ADVERTISEMENT
Saturday, August 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

Womens T20 World Cup 2023  : ಆಫ್ರಿಕಾಗೆ ಒಲಿಯದ ಅದೃಷ್ಟ – ಆಸ್ಟ್ರೇಲಿಯಾ  6ನೇ ಬಾರಿಗೆ  ಚಾಂಪಿಯನ್ ….

ಕೇಪ್ ಟೌನ್ ನಲ್ಲಿ ನಡೆದ ವಿಶ್ವಕಪ್ ಹಣಾಹಣಿಯಲ್ಲಿ  ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಗೆ 156 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 137 ರನ್ ಗಳಿಸಲಷ್ಟೇ ಶಕ್ತವಾಯಿತು. 

Naveen Kumar B C by Naveen Kumar B C
February 27, 2023
in ಕ್ರಿಕೆಟ್, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

Womens T20 World Cup 2023  : ಆಫ್ರಿಕಾಗೆ ಒಲಿಯದ ಅದೃಷ್ಟ – ಆಸ್ಟ್ರೇಲಿಯಾ  6ನೇ ಬಾರಿಗೆ  ಚಾಂಪಿಯನ್ ….

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ  ಆಟಗಾರ್ತಿಯರು ಮತ್ತೊಮ್ಮೆ ಅಬ್ಬರಿಸಿದ್ದಾರೆ.   ಕ್ರಿಕೆಟ್ ನಲ್ಲಿ ಮತ್ತೊಮ್ಮೆ ತಮ್ಮ ಪ್ರಾಬಲ್ಯ ಮೆರೆದ ಆಸ್ಟ್ರೇಲಿಯಾ  ದಕ್ಷಿಣ ಆಫ್ರಿಕಾ ವಿರುದ್ಧ 19 ರನ್ ಗಳಿಂದ ವಿಜಯ ಸಾಧಿಸಿ  6ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ್ದಾರೆ.

ಕೇಪ್ ಟೌನ್ ನಲ್ಲಿ ನಡೆದ ವಿಶ್ವಕಪ್ ಹಣಾಹಣಿಯಲ್ಲಿ  ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಗೆ 156 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 137 ರನ್ ಗಳಿಸಲಷ್ಟೇ ಶಕ್ತವಾಯಿತು.

ಆರಂಭಿಕ ಆಟಗಾರ್ತಿ ಲಾರಾ ಓಲ್ವಾರ್ಟ್ 61 ರನ್ ಗಳಿಸಿದರೆ, ಕ್ಲೋಯ್ ಟ್ರಯಾನ್ 25 ರನ್ ಗಳಿಸಿದರು. ಓಲ್ವರ್ಟ್ ಔಟಾದ ನಂತರ ದಕ್ಷಿಣ ಆಫ್ರಿಕಾದ ಸ್ಕೋರ್ ನಿಧಾನವಾಯಿತು. ಅಂತಿಮ ಪಂದ್ಯದಲ್ಲಿ 74 ರನ್ ಗಳಿಸಿ ಅಜೇಯರಾಗಿ ಉಳಿದ ಆಸೀಸ್ ಆರಂಭಿಕ ಆಟಗಾರ್ತಿ ಬೆತ್ ಮೂನಿ ಪಂದ್ಯ ಶ್ರೇಷ್ಠರಾದರು. ಆಸೀಸ್ ಆಲ್ ರೌಂಡರ್ ಆಶ್ಲೇ ಗಾರ್ಡ್ನರ್  ವುಮೆನ್ ಆಫ್  ಸಿರೀಸ್  ಪ್ರಶಸ್ತಿ  ಪಡೆದಿದ್ದಾರೆ.

ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 156 ರನ್ ಗಳಿಸಿತು. ಆಫ್ರಿಕಾ ಬೌಲರ್‌ಗಳು ಆಸೀಸ್ ಬ್ಯಾಟಿಂಗ್ ಲೈನ್‌ ಅಪ್ ಅನ್ನು ಪರಿಣಾಮಕಾರಿಯಾಗಿ ಕಟ್ಟಿಹಾಕಿದರು. ಬೃಹತ್ ಸ್ಕೋರ್ ಮಾಡದಂತೆ ತಡೆದರು. ಶಬ್ನಿಮ್ ಇಸ್ಮಾಯಿಲ್ ಮತ್ತು ಮರಿಜಾನೆ ಕಾಪ್ ತಲಾ ಎರಡು ವಿಕೆಟ್ ಪಡೆದರು. ಮ್ಲಾಬಾ ಮತ್ತು ಕ್ಲೋಯ್ ಟ್ರಯಾನ್ ತಲಾ ಒಂದು ವಿಕೆಟ್ ಪಡೆದರು. ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರ್ತಿ ಬೆತ್ ಮೂನಿ ಅರ್ಧಶತಕ ಗಳಿಸಿದರು. ಅವರು 53 ಎಸೆತಗಳಲ್ಲಿ 74 ರನ್ ಗಳಿಸಿ ಔಟಾಗದೆ ಉಳಿದರು. ಆಶ್ಲೇ ಗಾರ್ಡ್ನರ್ 29 ಮತ್ತು ವಿಕೆಟ್ ಕೀಪರ್ ಅಲಿಸ್ಸಾ ಹೀಲಿ 18 ರನ್ ಗಳಿಸಿದರು.

