ಆಸ್ಟ್ರೇಲಿಯಾದಲ್ಲಿ ನಾಳೆಯಿಂದ 2020ರ ಮಹಿಳಾ ಟಿ-20 ವಿಶ್ವಕಪ್ ಹಬ್ಬ ಆರಂಭವಾಗಲಿದೆ. ನಾಳೆ ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವಿನ ಕಾಳಗದ ಮೂಲಕ ಟಿ-20 ಸಮರಕ್ಕೆ ಚಾಲನೆ ಸಿಗಲಿದೆ. ಒಟ್ಟು 10 ತಂಡಗಳು ಈ ಬಾರಿ ವಿಶ್ವಕಪ್ ನಲ್ಲಿ ಭಾಗವಹಿಸುತ್ತಿದ್ದು, ಈ ತಂಡಗಳನ್ನು ಎರಡು ವಿಭಾಗಗಳಾಗಿ(ಗ್ರೂಪ್ ಎ ಹಾಗೂ ಗ್ರೂಪ್ ಬಿ) ವಿಂಗಂಡನೆ ಮಾಡಲಾಗಿದೆ.
ಗ್ರೂಪ್ ಎ ನಲ್ಲಿ ಭಾರತ , ನ್ಯೂಜಿಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ತಂಡಗಳಿವೆ.
ಬಿ ಗ್ರೂಪ್ ನಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಥೈಲಾಂಡ್ ಹಾಗೂ ಪಾಕಿಸ್ತಾನ ತಂಡಗಳಿವೆ.
ಲೀಗ್ ಹಂತದಲ್ಲಿ ಗ್ರೂಪ್ ನಲ್ಲಿರುವ ಎಲ್ಲಾ ತಂಡಗಳು ಒಂದು ಬಾರಿ ಮುಖಾಮುಖಿಯಾಗಿ ಕಾದಾಟ ನಡೆಸಲಿವೆ. ಲೀಗ್ ಹಂತದಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿದ್ದು, ನಂತರ ಎರಡೂ ಗ್ರೂಪ್ ನಲ್ಲಿ ಟಾಪ್ ಎರಡು ಸ್ಥಾನ ಪಡೆದುಕೊಂಡ ತಂಡಗಳು ಸೆಮಿಫೈನಲ್ ನಲ್ಲಿ ಕಾದಾಡಲಿವೆ.
ಮಾರ್ಚ್ 3 ರಂದು ಕೊನೆಯ ಲೀಗ್ ಪಂದ್ಯ ನಡೆಯಲಿದ್ದು, ಮಾರ್ಚ್ 5 ಕ್ಕೆ ಎರಡೂ ಸೆಮಿ ಫೈನಲ್ ಮ್ಯಾಚ್ ನಡೆಯಲಿವೆ.
ಸೆಮಿಫೈನಲ್ ನಲ್ಲಿ ಗೆದ್ದ ತಂಡಗಳು ಮಾರ್ಚ್ 8 ರಂದು ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ವಿಶ್ವಕಪ್ ಟ್ರೋಫಿಗಾಗಿ ಅಂತಿಮ ಪೈಪೋಟಿ ನಡೆಸಲಿವೆ.
ನಂದಿನಿ ಹಾಲಿನ ದರ ಏರಿಕೆ :KMF ಅಧ್ಯಕ್ಷರ ಸ್ಪಷ್ಟನೆ
KMF (ಕರ್ನಾಟಕ ಹಾಲು ಒಕ್ಕೂಟ) ಅಧ್ಯಕ್ಷ ಭೀಮಾ ನಾಯ್ಕ ಅವರು, ಸದ್ಯಕ್ಕೆ ನಂದಿನಿ ಹಾಲಿನ ದರದಲ್ಲಿ ಯಾವುದೇ ಏರಿಕೆ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ...