ADVERTISEMENT
Tuesday, August 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಬೆಂಗಳೂರು

ಬೆಂಗಳೂರಿನ ಕೋಗಿಲು ಲೇಔಟ್ ಮಿನಿ ಬಾಂಗ್ಲಾದೇಶವಾಗುತ್ತಿದೆಯೇ? 600 ಕೋಟಿ ಬೆಲೆಯ ಜಾಗದಲ್ಲಿ ಅಕ್ರಮ ವಲಸಿಗರಿಗೆ ಮಣೆ; ಎನ್‌ಐಎ ತನಿಖೆಗೆ ಆರ್ ಅಶೋಕ್ ಆಗ್ರಹ

Yalahanka Kogilu Layout Illegal Pressure: R Ashok Urges NIA Investigation

Shwetha by Shwetha
January 1, 2026
in ಬೆಂಗಳೂರು, Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು: ನಗರದ ಯಲಹಂಕದ ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ.‌ ನೆಲೆಸಿರುವ ನಿರಾಶ್ರಿತರ ವಿಚಾರ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಗುಡಿಸಲುಗಳು ಮತ್ತು ಅಲ್ಲಿ ವಾಸಿಸುತ್ತಿರುವವರ ಮೂಲದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕೆಂದು ಒತಾಯಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಹಾಗೂ ರೋಹಿಂಗ್ಯಾ ಮುಸ್ಲಿಮರಿಗೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಜಮೀನನ್ನು ಧಾರೆ ಎರೆಯಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

Related posts

ಜಿಬಿಎ ದಂಡದ ಬಿಸಿ- ಆ.22ರ ಡೆಡ್‌ಲೈನ್‌ಗೆ ಹೆದರಿ ಜೆಸಿಬಿಗೆ ಮುಗಿಬಿದ್ದ ಜನ, ಗಂಟೆಗೆ ಸಾವಿರ ಇದ್ದ ಬಾಡಿಗೆ ಈಗ ಹತ್ತು ಸಾವಿರಕ್ಕೆ ಜಂಪ್:ಬೆಂಗಳೂರಿನಲ್ಲಿ ಖಾಲಿ ನಿವೇಶನದಾರರ ಗೋಳು ಕೇಳೋರಾರು?

ಜಿಬಿಎ ದಂಡದ ಬಿಸಿ- ಆ.22ರ ಡೆಡ್‌ಲೈನ್‌ಗೆ ಹೆದರಿ ಜೆಸಿಬಿಗೆ ಮುಗಿಬಿದ್ದ ಜನ, ಗಂಟೆಗೆ ಸಾವಿರ ಇದ್ದ ಬಾಡಿಗೆ ಈಗ ಹತ್ತು ಸಾವಿರಕ್ಕೆ ಜಂಪ್:ಬೆಂಗಳೂರಿನಲ್ಲಿ ಖಾಲಿ ನಿವೇಶನದಾರರ ಗೋಳು ಕೇಳೋರಾರು?

August 18, 2026
LPG e-KYC ಗಡುವು ಆ.23ರವರೆಗೆ ವಿಸ್ತರಣೆ; ಸರ್ವರ್ ಸಮಸ್ಯೆಯಿಂದ ಗ್ರಾಹಕರಿಗೆ ತೊಂದರೆ

LPG e-KYC ಗಡುವು ಆ.23ರವರೆಗೆ ವಿಸ್ತರಣೆ; ಸರ್ವರ್ ಸಮಸ್ಯೆಯಿಂದ ಗ್ರಾಹಕರಿಗೆ ತೊಂದರೆ

August 18, 2026

ದಿಢೀರ್ ಸೃಷ್ಟಿಯಾದ ದಾಖಲೆಗಳು

ವಿವಾದಿತ ಸ್ಥಳಕ್ಕೆ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರೊಂದಿಗೆ ಭೇಟಿ ನೀಡಿದ ಅಶೋಕ್, ಅಲ್ಲಿನ ವಾಸ್ತವ ಸ್ಥಿತಿಯನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ವಾಸವಿರುವವರು ಕೇವಲ ಆರು ತಿಂಗಳ ಹಿಂದಷ್ಟೇ ಇಲ್ಲಿಗೆ ಬಂದಿದ್ದಾರೆ ಎಂಬ ಮಾಹಿತಿಯಿದೆ. ಆದರೆ ಇಷ್ಟು ಕಡಿಮೆ ಅವಧಿಯಲ್ಲಿ ಇವರಿಗೆ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಗಳು ಹೇಗೆ ಸಿಕ್ಕವು? ಎಂದು ಪ್ರಶ್ನಿಸಿದರು. ಈ ದಾಖಲೆಗಳ ಸತ್ಯಾಸತ್ಯತೆ ತಿಳಿಯಲು ಮತ್ತು ಇವರ ಮೂಲವನ್ನು ಪತ್ತೆಹಚ್ಚಲು ಎನ್‌ಐಎ ತನಿಖೆಯೊಂದೇ ದಾರಿ ಎಂದು ಪ್ರತಿಪಾದಿಸಿದರು.

