ಮಾರಣಾಂತಿಕ ಕೊರೋನಾ ವೈರಸ್ ಗೆ ಇಡೀ ವಿಶ್ವವೇ ಆತಂಕಗೊಂಡಿದೆ. ಜಾಗತಿಕವಾಗಿ 4,983 ಹೆಚ್ಚು ಜನ ಕೊರೋನಾ ಮಹಾ ಮಾರಿಗೆ ಬಲಿಯಾಗಿದ್ದರೆ,
ಸುಮಾರು 1,34,769 ಮಂದಿಗೆ ಸೋಂಕು ತಗುಲಿದೆ ಎಂದು ವರದಿ ತಿಳಿಸಿದೆ.
ಮೊದಲು ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ಎಂಬ ಮಹಾ ಮಾರಿ ತನ್ನ ಮರಣ ಮೃದಂಗವನ್ನು ಬಾರಿಸಲು ಆರಂಭಿಸಿ ಉಗ್ರ ಸ್ವರೂಪವನ್ನು ತೋರಿಸಿತು. ನಂತರ ತನ್ನ ಕಬಂಧಬಾಹುವನ್ನು ವಿಶ್ವದೆಲ್ಲೆಡೆ ಚಾಚಿ 127 ಕ್ಕೂ ಹೆಚ್ಚು ದೇಶ ಹಾಗೂ ಪ್ರಾಂತ್ಯಗಳಿಗೆ ಹರಡಿದೆ. ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಾ ಸಾಗಿರುವ ಈ ಸೋಂಕು ಜನಸಾಮಾನ್ಯರಿಂದ ಹಿಡಿದು ವಿಶ್ವದ ಬಲಿಷ್ಠ ನಾಯಕರನ್ನು ಕಾಡಿದೆ.
ಕೊರೋನಾ ಸೋಂಕಿತ ವಿಶ್ವದ ಪ್ರಮುಖ ವ್ಯಕ್ತಿಗಳು
1. ಬ್ರೆಜಿಲ್ ದೇಶದ ಪ್ರಧಾನಿ ಜೈರ್ ಮೆಸ್ಸಿಯಾಸ್ ಬೋಲ್ಸನಾರೋ
ಬ್ರೆಜಿಲ್ ದೇಶದ ಪ್ರಧಾನಿ ಜೈರ್ ಮೆಸ್ಸಿಯಾಸ್ ಬೋಲ್ಸನಾರೋ ಅವರ ಪರೀಕ್ಷೆ ನಡೆಸಿದಾಗ ಅವರ ದೇಹದಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಬೊಲ್ಸೆನೊರೊ ಅವರ ಪತ್ರಿಕಾ ಕಾರ್ಯದರ್ಶಿ ಅವರಿಗೆ ಮೊದಲು ಮಹಾಮಾರಿ ಸೋಂಕು ಇರುವುದು ಧೃಡ ಪಟ್ಟಿತ್ತು. ಅದಾದ ಕೆಲವೇ ದಿನಗಳಲ್ಲಿ ಬ್ರೆಜಿಲ್ ನ ಪ್ರಮುಖ ಅಧಿಕಾರಿಗಳಿಗೆ ಈ ಸೋಂಕು ತಗುಲಿತ್ತು. ಇದೀಗ ಅಧ್ಯಕ್ಷರಿಗೂ ಕೊರೊನಾ ವೈರಾಣು ತಗುಲಿದೆ.
ಬೋಲ್ಸನಾರೋ ಕಾರ್ಯಕ್ರಮದ ನಿಮಿತ್ತ ಕಳೆದ ವಾರ ಅಮೆರಿಕದ ಪ್ರಧಾನಿ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದರು. ಆದರೆ ಡೊನಾಲ್ಡ್ ಟ್ರಂಪ್ ಗೆ
ಕೊರೋನಾ ಸೋಂಕು ಇಲ್ಲ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಶ್ವೇತ ಭವನ ಖಚಿತ ಪಡಿಸಿದೆ.
