Womens ODI Rankings: ಟಾಪ್ 10ನಲ್ಲಿ ಟೀಂ ಇಂಡಿಯಾದ ವೈಸ್ ಕ್ಯಾಪ್ಟನ್
ದುಬೈ: ಶ್ರೀಲಂಕಾ ಪ್ರವಾಸದಲ್ಲಿ ಮಿಂಚಿದ ಭಾರತದ ಮಹಿಳಾ ಕ್ರಿಕೆಟಿಗರಾದ ಸ್ಮೃತಿ ಮಂಧಾನ ಮತ್ತು ಹರ್ಮನ್‌ಪ್ರೀತ್ ಕೌರ್ ಐಸಿಸಿ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಸುಧಾರಿಸಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಗಳವಾರ ಬಿಡುಗಡೆ ಮಾಡಿದ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ, ಸ್ಟಾರ್ ಆರಂಭಿಕ ಆಟಗಾರ್ತಿ ಮಂಧಾನ ಒಂಬತ್ತನೇ ಸ್ಥಾನಕ್ಕೆ ಏರಿದ್ದಾರೆ ಮತ್ತು ನಾಯಕಿ ಹರ್ಮನ್‌ಪ್ರೀತ್ 13 ನೇ ಸ್ಥಾನದಲ್ಲಿದ್ದಾರೆ.

ಲಂಕಾ ಸರಣಿಯಲ್ಲಿ ಹರ್ಮನ್ 59.50 ಸರಾಸರಿಯಲ್ಲಿ 119 ರನ್ ಗಳಿಸಿದರು. ಬೌಲಿಂಗ್ ನಲ್ಲಿ 3 ವಿಕೆಟ್ ಪಡೆದರು.
ಆರಂಭಿಕ ಆಟಗಾರ್ತಿ ಮಂಧಾನ 52ರ ಸರಾಸರಿಯಲ್ಲಿ 104 ರನ್ ಗಳಿಸಿದರು.
ಏಕದಿನ ಬೌಲಿಂಗ್ ವಿಭಾಗದಲ್ಲಿ ರಾಜೇಶ್ವರಿ ಗಾಯಕ್ವಾಡ್ ಮೂರು ಸ್ಥಾನ ಸುಧಾರಿಸಿ ಒಂಬತ್ತನೇ ಕ್ರಮಾಂಕದಲ್ಲಿ ಮುಂದುವರಿದಿದ್ದಾರೆ.