ಬೆಂಗಳೂರನ್ನು ಮಿನಿ ಬಾಂಗ್ಲಾ ಮಾಡುವ ಹುನ್ನಾರ

ಸರ್ಕಾರದ ನಡೆವಳಿಕೆ ನೋಡಿದರೆ ಬೆಂಗಳೂರಿನ ಕೋಗಿಲು ಲೇಔಟ್ ಅನ್ನು ಮಿನಿ ಬಾಂಗ್ಲಾದೇಶವನ್ನಾಗಿ ಮಾಡಲು ಹೊರಟಂತಿದೆ. ಗೂಗಲ್ ಮ್ಯಾಪ್ ಪರಿಶೀಲಿಸಿದರೆ ಒಂದು ವರ್ಷದ ಹಿಂದೆ ಇಲ್ಲಿ ಖಾಲಿ ಜಾಗವಿತ್ತು. ಈಗ ಏಕಾಏಕಿ ನೂರಾರು ಮನೆಗಳು ತಲೆ ಎತ್ತಿವೆ. ಟ್ಯಾನಿ ರೋಡ್, ಟಿಪ್ಪು ನಗರದ ಕಡೆಯಿಂದ ಜನರನ್ನು ಕರೆತಂದು ಇಲ್ಲಿ ಕೂರಿಸಲಾಗಿದೆ. ವಸೀಂ, ಸರ್ಫರಾಜ್ ಖಾನ್ ಸೇರಿದಂತೆ ಹಲವರು ಈ ಕೃತ್ಯದ ಹಿಂದಿದ್ದಾರೆ. ಸರಿಸುಮಾರು 600 ಕೋಟಿ ರೂಪಾಯಿ ಬೆಲೆಬಾಳುವ ಈ ಜಾಗವನ್ನು ಕನ್ನಡಿಗರಿಗೆ ನೀಡುವ ಬದಲು, ಅಕ್ರಮ ವಲಸಿಗರಿಗೆ ನೀಡಲು ಸರ್ಕಾರ ಮುಂದಾಗಿರುವುದು ಕನ್ನಡಿಗರಿಗೆ ಮಾಡುತ್ತಿರುವ ದ್ರೋಹ ಎಂದು ಅಶೋಕ್ ಕಿಡಿಕಾರಿದರು.

ಉಡ್ತಾ ಬಾಂಗ್ಲಾ

ಈ ಪ್ರದೇಶದಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದ್ದು, ಬೆಂಗಳೂರು ಕೂಡ ಉಡ್ತಾ ಪಂಜಾಬ್ ಮಾದರಿಯಲ್ಲಿ ಉಡ್ತಾ ಬಾಂಗ್ಲಾ ಆಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಪೊಲೀಸರು ಕೂಡ ಅಸಹಾಯಕರಾಗಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಸಚಿವರು ಈ ಬಗ್ಗೆ ಮಾತನಾಡುತ್ತಾರೆ ಮತ್ತು ರಾಹುಲ್ ಗಾಂಧಿ ಟ್ವೀಟ್ ಮಾಡುತ್ತಾರೆ ಎಂದರೆ ಇದರ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಪಿತೂರಿ ಇರುವ ಶಂಕೆ ಇದೆ. ಇಲ್ಲಿ ಸ್ಲೀಪರ್ ಸೆಲ್ ಮತ್ತು ಉಗ್ರಗಾಮಿ ಚಟುವಟಿಕೆಗಳಿಗೆ ಆಸ್ಪದ ನೀಡಿದಂತಾಗುತ್ತದೆ ಎಂದು ಅವರು ಎಚ್ಚರಿಸಿದರು.

ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ

ಮುಖ್ಯಮಂತ್ರಿಗಳ ಮೌಖಿಕ ಸೂಚನೆಯ ಮೇರೆಗೆ ಅಧಿಕಾರಿಗಳು ತರಾತುರಿಯಲ್ಲಿ ವರದಿ ತಯಾರಿಸಿ ಇವರಿಗೆ ಪುನರ್ವಸತಿ ಕಲ್ಪಿಸಲು ಮುಂದಾಗಬಾರದು. ಸರ್ಕಾರಗಳು ಶಾಶ್ವತವಲ್ಲ, ಇಂದು ಇರುವ ಪಕ್ಷ ನಾಳೆ ಇರುವುದಿಲ್ಲ. ಆದರೆ ಅಧಿಕಾರಿಗಳು ಇರುತ್ತಾರೆ. ನಿಯಮ ಬಾಹಿರವಾಗಿ ನಡೆದುಕೊಂಡರೆ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳಿಗೆ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಅಶೋಕ್ ಎಚ್ಚರಿಕೆ ನೀಡಿದರು.

