World water day | ಇಂದು ವಿಶ್ವ ಜಲ ದಿನ | ಥೀಮ್ ಏನು ಗೊತ್ತಾ..?
ಇಂದು ವಿಶ್ವ ಜಲ ದಿನ. ಪ್ರತಿ ವರ್ಷ ಶುದ್ದವಾದ ನೀರಿಲ್ಲದೆ ವಾಸಿಸುತ್ತಿರುವ ಜನರ ಕುರಿತು ಜಾಗೃತಿ ಮೂಡಿಸಲು ಈ ದಿನವನ್ನು ಮೀಸಲಿಡಲಾಗಿದೆ.
ನೀರಿನ ಪ್ರಾಮುಖ್ಯತೆಯ ಕುರಿತು ಜನರಿಗೆ ಅರಿವು ಮೂಡಿಸಲು ಪ್ರತಿವರ್ಷ ಮಾರ್ಚ್ 22 ರಂದು ವರ್ಲ್ಡ್ ವಾಟರ್ ಡೇ ಎಂದು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.
ಇದರ ಉದ್ದೇಶ ಪ್ರತಿಯೊಬ್ಬರೂ ನೀರಿನ ಪ್ರಾಮುಖ್ಯತೆಯನ್ನು ತಿಳಿಯುವುದೇ ಆಗಿದೆ.
ನಮಗೆಲ್ಲಾ ತಿಳಿದಿರುವಂತೆ ಭೂಮಿಯ ಮುಕ್ಕಾಲು ಭಾಗ ನೀರಿನಿಂದ ಆವರಿಸಿದೆ. ಆದ್ರೆ ಜಗತ್ತಿನಾದ್ಯಂತ ನೀರಿನ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ.
ಹೀಗಾಗಿ ನೀರನ್ನ ಸಂರಕ್ಷಿಸುವ ಉದ್ದೇಶದಿಂದ 1992 ರಲ್ಲಿ ವಿಶ್ವಸಂಸ್ಥೆ 1993ರಿಂದ ಮಾರ್ಚ್ 22ರಂದು ಜಲದಿನ ಆಚರಿಸುವ ಬಗ್ಗೆ ಅಂಗೀಕರಿಸಲಾಯಿತು.
ಅದರಂತೆ ಪ್ರತಿ ವರ್ಷ ಮಾರ್ಚ್ ಪ್ರಸಕ್ತ ವರ್ಷ ‘ಅದೃಶ್ಯ ಅಂತರ್ಜಲವನ್ನು ಸದೃಶ್ಯಗೊಳಿಸುವುದು’ ಎಂಬ ಥೀಮ್ ಹೊಂದಲಾಗಿದೆ.
2030ರ ವೇಳೆಗೆ ಜಗತ್ತಿನಾದ್ಯಂತ ಪ್ರತಿಯೊಬ್ಬರಿಗೂ ಸ್ವಚ್ಛ ಕುಡಿಯುವ ನೀರು ಒದಗಿಸುವುದು ಮತ್ತು ನೈರ್ಮಲ್ಯ ಕಾಪಾಡುವುದು ಜಲ ದಿನಾಚರಣೆಯ ಮುಖ್ಯ ಗುರಿಯಾಗಿದೆ.