World’s Most Weird Traditions : ವಿಶ್ವದ ಅತ್ಯಂತ ವಿಚಿತ್ರ ರೀತಿ ರಿವಾಜುಗಳು ಭಾಗ -1
ಭಾರತ ಸೇರಿ ವಿಶ್ವಾದ್ಯಂತ ಮದುವೆ ಸಮಯದಲ್ಲಿ ನಾನಾ ವಿಚಿತ್ರ ಆಚರಣೆಗಳು , ಸಂಪತ್ರದಾಯ , ರೀತಿ , ರಿವಾಜುಗಳು , ಆಚರಣೆಗಳು , ನಂಬಿಕೆಗಳಿವೆ.. ಆದ್ರೆ ನಾವು ಈಗ ಹೇಳೋಕೆ ಹೊರಟಿರುವ ಕೆಲ ಆಚರಣೆಗಳ ಬಗ್ಗೆ ತಿಳಿದರೆ ,, ಭಾರತದಲ್ಲಿ ಹುಟ್ಟಿದ್ದಕ್ಕೆ ಮತ್ತೊಮ್ಮೆ ದೇವರಿಗೆ ಥ್ಯಾಂಕ್ಸ್ ಹೇಳ್ತೀರಾ..!!
ವಿಶ್ವದ ಅತ್ಯಂತ ವಿಚಿತ್ರ ಸಂಪ್ರದಾಯಗಳು ಅದ್ರಲ್ಲೂ ಮದುವೆಯ ಸಂದರ್ಭದಲ್ಲಿ ಪಾಲಿಸುವಂತಹ ರಿವಾಜುಗಳ ಬಗ್ಗೆ ತಿಳಿಯಿರಿ..
ನಗುವುದು ನಿಷೇಧ..!!!
ನಮ್ಮಲ್ಲಿ ಮದುವೆ ಸಮಾರಂಭಗಳು , ಇನ್ನಿತರೇ ಹಬ್ಬ ಹರಿದಿನಗಳಲ್ಲಿ ಎಲ್ಲೆಲ್ಲೂ ಸಂಭ್ರಮ ಸಡಗರದ , ಖುಷಿಯ ವಾತಾವರಣವಿರುತ್ತೆ.. ಮದುವೆ ಮನೆಯಲ್ಲಿ ಎಲ್ಲರ ಮೊಗದಲ್ಲೂ ಮಂದಹಾಸವಿರುತ್ತದೆ..
ಆದ್ರೆ ಈ ದೇಶದಲ್ಲಿ ಮದುವೆಯಲ್ಲಿ ನಗೋದು ನಿಷೇಧ..
ಹೌದು…!! ಆಫ್ರಿಕಾದ ಕಾಂಗೋ ದೇಶದಲ್ಲಿ ಮದುವೆಯಲ್ಲಿ ಮಧುಮಗ ಅಥವ ವಧು ನಗುವಂತಿಲ್ಲ..
ಅದೇ ನಮ್ಮಲ್ಲಿ ಆಗಿದ್ರೆ ಮದುವೆ ದಿನ ಹುಡುಗ ಹುಡುಗಿ ಖುಷಿಯಾಗಿಲ್ಲ ಅಂದ್ರೆ ಇಬ್ಬರಿಗೂ ೀ ಮದುವೆ ಇಷ್ಟವಿಲ್ಲ ಅಂದುಕೊಳ್ತಾರೆ..
ಆದ್ರೆ ಕಾಂಗೋದಲ್ಲಿ ವಧು ವರರು ನಗೋ ಹಾಗೆಯೇ ಇಲ್ಲ..
ಇದರ ಕಾರಣ ಇಷ್ಟೇ ನಗೋರು ಗಂಭೀರವಾಗಿರುವುದಿಲ್ಲ ಎಂದು ಇಲ್ಲಿ ಪರಿಗಣಿಸಲಾಗುತ್ತದೆ..
ವಧುವಿನ ಮೇಲೆ ಉಗುಳುವ ಸಂಪ್ರದಾಯ
ಆಫ್ರಿಕಾದೇ ಮತ್ತೊಂದು ದೇಶ ಕೀನ್ಯಾದಲ್ಲಿ ಮದುವೆ ಸಮಯದಲ್ಲಿ ವಧುವಿನ ಮೇಲೆ ಜನರು ಉಗಿಯುವ ಸಂಪ್ರದಾಯವಿದೆ,..
ಮಸಾಯಿ ಸಮುದಾಯದಲ್ಲಿ ಇಂತಹದೊಂದು ರಿವಾಜಿದೆ..