ದಲಿತರ ಹಕ್ಕು ಕಸಿದರೆ ಉಗ್ರ ಹೋರಾಟ: ಛಲವಾದಿ ನಾರಾಯಣಸ್ವಾಮಿ

ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಮೊದಲು ಅಕ್ರಮ ಮನೆಗಳನ್ನು ತೆರವುಗೊಳಿಸಲು ಮುಂದಾಗಿದ್ದ ಸರ್ಕಾರ, ಈಗ ಕೇರಳ ಲಾಬಿ ಮತ್ತು ಹೈಕಮಾಂಡ್ ಒತ್ತಡಕ್ಕೆ ಮಣಿದು ಯೂ-ಟರ್ನ್ ಹೊಡೆದಿದೆ. ರಾಜ್ಯದ ಬಡ ದಲಿತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ನೀಡಬೇಕಾದ ಜಾಗವನ್ನು ಬಾಂಗ್ಲಾದೇಶದವರಿಗೆ ನೀಡಲು ನಾವು ಬಿಡುವುದಿಲ್ಲ. ಒಂದು ವೇಳೆ ಸರ್ಕಾರ ಇವರಿಗೆ ಮನೆ ನೀಡಿದರೆ, ನಾವು ರಾಜ್ಯದ ಬಡವರನ್ನು ಕರೆತಂದು ಇದೇ ಜಾಗಕ್ಕೆ ನುಗ್ಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಒಟ್ಟಾರೆಯಾಗಿ, ಕೋಗಿಲು ಲೇಔಟ್ ವಿಚಾರ ಈಗ ಕೇವಲ ಭೂವಿವಾದವಾಗಿ ಉಳಿಯದೆ, ರಾಷ್ಟ್ರೀಯ ಭದ್ರತೆ ಮತ್ತು ಅಕ್ರಮ ವಲಸಿಗರ ವಿಚಾರವಾಗಿ ಮಾರ್ಪಟ್ಟಿದ್ದು, ಬಿಜೆಪಿ ಈ ವಿಷಯವನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಹೋರಾಟ ರೂಪಿಸಲು ಸಜ್ಜಾಗಿದೆ.

ShareTweetSendShare
Join us on:

Related Posts

ಜಿಬಿಎ ದಂಡದ ಬಿಸಿ- ಆ.22ರ ಡೆಡ್‌ಲೈನ್‌ಗೆ ಹೆದರಿ ಜೆಸಿಬಿಗೆ ಮುಗಿಬಿದ್ದ ಜನ, ಗಂಟೆಗೆ ಸಾವಿರ ಇದ್ದ ಬಾಡಿಗೆ ಈಗ ಹತ್ತು ಸಾವಿರಕ್ಕೆ ಜಂಪ್:ಬೆಂಗಳೂರಿನಲ್ಲಿ ಖಾಲಿ ನಿವೇಶನದಾರರ ಗೋಳು ಕೇಳೋರಾರು?

ಜಿಬಿಎ ದಂಡದ ಬಿಸಿ- ಆ.22ರ ಡೆಡ್‌ಲೈನ್‌ಗೆ ಹೆದರಿ ಜೆಸಿಬಿಗೆ ಮುಗಿಬಿದ್ದ ಜನ, ಗಂಟೆಗೆ ಸಾವಿರ ಇದ್ದ ಬಾಡಿಗೆ ಈಗ ಹತ್ತು ಸಾವಿರಕ್ಕೆ ಜಂಪ್:ಬೆಂಗಳೂರಿನಲ್ಲಿ ಖಾಲಿ ನಿವೇಶನದಾರರ ಗೋಳು ಕೇಳೋರಾರು?

by Shwetha
August 18, 2026
0

ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪಂಚ ಪಾಲಿಕೆಗಳಲ್ಲಿ ಖಾಲಿ ನಿವೇಶನಗಳ ಮಾಲೀಕರಿಗೆ ಜಿಬಿಎ ನೀಡಿದ ಒಂದು ಖಡಕ್ ಎಚ್ಚರಿಕೆ ಇಡೀ ನಗರದಲ್ಲಿ ಭಾರೀ...