ಕಳೆದ ಟಿ20 ವಿಶ್ವಕಪ್‌ನಲ್ಲೂ ಆಸ್ಟ್ರೇಲಿಯಾ ಹುಡುಗಿಯರೇ ಗೆದ್ದಿದ್ದರು. ಇತ್ತೀಚಿನ ಗೆಲುವಿನೊಂದಿಗೆ ಪ್ರಶಸ್ತಿಯನ್ನ ಉಳಿಸಿಕೊಂಡಿದೆ. ಒಟ್ಟಾರೆ, ಆಸೀಸ್ ಮಹಿಳಾ ತಂಡಕ್ಕೆ ಇದು 6ನೇ ಟಿ20 ವಿಶ್ವಕಪ್. 2010, 2012, 2014, 2018, 2020ರಲ್ಲಿ ಆಸೀಸ್ ಟಿ20 ವಿಶ್ವಕಪ್ ಗೆದ್ದಿತ್ತು.

Related posts

ಕಟ್ಕೊಂಡೋರು-ಇಟ್ಕೊಂಡೋರ ಖಾತೆಗೆ ಹಗರಣದ ಹಣ:ಯಾರು ಯಾರನ್ನ ಇಟ್ಕೊಂಡಿದ್ದಾರೆ ಅಂತ ಕೇಳಬೇಡಿ- ಸಚಿವ ನಾಗೇಂದ್ರ ವಿರುದ್ಧ ಸಿ.ಟಿ ರವಿ ವ್ಯಂಗ್ಯ.

ಕಟ್ಕೊಂಡೋರು-ಇಟ್ಕೊಂಡೋರ ಖಾತೆಗೆ ಹಗರಣದ ಹಣ:ಯಾರು ಯಾರನ್ನ ಇಟ್ಕೊಂಡಿದ್ದಾರೆ ಅಂತ ಕೇಳಬೇಡಿ- ಸಚಿವ ನಾಗೇಂದ್ರ ವಿರುದ್ಧ ಸಿ.ಟಿ ರವಿ ವ್ಯಂಗ್ಯ.

August 29, 2026
ಯಶ್‌ ‘ಟಾಕ್ಸಿಕ್’ ಚಿತ್ರದ ಬಗ್ಗೆ ಅಣ್ಣಾಮಲೈ ಅಸಮಾಧಾನ; ‘ನಿಯಮಗಳನ್ನು ಬಿಗಿಗೊಳಿಸಬೇಕು’

ಯಶ್‌ ‘ಟಾಕ್ಸಿಕ್’ ಚಿತ್ರದ ಬಗ್ಗೆ ಅಣ್ಣಾಮಲೈ ಅಸಮಾಧಾನ; ‘ನಿಯಮಗಳನ್ನು ಬಿಗಿಗೊಳಿಸಬೇಕು’

August 29, 2026

Womens T20 World Cup 2023 : Unlucky for Africa – Australia champions for 6th time…

Tags: Women's T20 World Cup 2023
ShareTweetSendShare
Join us on:

Related Posts

ಕಟ್ಕೊಂಡೋರು-ಇಟ್ಕೊಂಡೋರ ಖಾತೆಗೆ ಹಗರಣದ ಹಣ:ಯಾರು ಯಾರನ್ನ ಇಟ್ಕೊಂಡಿದ್ದಾರೆ ಅಂತ ಕೇಳಬೇಡಿ- ಸಚಿವ ನಾಗೇಂದ್ರ ವಿರುದ್ಧ ಸಿ.ಟಿ ರವಿ ವ್ಯಂಗ್ಯ.

ಕಟ್ಕೊಂಡೋರು-ಇಟ್ಕೊಂಡೋರ ಖಾತೆಗೆ ಹಗರಣದ ಹಣ:ಯಾರು ಯಾರನ್ನ ಇಟ್ಕೊಂಡಿದ್ದಾರೆ ಅಂತ ಕೇಳಬೇಡಿ- ಸಚಿವ ನಾಗೇಂದ್ರ ವಿರುದ್ಧ ಸಿ.ಟಿ ರವಿ ವ್ಯಂಗ್ಯ.

by Shwetha
August 29, 2026
0

ಚಿಕ್ಕಮಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ವಾಲ್ಮೀಕಿ ನಿಗಮದ ಹಣ ದುರುಪಯೋಗ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಯ ಬೆನ್ನಲ್ಲೇ...