ಇನ್ನೂ ಭಯಾನಕವೆಂದ್ರೆ ಇಲ್ಲಿನ ಹುಡುಗಿಯರು ತಮ್ಮಿಷ್ಟದ ವರನ ಜೊತೆಗೆ ಮದುವೆಯಾಗೋ ಸ್ವಾತಂತ್ರವೂ ಇಲ್ಲ , ಜೊತೆಗೆ ಮದುವೆ ದಿನ ವಧುವಿನ ತಲೆ ಕೂದಲನ್ನ ಬೋಳಿಸಲಾಗುತ್ತದೆ..
ನಂತರ ಆಕೆಯ ಎದೆ ಭಾಗ ಮತ್ತು ತಲೆ ಮೇಲೆ ಆಕೆಯ ತಂದೆ ಉಗುಳುತ್ತಾರೆ..
ಹೀಗೆ ಮಾಡುವುದರಿಂದ ಅವರ ಮಗಳು ಹಾಗೂ ಅಳಿಯ ಅನ್ಯೋನ್ಯವಾಗಿ ಹಾಗೂ ಸುರಕ್ಷಿತವಾಗಿರುತ್ತಾರೆಂಬ ನಂಬಿಕೆಯಿದೆ..
ಮದುವೆಯಾಗಬೇಕಂದ್ರೆ ಕೊಡಬೇಕು ತಿಮಿಂಗಲದ ಹಲ್ಲು..!!
ಫಿಜಿ ದೇಶದಲ್ಲಿ ಯಾವುದೇ ಹುಡುಗ ಯಾವುದೇ ಹುಡುಗಿಯನ್ನ ಮದುವೆಯಾಗಬೇಕಂದ್ರೆ ಆತ ತನ್ನ ಮಾವನಿಗೆ ತಿಮಿಂಗಲ ದಂತ ತಂದುಕೊಡಬೇಕು.. ಇದಕ್ಕಾಗಿಯೇ ಹುಡುಗನ ಮನೆಯವರು ುಡುಗ ಚಿಕ್ಕವನಿದ್ದಾಗಿನಿಂದಲೇ ತಯಾರಿಯನ್ನೂ ಶುರು ಮಾಡಿಕೊಂಡಿರುತ್ತಾರೆ..
ಅಷ್ಟೇ ಅಲ್ಲ ತಿಮಿಂಗಲದ ದಂತ ಕೊಟ್ಟ ನಂತರವೂ ಆ ಹುಡುಗನಿಗೆ ತನ್ನ ಮಗಳನ್ನ ಕೊಡಬೇಕೋ ಬೇಡವೋ ಅದು ಹುಡುಗಿಯ ತಂದೆಗೆ ಬಿಟ್ಟ ವಿಚಾರವಾಗಿರುತ್ತದೆ..
ಮದುವೆಗೆ ಮೊದಲು ಹುಡುಗಿಗೆ ಮಸಿ ಬಳಿಯುವ ಪದ್ದತಿ..!!
ನಮ್ಮಲ್ಲಿ ಮಸಿ ಬಳೆಯುವುದು ಎಂದ್ರೆ ಏನೋ ಕೆಟ್ಟ ಕೆಲಸ ಮಾಡಿದ್ರೆ , ತಲೆ ತಗ್ಗಿಸುವ ಕೆಲಸ ಮಾಡಿದ್ರೆ ಆಗ ಮಸಿ ಬಳಿಯುತ್ತೀವಿ.. ಇಲ್ಲ ಮುಖಕ್ಕೆ ಬಸಿ ಬಳೆಯುವಂತ ಕೆಲಸ ಮಾಡಿದ್ರೂ ಅಂತ ಕೋಸಿಸುತ್ತೇವೆ.. ಆದ್ರೆ ಸ್ಕಾಟ್ ಲ್ಯಾಂಡ್ ನಲ್ಲಿ ಮದುವೆಗೂ ಮುನ್ನ ವಧುವಿನ ಮೇಲೆ ಮಸಿ ಎರಚಲಾಗುತ್ತದೆ..
ಹುಡುಗಿಯ ಮೇಲಿಂದ ಕೆಳಗಿನವರೆಗೂ ಕಪ್ಪು ನೀರು ಎರೆಚಲಾಗುತ್ತದೆ.. ಇದಕ್ಕೆ ಕಾರಣ ಮದುವೆಯ ನಂತರ ಯಾರಾದ್ರೂ ಆಕೆಯನ್ನ ಅವಮಾನ ಮಾಡಿದಲ್ಲಿ ಅದನ್ನ ೆದುರಿಸಲು ಆಕೆ ಮಾನಸಿಕವಾಗಿ ತಯಾರಾಗಿರಬೇಕೆಂದು ಹೇಳಲಾಗಿದೆ..