Wrestling crisis ಕುಸ್ತಿಪಟುಗಳ ಹೆಸರು ಸಲ್ಲಿಕೆ: ಜು.22ರವರೆಗೆ ಗಡವು
ಮುಂಬರುವ ಏಷ್ಯನ್ ಗೇಮ್ಸ್ಗೆ ಭಾರತೀಯ ಕುಸ್ತಿಪಟುಗಳು ಹೆಸರು ಸಲ್ಲಿಕೆಗೆ ನಿಗದಿಪಡಿಸಲಾಗಿದ್ದ ಅಂತಿಮ ದಿನಾಂಕವನ್ನು ಏಷ್ಯಾ ಒಲಿಂಪಿಕ್ಸ್ ಕೌನ್ಸಿಲ್ (ಒಸಿಎ) ಜು.22ರ ವರೆಗೆ ವಿಸ್ತರಿಸಿದೆ.
ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಈ ಬಾರಿ ಸೆ.23ಕ್ಕೆ ಆರಂಭಗೊಳ್ಳಲಿದ್ದು ಇದಕ್ಕಾಗಿ ಎಲ್ಲಾ ದೇಶಗಳ ಅಥ್ಲೀಟ್ಗಳ ಹೆಸರು ಸಲ್ಲಿಕೆಗೆ ಜು.15ರವರೆಗೆ ಗಡವು ವಿಸಲಾಗಿತ್ತು. ತಾರಾ ಕುಸ್ತಿಪಟುಗಳು ಪ್ರತಿಭಟನೆ ಮಾಡಿದ್ದರಿಂದ ಕುಸ್ತಿ ಅಖಾಡದಿಂದ ದೂರ ಉಳಿದಿದ್ದರು. ನ್ಯಾಯ ಸಿಗುತ್ತದೆ ಎಂಬ ಭರವಸೆ ಸಿಕ್ಕ ನಂತರ ಕುಸ್ತಿಪಟುಗಳು ಪ್ರತಿಭಟನೆ ಹಿಂಪಡೆದರು. ಟ್ರಯಲ್ಸ್ನಲ್ಲಿ ಪಾಲ್ಗೊಳಲು ಸಮಯಾವಕಾಶ ಬೇಕು ಎಂದು ಭಾರತೀಯ ಒಲಿಂಪಿಕ್ ಸಮಿತಿಗೆ ಮನವಿ ಸಲ್ಲಿಸಿದ್ದರು. ಏಷ್ಯಾ ಒಲಿಂಪಿಕ್ಸ್ ಕೌನ್ಸಿಲ್ಗೆ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಮನವಿ ಸಲ್ಲಿಸಿದರು. ಆ.5ರ ವರೆಗೆ ವಿಸ್ತರಿಸುವಂತೆ ಮನವಿ ಮಾಡಿದರು.
ಪ್ಯಾರಿಸ್ ಒಲಿಂಪಿಕ್ಸ್ ಗೆ ಅದ್ದೂರಿ ಚಾಲನೆ!
ಪ್ಯಾರಿಸ್: 33ನೇ ಒಲಿಂಪಿಕ್ಸ್ ಗೆ(Olympics Games) ಅದ್ಧೂರಿ ಚಾಲನೆ ಸಿಕ್ಕಿದೆ. ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ಸೆನ್ ನದಿಯ (River Seine) ಮೇಲೆ ಭಾರತೀಯ ಕಾಲಮಾನ ಶುಕ್ರವಾರ...