ಯಶ್‌ ‘ಟಾಕ್ಸಿಕ್’ ಚಿತ್ರದ ಬಗ್ಗೆ ಅಣ್ಣಾಮಲೈ ಅಸಮಾಧಾನ; ‘ನಿಯಮಗಳನ್ನು ಬಿಗಿಗೊಳಿಸಬೇಕು’

ಯಶ್‌ ‘ಟಾಕ್ಸಿಕ್’ ಚಿತ್ರದ ಬಗ್ಗೆ ಅಣ್ಣಾಮಲೈ ಅಸಮಾಧಾನ; ‘ನಿಯಮಗಳನ್ನು ಬಿಗಿಗೊಳಿಸಬೇಕು’

by Shwetha
August 29, 2026
0

ಯಶ್ ನಟನೆಯ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ಕುರಿತು ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸಿನಿಮಾಗಳಲ್ಲಿ ಮಹಿಳೆಯರನ್ನು ಚಿತ್ರಿಸುವ ರೀತಿಯ...

ಬೇರೆಯವರ ಜೊತೆ ಮಾತಾಡಿದಂಗೆ ನನ್ ಹತ್ರ ಮಾತಾಡ್ಬೇಡಿ: ಅಕ್ರಮ ಮುಚ್ಚಿಹಾಕಲು ಗೃಹ ಇಲಾಖೆ ತಗೊಂಡ್ರಾ- ಪ್ರಿಯಾಂಕ್ ಖರ್ಗೆಗೆ HD ಕುಮಾರಸ್ವಾಮಿ ಖಡಕ್ ವಾರ್ನಿಂಗ್

ಬೇರೆಯವರ ಜೊತೆ ಮಾತಾಡಿದಂಗೆ ನನ್ ಹತ್ರ ಮಾತಾಡ್ಬೇಡಿ: ಅಕ್ರಮ ಮುಚ್ಚಿಹಾಕಲು ಗೃಹ ಇಲಾಖೆ ತಗೊಂಡ್ರಾ- ಪ್ರಿಯಾಂಕ್ ಖರ್ಗೆಗೆ HD ಕುಮಾರಸ್ವಾಮಿ ಖಡಕ್ ವಾರ್ನಿಂಗ್

by Shwetha
August 29, 2026
0

ಮೈಸೂರು: ರಾಜ್ಯ ರಾಜಕಾರಣದಲ್ಲಿ ಈಗ ಕೆಪಿಎಸ್ಸಿ ಅಕ್ರಮದ ವಿಚಾರವಾಗಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಭೀಕರ ವಾಕ್ಸಮರ ಶುರುವಾಗಿದೆ....

‘ಈ ನೆಗೆಟಿವಿಟಿ ನನ್ನ ಮಗನಿಗೆ ಕೌಂಟ್ ಆಗಲ್ಲ’: ಟಾಕ್ಸಿಕ್ ಟ್ರೋಲ್‌ಗಳಿಗೆ ಯಶ್ ತಾಯಿ ಖಡಕ್ ತಿರುಗೇಟು

‘ಈ ನೆಗೆಟಿವಿಟಿ ನನ್ನ ಮಗನಿಗೆ ಕೌಂಟ್ ಆಗಲ್ಲ’: ಟಾಕ್ಸಿಕ್ ಟ್ರೋಲ್‌ಗಳಿಗೆ ಯಶ್ ತಾಯಿ ಖಡಕ್ ತಿರುಗೇಟು

by Shwetha
August 29, 2026
0

ಯಶ್ ನಟನೆಯ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ಕುರಿತು ಕೇಳಿಬರುತ್ತಿರುವ ನೆಗೆಟಿವ್ ಕಾಮೆಂಟ್‌ಗಳು ಹಾಗೂ ಟ್ರೋಲ್‌ಗಳಿಗೆ ನಟ ಯಶ್ ಅವರ ತಾಯಿ ಪುಷ್ಪಾ...

ಶಾಲೆಯಲ್ಲಷ್ಟೇ ಅಲ್ಲ ಮನೆ ಮುಂದೆಯೂ ಬಂತು ವಂದೇ ಮಾತರಂ:ಗೃಹಪ್ರವೇಶದ ಮನೆ ಮುಂದೆ ವಂದೇ ಮಾತರಂ ಸೆಲ್ಫಿ ಸ್ಪಾಟ್ ನಿರ್ಮಿಸಿದ ಶಿಕ್ಷಕಿ

ವಾಲ್ಮೀಕಿ ಹಗರಣ ಬಿಜೆಪಿಯ ಷಡ್ಯಂತ್ರ:ಕಣ್ಣೀರಿಟ್ಟ ಬಿ ನಾಗೇಂದ್ರಗೆ ಬಿಕೆ ಹರಿಪ್ರಸಾದ್ ಸಾಂತ್ವನ ನಡುನೀರಲ್ಲಿ ಕೈಬಿಡಲ್ಲ ಎಂದ ಕಾಂಗ್ರೆಸ್ ಅಧ್ಯಕ್ಷ

by Shwetha
August 29, 2026
0

ಬೆಂಗಳೂರು: ವಾಲ್ಮೀಕಿ ನಿಗಮದ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕಣ್ಣೀರಿಟ್ಟ ಬಿ ನಾಗೇಂದ್ರ ಅವರಿಗೆ ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಭರವಸೆಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram