ಸೂಪರ್ 12ನಲ್ಲಿ ಅಜೇಯ ತಂಡಗಳ ಕಾದಾಟ – ಗ್ರೂಪ್ ಅಗ್ರಸ್ಥಾನಿಯಾಗಲು ಆಸ್ಟ್ರೇಲಿಯಾ, ಇಂಗ್ಲೆಂಡ್ ಆಟ
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆ್ಯಶಸ್ ಕಾದಾಟಕ್ಕೂ ಮುನ್ನ ಟಿ20 ವಿಶ್ವಕಪ್ನ ಲೀಗ್ ಪಂದ್ಯಗಳಲ್ಲಿ ಮುಖಾಮುಖಿ ಆಗುತ್ತಿವೆ. ಅಚ್ಚರಿ ಅಂದರೆ ಇಲ್ಲಿ ಗೆದ್ದವರು ಅಗ್ರಸ್ಥಾನ ಪಡೆಯುತ್ತಾರೆ.
ಇಂಗ್ಲೆಂಡ್ ಇಲ್ಲಿ ತನಕ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾ ತಂಡವನ್ನು ಸೋಲಿಸಿದ್ದರೆ, ಆಸ್ಟ್ರೇಲಿಯಾ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದೆ.
ಸದ್ಯ ಇಂಗ್ಲೆಂಡ್ ರನ್ ರೇಟ್ ಆಧಾರದಲ್ಲಿ ಗ್ರೂಪ್ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದರೆ, ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದೆ. ಹೀಗಾಗಿ ದುಬೈನಲ್ಲಿ ನಡೆಯುತ್ತಿರುವ ಈ ಪಂದ್ಯ ಟಾಪ್ ಫೈಟ್ ಆಗಿ ಮೂಡಿಬರಲಿದೆ.
ಆಸ್ಟ್ರೇಲಿಯಾ ಸಖತ್ ಸ್ಟ್ರಾಂಗ್ ಆಗಿ ಕಾಣುತ್ತಿದೆ. ಡೇವಿಡ್ ವಾರ್ನರ್ ಮತ್ತು ಆ್ಯರೋನ್ ಫಿಂಚ್ ಫಾರ್ಮ್ಗೆ ಬಂದಿರೋದು ಕಾಂಗರುಗಳಿಗೆ ಶಕ್ತಿ ತುಂಬಿದೆ.
ಗ್ಲೆನ್ ಮ್ಯಾಕ್ಸ್ವೆಲ್, ಸ್ಟೀವನ್ ಸ್ಮಿತ್, ಮಿಚೆಲ್ ಮಾರ್ಷ್ ಮತ್ತು ಮ್ಯಾಥ್ಯೂ ವೇಡ್ ಜೊತಗೆ ಮಾರ್ಕಸ್ ಸ್ಟೋಯ್ನಿಸ್ ಕೂಡ ಬ್ಯಾಟ್ ಬೀಸಬಲ್ಲರು. ಬೌಲಿಂಗ್ ಯೂನಿಟ್ ಬಗ್ಗೆ ಮಾತೇ ಇಲ್ಲ.
ಸ್ಟಾರ್ಕ್, ಹೇಜಲ್ವುಡ್ ಮತ್ತು ಕಮಿನ್ಸ್ ವೇಗದ ಜೊತೆಗೆ ಜಂಪಾ ಸ್ಪಿನ್ ಬಲವಿದೆ. ಮ್ಯಾಕ್ಸ್ ವೆಲ್, ಸ್ಟೋಯ್ನಿಸ್ ಮತ್ತು ಮಾರ್ಷ್ ಅಗತ್ಯ ಬಿದ್ದರೆ ಬೌಲಿಂಗ್ ಕೂಡ ಮಾಡಬಲ್ಲರು.
ಇಂಗ್ಲೆಂಡ್ ಕೂಡ ಆಸ್ಟ್ರೇಲಿಯಾಕ್ಕೆ ಸಮನಾದ ಬಲವನ್ನೇ ಹೊಂದಿದೆ. ಬಟ್ಲರ್,ರಾಯ್, ಬೇರ್ಸ್ಟೋವ್, ಮಲಾನ್, ಮೊರ್ಗಾನ್, ಮೊಯಿನ್ ಅಲಿಯಂತಹ ವಿಸ್ಪೋಟಕ ಬ್ಯಾಟರ್ಗಳಿದ್ದಾರೆ.
ಅದಿಲ್ ರಶೀದ್, ಕ್ರಿಸ್ ಜೊರ್ಡಾನ್, ತೈಮಲ್ ಮಿಲ್ಸ್ ಮತ್ತು ಕ್ರಿಸ್ ವೋಕ್ಸ್ರಂತಹ ಬೌಲರ್ಗಳಿದ್ದಾರೆ. ಆದರೆ ಇಂಗ್ಲೆಂಡ್ ತಂಡ 5ನೇ ಬೌಲರ್ ಬಗ್ಗೆ ಯೋಚನೆ ಮಾಡುತ್ತಿದೆ. ಇಲ್ಲಿ ತನಕ ಮೊಯಿನ್ ಅಲಿ ಆ ಕಾರ್ಯವನ್ನು ನಿಭಾಯಿಸಿದ್ದಾರೆ. ಆದರೆ ಬಲಿಷ್ಠ ತಂಡಗಳ ಎದುರು ಮೊಯಿನ್ ಏನ್ ಮಾಡ್ತಾರೆ ಅನ್ನುವುದು ಚರ್ಚೆಯಲ್ಲಿ ಇದೆ.
ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದೆ. ಟಾಸ್ ಮತ್ತು ಡ್ಯೂ ಫ್ಯಾಕ್ಟರ್ ಬಗ್ಗೆ ಎರಡೂ ತಂಡಗಳು ಕೂಡ ಗಮನ ಇಟ್ಟಿವೆ. ಒಟ್ಟಿನಲ್ಲಿ ಎರಡು ಬಲಿಷ್ಠ ತಂಡಗಳ ಹೋರಾಟ ಗ್ರೂಪ್ ಆಫ್ ಡೆತ್ನ ಫೈಟ್ ಅನ್ನು ಮತ್ತಷ್ಟು ಹೆಚ್ಚಿಸಿದೆ.