ಸಿಲಿಕಾನ್ ಸಿಟಿಯಲ್ಲಿ ಫೆ. 23ರಂದು ಮಹಿಳಾ ಪ್ರೀಮಿಯರ್ ಲೀಗ್ ಗೆ ಚಾಲನೆ ಸಿಗಲಿದೆ.
ಹಾಲಿ ಚಾಂಪಿಯನ್ ಮುಂಬಯಿ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ ಬಿಸಿಸಿಐ ಕಾರ್ಯಕ್ರಮ ಆಯೋಜಿಸಿದೆ. ಈ ಸಂದರ್ಭದಲ್ಲಿ ಸ್ಟಾರ್ ಗಳು ಭಾಗವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭವು ಫೆಬ್ರವರಿ 23 ರಂದು ಸಂಜೆ 6:30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಡಬ್ಲ್ಯುಪಿಎಲ್ ಎರಡನೇ ಸೀಸನ್ ಫೆಬ್ರವರಿ 23 ರಿಂದ ಮಾರ್ಚ್ 17 ರವರೆಗೆ ನಡೆಯಲಿದೆ. ಒಟ್ಟು ಐದು ತಂಡಗಳು 22 ಪಂದ್ಯಗಳಲ್ಲಿ ಸೆಣಸಾಟ ನಡೆಸಲಿವೆ. ಈ ಬಾರಿ ಲೀಗ್ ನ ಆತಿಥ್ಯವನ್ನು ಬೆಂಗಳೂರು ಹಾಗೂ ದೆಹಲಿಗೆ ಶಿಫ್ಟ್ ಮಾಡಲಾಗಿದೆ. ಲೀಗ್ ಸುತ್ತಿನಲ್ಲಿ 20 ಪಂದ್ಯಗಳು ನಡೆಯಲಿದ್ದು, ಟೂರ್ನಿಯ ಮೊದಲ 11 ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ನಂತರ ಎಲ್ಲಾ ಐದು ತಂಡಗಳು ದೆಹಲಿಗೆ ಪ್ರಯಾಣ ಬೆಳೆಸಲ್ಲಿದ್ದು, ಎಲಿಮಿನೇಟರ್ ಸೇರಿದಂತೆ ಅಂತಿಮ ಪಂದ್ಯ ನಡೆಯಲಿವೆ.
24 ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಡಬಲ್ ಹೆಡರ್ ಪಂದ್ಯ ನಡೆಯುವುದಿಲ್ಲ. ಬದಲಾಗಿ ಒಂದು ದಿನ ಒಂದು ಪಂದ್ಯ ನಡೆಯಲಿದೆ. ಎಲಿಮಿನೇಟರ್ ಪಂದ್ಯ ಮಾರ್ಚ್ 15 ರಂದು ಹಾಗೂ ಮಾರ್ಚ್ 17ರಂದು ಫೈನಲ್ ಪಂದ್ಯ ನಡೆಯಲಿದೆ.