Xiaomi Phones : Xiaomi ಗೆ ಸೇರಿದ ಈ ಎರಡು ಪೋನ್ ಗಳಲ್ಲಿ Jio 5G ಬೆಂಬಲಿಸುವುದಿಲ್ಲ.. ಯಾಕೇ ಗೊತ್ತಾ ?
ಭಾರತದ ಪ್ರಮುಖ ಟೆಲಿಕಾಂ ನೆಟ್ವರ್ಕ್ ರಿಲಯನ್ಸ್ ಜಿಯೋ ಕ್ರಮೇಣ ತನ್ನ 5G ಸೇವೆಗಳನ್ನು ವಿಸ್ತರಿಸುತ್ತಿದೆ. ಈಗಾಗಲೇ ಜಿಯೋ 5G ಸೇವೆಗಳು ದೇಶಾದ್ಯಂತ 100 ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದೆ. Jio 5G ಸೇವೆಗಳನ್ನು ಪಡೆಯಲು 5G ಸಪೋರ್ಟ್ ನೀಡುವಂತಹ ಸ್ಮಾರ್ಟ್ಫೋನ್ ಹೊಂದಿರುವುದು ಅನಿವಾರ್ಯ. ಸದ್ಯಕ್ಕೆ, Samsung, Realme, Xiaomi ಸೇರಿದಂತೆ ಬಹುತೇಕ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು 5G ಸಾಫ್ಟ್‌ವೇರ್ ಬೆಂಬಲದ ಫೋನ್ ಗಳನ್ನ ಲಾಂಚ್ ಮಾಡುತ್ತಿವೆ.
ಆದರೇ ಟೆಲಿಕಾಂ ಟಾಕ್ ನ ವರದಿಯ ಪ್ರಕಾರ, ಎರಡು Xiaomi ಫೋನ್ ಮಾಡೆಲ್ ಗಳಿ Jio 5G ಅನ್ನ ಬೆಂಬಲಿಸುತ್ತಿಲ್ಲ. ಅವುಗಳೆಂದರೇ Xiaomi Mi 10, Mi 10i ಮಾದರಿಗಳಾಗಿವೆ. ಏಕೆಂದರೆ ಈ ಎರಡು ಹ್ಯಾಂಡ್‌ಸೆಟ್‌ಗಳು 5G ಸ್ವತಂತ್ರ ನೆಟ್ವರ್ಕ್ ಅಥವಾ 5G SA ಗೆ ಸಪೋರ್ಟ್ ನೀಡುವುದಿಲ್ಲ . ಈ ಎರಡು ಫೋನ್‌ಗಳಲ್ಲಿ ಏರ್‌ಟೆಲ್ 5G ಸೇವೆಗಳು ಮಾತ್ರ ಕಾರ್ಯನಿರ್ವಹಿಸುತ್ತವೆ. ಇತ್ತೀಚೆಗೆ Xiaomi Mi 10 ಫೋನ್ ಅನ್ನು ಬಿಡುಗಡೆ ಮಾಡಿತು.
MI 10i ಅನ್ನು ಕ್ರಮವಾಗಿ 2020 ಮತ್ತು 2021 ರಲ್ಲಿ ಬಿಡುಗಡೆ ಮಾಡಲಾಗಿದೆ. ಈ ಎರಡೂ ಹ್ಯಾಂಡ್‌ಸೆಟ್‌ಗಳು ಪ್ರೀಮಿಯಂ ಬೆಲೆ ವಿಭಾಗಕ್ಕೆ ಸೇರುತ್ತವೆ. Mi 10 ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ರೂ. 31,999 ರೂ ಇದೆ. Mi 10i ಫೋನ್ ನ ಬೆಲೆ 21,999 ರುಪಾಯಿ ಇದೆ. ಈ ಎರಡೂ ಹ್ಯಾಂಡ್ ಸೆಟ್ ಗಳೊಂದಿಗೆ ಏರ್‌ಟೆಲ್ 5G ಒಪ್ಪಂದ ಮಾಡಿಕೊಂಡಿದೆ. ನೆಟ್‌ವರ್ಕ್ ಸೇವೆಗಳನ್ನು ಎಂಡ್-ಟು-ಎಂಡ್ ಕೋರ್ 5G ನೆಟ್‌ವರ್ಕ್ ಮೂಲಕ ಒದಗಿಸಲಾಗುತ್ತದೆ. ಸ್ವತಂತ್ರವಲ್ಲದ 5G ಯಲ್ಲಿ, 5G ರೇಡಿಯೋ ಸಿಗ್ನಲ್ ಅನ್ನ ಅಸ್ತಿತ್ವದಲ್ಲಿರುವ 4G ಮೂಲಸೌಕರ್ಯದಲ್ಲಿ ವಿತರಿಸಲಾಗುತ್ತದೆ.
Jio 5G ಅನ್ನು ಬೆಂಬಲಿಸುವ Xiaomi ಫೋನ್‌ಗಳ ಪಟ್ಟಿ ಇಲ್ಲಿದೆ
Xiaomi Mi 10, Mi 10i ಹೊರತುಪಡಿಸಿ, Jio True 5G ಎಲ್ಲಾ Xiaomi ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದೆ. ಈ ಫೋನ್‌ಗಳು Mi 11 Ultra 5G, Xiaomi 12 Pro 5G, Xiaomi 11T Pro 5G, Redmi Note 11 Pro 5G, Xiaomi 11 Lite NE 5G, Redmi Note 11T 5G, Redmi 11 Prime 5G, Redmi Note 1G10G10 5G., Redmi K50i 5G, Xiaomi 11i 5G, Xiaomi 11i ಹೈಪರ್ಚಾರ್ಜ್ 5G ನಂತಹ ಸ್ಮಾರ್ಟ್ಫೋನ್ ಗಳಿಗೂ ಲಭ್ಯವಿದೆ.
Xiaomi Phones: These two phones belonging to Xiaomi do not support Jio 5G.. Do you know why?