2. ಕೆನಡಾದ ಪ್ರಥಮ ಮಹಿಳೆ ಮತ್ತು ಅಲ್ಲಿನ ಪ್ರಧಾನಿ ಜಸ್ಟಿನ್ ಅವರ ಹೆಂಡತಿ ಸೋಫಿ ಗ್ರೆಗೊರಿ ಟ್ರುಡೊ
ಕೆಲವು ದಿನಗಳ ಹಿಂದಷ್ಟೇ ಬ್ರಿಟನ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಸೋಫಿ ಪಾಲ್ಗೊಂಡಿದ್ದರು. ಅಲ್ಲಿನ ಸಮಾವೇಶದಲ್ಲಿ ಪಾಲ್ಗೊಂಡು ಬುಧವಾರ ಅವರು ಕೆನಡಾಗೆ ವಾಪಾಸಾಗಿದ್ದರು. ಕೆನಡಾಗೆ ಮರಳಿದ ನಂತರ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ವೈದ್ಯಕೀಯ ತಪಾಸಣೆ ವೇಳೆ ಸೋಫಿ ಅವರಿಗೆ ಕೊರೋನಾ ವೈರಸ್ ತಗುಲಿರುವುದು ಖಚಿತವಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಸೋಫಿ ಅವರನ್ನು ಐಸೋಲೇಟೆಡ್ ಸ್ಥಳದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
3. ಇಂಗ್ಲೆಂಡ್‍ನ ಆರೋಗ್ಯ ಸಚಿವೆ ನಾಡಿನ್ ಡೋರಿಸ್
ಕೊರೋನಾ ಬಗ್ಗೆ ತನ್ನ ದೇಶದ ಜನತೆಗೆ ಅರಿವು ಮೂಡಿಸುತ್ತಿದ್ದ ಇಂಗ್ಲೆಂಡ್‍ನ ಆರೋಗ್ಯ ಸಚಿವೆ ನಾಡಿನ್ ಡೋರಿಸ್ ಗೆ ಕೊರೊನಾ ಸೋಂಕು ತಗುಲಿದೆ. ಕಳೆದ ಗುರುವಾರ ನಾಡಿನ್ ಡೋರಿಸ್ ಅವರಿಗೆ ರೋಗದ ಲಕ್ಷಣ ಪತ್ತೆಯಾಗಿದ್ದು, ತಕ್ಷಣ ಕೊರೊನಾ ಪರೀಕ್ಷೆಗೆ ಒಳಗಾದ ಅವರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ತನಗೆ ಸೋಂಕು ತಗುಲಿರುವುದು ಖಚಿತವಾಗುತ್ತಿದ್ದಂತೆ ತಮಗೆ ತಾವೇ ಮನೆಯಿಂದ ಹೊರಬರದೆ ಗೃಹಬಂಧನದಲ್ಲಿದ್ದಾರೆ.
4. ಇರಾನ್‍ನ ಹಿರಿಯ ಉಪಾಧ್ಯಕ್ಷ ಇಶಾಕ್ ಜಹಾಂಗೇರಿ ಕೈಗಾರಿಕಾ, ಗಣಿ ಮತ್ತು ವ್ಯವಹಾರ ಸಚಿವ ಮೌನೇಸನ್ ರೆಜಾ ರಹಮಾನ್
ಇರಾನ್ ನ ಸಾಂಸ್ಕೃತಿಕ ಪರಂಪರೆಯ ಸಚಿವ ಅಲಿ ಅಸ್ಗರ್ ಮತ್ತು ಕೈಗಾರಿಕಾ, ಗಣಿ ಮತ್ತು ವ್ಯವಹಾರ ಸಚಿವ ಮೌನೇಸನ್ ರೆಜಾ ರಹಮಾನ್ ಅವರಿಗೆ ಕೊರೊನ ವೈರಸ್ ಇರುವುದು ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
5. ಹಾಲಿವುಡ್ ಸೂಪರ್ ಸ್ಟಾರ್ ಟಾಮ್ ಹಾಂಕ್ಸ್ ಮತ್ತು ಅವರ ಪತ್ನಿ ರೀಟಾ ವಿಲ್ಸನ್
ಸಿನಿಮಾದ ಚಿತ್ರೀಕರಣಕ್ಕಾಗಿ ಆಸ್ಟ್ರೇಲಿಯಾದಲ್ಲಿರುವ ಹಾಲಿವುಡ್ ಸೂಪರ್ ಸ್ಟಾರ್ ಟಾಮ್ ಹಾಂಕ್ಸ್ ಮತ್ತು ಅವರ ಪತ್ನಿ ರೀಟಾ ವಿಲ್ಸನ್ ಅವರಿಗೂ ಕೊರಿಯಾ ಸೋಂಕು ತಗುಲಿದೆ. ಈ ಕುರಿತು ಟಾಮ್ ಹಾಂಕ್ಸ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.