ಪಂದ್ಯವು 5.30 PM ಕ್ಕೆ (ಭಾರತೀಯ ಕಾಲಮಾನ) ಪ್ರಾರಂಭವಾಗುತ್ತದೆ.
ಆತಿಥೇಯರ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 1-0 ಮುನ್ನಡೆ ಸಾಧಿಸಿದೆ.
ಭಾನುವಾರ ಸೆಪ್ಟೆಂಬರ್ 18 ರಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 228 ರನ್ ಗಳ ಗುರಿಯೊಂದಿಗೆ ಭಾರತ ಕೇವಲ 44.2 ಓವರ್ ಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟಕ್ಕೆ ಗುರಿಯನ್ನು ಮೀರಿತು. ಸ್ಮೃತಿ ಮಂಧಾನ 91 ರನ್‌ಗಳೊಂದಿಗೆ ಭಾರತವನ್ನು ಮುನ್ನಡೆಸಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ ಅಜೇಯ 74 ರನ್ ಗಳಿಸಿದರು.
ಮೂರನೇ ಮತ್ತು ಅಂತಿಮ ಏಕದಿನ ಸರಣಿ ಸೆಪ್ಟೆಂಬರ್ 24 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ. Women’s Cricket, 2nd ODI match between India and England to be played at Canterbury this evening