World Cup : ಹೊಸ ಅಂದಾಜ್ ನಲ್ಲಿ 2024 t20 ವಿಶ್ವಕಪ್..!!
T20 World Cup
2022 ರ ಟಿ 20 ವಿಶ್ವಕಪ್ ನಲ್ಲಿ ಸೆಮಿ ಫೈನಲ್ ಭಾರತ ಇಗ್ಲೆಂಡ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು.. ಪಾಕಿಸ್ತಾನ ತಂಡವನ್ನ ಫೈನಲ್ಸ್ ನಲ್ಲಿ ಸೆದೆಬಡಿದು ವಿನ್ನರ್ ಟ್ರೋಫಿಗೆ ಆಂಗ್ಲರು ಮುತ್ತಿಟ್ಟಿದ್ದಾರೆ.. ಈ ಬಾರಿಯ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ..
ಅಂದ್ಹಾಗೆ ವೆಸ್ಟ್ ಇಂಡೀಸ್ ಮತ್ತು USA ನಲ್ಲಿ ನಡೆಯಲಿರುವ 2024 ರ ಪುರುಷರ T20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸಾಕಷ್ಟು ಬದಲಾವಣೆಗಳಿರಲಿವೆ.. ಈ ಹಿಂದಿನ ಎರಡು ಆವೃತ್ತಿಗಳಿಗಿಂತ ವಿಭಿನ್ನ ಸ್ವರೂಪದಲ್ಲಿ ಈ ಪಂದ್ಯ ನಡೆಯಲಿದೆ..
2021 ಮತ್ತು 2022 ರಂತೆ ಸೂಪರ್ 12 ನಂತರದ ಮೊದಲ ಸುತ್ತಿನ ಬದಲಿಗೆ, 20 ಭಾಗವಹಿಸುವ ತಂಡಗಳನ್ನು 2024 ರ ಪಂದ್ಯಾವಳಿಯಲ್ಲಿ ತಲಾ ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗುತ್ತದೆ.
ನಾಲ್ಕು ಗುಂಪುಗಳಲ್ಲಿ ಅಗ್ರ ಎರಡು ತಂಡಗಳು ಸೂಪರ್ ಎಂಟು ಹಂತಕ್ಕೆ ಆಯ್ಕೆಯಾಗಲಿದೆ.. ಅಲ್ಲಿ ಅವುಗಳನ್ನು ನಾಲ್ಕು ಗುಂಪುಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಎರಡು ಸೂಪರ್ ಎಂಟು ಗುಂಪುಗಳಲ್ಲಿ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ, ನಂತರ ಫೈನಲ್‌ಗೆ ಅರ್ಹತೆ ಪಡೆಯುತ್ತದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಟೂರ್ನಿಯ ಸ್ವರೂಪ ಬದಲಾವಣೆಗೆ ಕೈಹಾಕಿದ್ದು, ಇದರಲ್ಲಿ ಬಹುಮುಖ್ಯ ಬದಲಾವಣೆ ಎಂಬಂತೆ ಟೂರ್ನಿಯಲ್ಲಿ ಆಡುವ ತಂಡಗಳ ಸಂಖ್ಯೆಯಲ್ಲಿ ಗಣನೀಯ ಬದಲಾವಣೆ ತರಲಾಗಿದೆ. 2024ರ ಟಿ20 ವಿಶ್ವಕಪ್ ವಿಭಿನ್ನ ಸ್ವರೂಪದಲ್ಲಿ ನಡೆಯಲಿದ್ದು, ಇದರಲ್ಲಿ ಭಾಗವಹಿಸುವ 20 ದೇಶಗಳನ್ನು ತಲಾ ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗುವುದು ಎಂದು ಐಸಿಸಿ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಅಂತ್ಯಗೊಂಡ ಟೂರ್ನಿಯಲ್ಲಿ ಆರಂಭಿಕ ಗ್ರೂಪ್‌ಗ ಹಂತದಲ್ಲಿ 8 ತಂಡಗಳು ಆಡಿ ಸೂಪರ್-12 ಹಂತಕ್ಕೆ ಅರ್ಹತೆ ಪಡೆದಿದ್ದವು. ಇದರಲ್ಲಿ ಈಗ ಬದಲಾವಣೆ ತರಲಾಗಿದೆ. 2024ರ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಈ ಬದಲಾವಣೆಗಳನ್ನು ಕಾಣಬಹುದಾಗಿದೆ. ಮುಂದಿನ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯು ವೆಸ್ಟ್ ಇಂಡೀಸ್ ಮತ್ತು ಯುಎಸ್ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.
ಅಮೆರಿಕ ಮತ್ತು ವೆಸ್ಟ್ ಇಂಡೀಸ್ ತಂಡಗಳು ಆತಿಥ್ಯ ವಹಿಸಿರುವ ಸಲುವಾಗಿ ನೇರ ಅರ್ಹತೆ ಪಡೆಯಲಿವೆ. ಆದ್ದರಿಂದ ಒಟ್ಟಾರೆ 12 ತಂಡಗಳ ಸ್ಥಾನ ಈಗಾಗಗಲೇ ಖಾತ್ರಿಯಾಗಿದೆ. ಈಗ ಟೂರ್ನಿಯಲ್ಲಿ ಖಾಲಿ ಇರುವ ಸ್ಥಾನಕ್ಕೆ 8 ತಂಡಗಳ ಆಯ್ಕೆ ಸಲುವಾಗಿ ಐಸಿಸಿ ಹೊಸ ಕ್ರಮ ಆಯ್ಕೆ ಮಾಡಿದೆ. ಈ ಮೊದಲಿನಂತೆ ಜಾಗತಿಕ ಮಟ್ಟದ ಅರ್ಹತಾ ಟೂರ್ನಿಯನ್ನು ಕೈಬಿಡಲಾಗಿದೆ. ಇದರ ಬದಲು ಪ್ರಾಂತೀಯ ವಿಭಾಗದಲ್ಲಿನ ಅರ್ಹತಾ ಸುತ್ತಿನ ಮೂಲಕ ಅಂತಿಮ 8 ತಂಡಗಳ ಆಯ್ಕೆ ಮಾಡಲಾಗುವುದು.
ಆಫ್ರಿಕಾ ವಿಭಾಗಕ್ಕೆ ವಿಭಾಗಕ್ಕೆ 2 ಸ್ಥಾನಗಳನ್ನು ಹಂಚಲಾಗಿದೆ. 4 ಸ್ಥಾನಗಳಿಗೆ ಏಷ್ಯಾ ಮತ್ತು ಯೂರೋಪ್ ಭಾಗದ ರಾಷ್ಟ್ರಗಳು ಪೈಪೋಟಿ ನಡೆಸಲಿವೆ. ಬಾಕಿ ಉಳಿದ 2 ಸ್ಥಾನಗಳಿಗೆ ಅಮೆರಿಕ ಮತ್ತು ಏಷ್ಯಾ ಪೆಸಿಫಿಕ್ ಭಾಗದ ರಾಷ್ಟ್ರಗಳು ಪೈಪೋಟಿ ನಡೆಸಲಿವೆ. ಈ ಭಾಗದ ರಾಷ್ಟ್ರಗಳು ಕೊನೇ 8 ಸ್ಥಾನಗಳ ಸಲುವಾಗಿ ಪ್ರಾಂತೀಯ ಭಾಗದ ಟೂರ್ನಿಗಳಲ್ಲಿ ಸ್ಪರ್ಧೆಗೆ ಇಳಿಯಲಿವೆ.