LPG e-KYC ಗಡುವು ಆ.23ರವರೆಗೆ ವಿಸ್ತರಣೆ; ಸರ್ವರ್ ಸಮಸ್ಯೆಯಿಂದ ಗ್ರಾಹಕರಿಗೆ ತೊಂದರೆ

LPG e-KYC ಗಡುವು ಆ.23ರವರೆಗೆ ವಿಸ್ತರಣೆ; ಸರ್ವರ್ ಸಮಸ್ಯೆಯಿಂದ ಗ್ರಾಹಕರಿಗೆ ತೊಂದರೆ

by Shwetha
August 18, 2026
0

LPG ಸಂಪರ್ಕಕ್ಕೆ ಸಂಬಂಧಿಸಿದ e-KYC ಪೂರ್ಣಗೊಳಿಸಲು ನೀಡಲಾಗಿದ್ದ ಗಡುವನ್ನು ತೈಲ ಕಂಪನಿಗಳು ಆಗಸ್ಟ್ 23ರವರೆಗೆ ವಿಸ್ತರಿಸಿವೆ. ಮೂಲ ಗಡುವು ನಿನ್ನೆ ಮುಕ್ತಾಯಗೊಂಡಿದ್ದರೂ, ತಾಂತ್ರಿಕ ಸಮಸ್ಯೆಗಳಿಂದಾಗಿ ಗ್ರಾಹಕರಿಗೆ ಎದುರಾಗುತ್ತಿರುವ...

‘ಟಾಕ್ಸಿಕ್’ ಬೋಲ್ಡ್ ದೃಶ್ಯಗಳಿಗೆ ರಾಧಿಕಾ ಪಂಡಿತ್ ಪ್ರತಿಕ್ರಿಯೆ ಹೇಗಿತ್ತು? ಯಶ್ ಹೇಳಿದ್ದೇನು?

‘ಟಾಕ್ಸಿಕ್’ ಬೋಲ್ಡ್ ದೃಶ್ಯಗಳಿಗೆ ರಾಧಿಕಾ ಪಂಡಿತ್ ಪ್ರತಿಕ್ರಿಯೆ ಹೇಗಿತ್ತು? ಯಶ್ ಹೇಳಿದ್ದೇನು?

by Shwetha
August 18, 2026
0

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಇದೇ ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ...

ಕಿದ್ವಾಯಿ ಆಸ್ಪತ್ರೆಗೆ ಹೋಗಿ ನೋಡಿ, ಕಣ್ಣಲ್ಲಿ ನೀರಲ್ಲ ರಕ್ತ ಬರುತ್ತೆ : ಶಾಸಕರು ಹೇಳಿದ್ದನ್ನೆಲ್ಲಾ ಕೇಳೋಕೆ ಆಗಲ್ಲ,ಗುಟ್ಕಾ ಬ್ಯಾನ್ ವಾಪಸ್ ಇಲ್ಲ! ಆರೋಗ್ಯ ಸಚಿವ ಯುಟಿ ಖಾದರ್

ಕಿದ್ವಾಯಿ ಆಸ್ಪತ್ರೆಗೆ ಹೋಗಿ ನೋಡಿ, ಕಣ್ಣಲ್ಲಿ ನೀರಲ್ಲ ರಕ್ತ ಬರುತ್ತೆ : ಶಾಸಕರು ಹೇಳಿದ್ದನ್ನೆಲ್ಲಾ ಕೇಳೋಕೆ ಆಗಲ್ಲ,ಗುಟ್ಕಾ ಬ್ಯಾನ್ ವಾಪಸ್ ಇಲ್ಲ! ಆರೋಗ್ಯ ಸಚಿವ ಯುಟಿ ಖಾದರ್

by Shwetha
August 18, 2026
0

ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧ ಆದೇಶವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಅತ್ಯಂತ...

ಅಲ್ಲಾಹನ ಹೊರತು ಯಾರನ್ನೂ ಪೂಜಿಸಲ್ಲ, ಎದ್ದು ನಿಲ್ಲುತ್ತೇನೆ ಆದರೆ ವಂದೇ ಮಾತರಂ ಹಾಡುವುದಿಲ್ಲ, ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ವಿವಾದಾತ್ಮಕ ಹೇಳಿಕೆ

ಅಲ್ಲಾಹನ ಹೊರತು ಯಾರನ್ನೂ ಪೂಜಿಸಲ್ಲ, ಎದ್ದು ನಿಲ್ಲುತ್ತೇನೆ ಆದರೆ ವಂದೇ ಮಾತರಂ ಹಾಡುವುದಿಲ್ಲ, ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ವಿವಾದಾತ್ಮಕ ಹೇಳಿಕೆ

by Shwetha
August 18, 2026
0

ನವದೆಹಲಿ: ಸ್ವಾತಂತ್ರ್ಯ ದಿನೋತ್ಸವದಂದು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂಗೆ ಸೋನಿಯಾ ಗಾಂಧಿ ಅಡ್ಡಿಪಡಿಸಿದ್ದಾರೆ ಎಂಬ ಬಿಜೆಪಿ ಆರೋಪದ ಬೆನ್ನಲ್ಲೇ, ಕಾಂಗ್ರೆಸ್ ಸಂಸದ ಇಮ್ರಾನ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram