ಥಿಯೇಟರ್ ಗಳಲ್ಲಿ ರಾಜಿ ಪ್ರಶ್ನೆಯೇ ಇಲ್ಲ..! ಅಮೀರ್ ಗೆ “ರಾಕಿ ಭಾಯ್ ಉತ್ತರ”

1 min read

ಥಿಯೇಟರ್ ಗಳಲ್ಲಿ ರಾಜಿ ಪ್ರಶ್ನೆಯೇ ಇಲ್ಲ..! ಅಮೀರ್ ಗೆ “ರಾಕಿ ಭಾಯ್ ಉತ್ತರ”

ಅಮೀರ್ ಖಾನ್ ಮೊದಲ ಬಾರಿಗೆ ಸಿಖ್ ಪಾತ್ರದಲ್ಲಿ ಕಾಣಿಸಿಕೊಳ್ತಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾ ಕೆಜಿಎಫ್ 2 ರಿಲೀಸ್ ಆಗುವ ದಿನದಂದೇ ರಿಲೀಸ್ ಆಗಲಿದೆ.. ಆದ್ರೆ ಈ ಬಗ್ಗೆ ಸಂದರ್ಶವೊಂದ್ರಲ್ಲಿ ಮಾತನಾಡಿದ್ದ ಅಮೀರ್ ಖಾನ್ ದೊಡ್ಡ ಸಿನಿಮಾಗಳು ರಿಲೀಸ್ ಆಗುವಾಗ ಅದೇ ಸಮಯದಲ್ಲೇ ಸಿನಿಮಾ ರಿಲೀಸ್ ಮಾಡಲ್ಲ.. ಆದ್ರೆ ಸಿಖ್ಖರ ಪವಿತ್ರ ಹಬ್ಬ ಬೈಸಾಖಿಯಂದೇ ಈ ಸಿನಿಮಾ ರಿಲೀಸ್ ಮಾಡುವುದು ಉತ್ತಮ ಎಂದು ನಾನೀ ನಿರ್ಧಾರ ಕೈಗೊಂಡಿದ್ದೇನೆ… ಅಲ್ಲದೇ ಪತ್ರ ಮೂಲಕ ೀಗಾಗಲೇ ಕೆಜಿಎಫ್ ಚಾಪ್ಟರ್ 2 ನ ಇಡೀ ತಂಡ, ನಿರ್ಮಾಕ , ನಿರ್ದೇಶಕ , ನಟ ಯಶ್ ಬಳಿ ಮನಸಾರೆ ಕ್ಷಮೆಯಾಚಿಸಿದ್ದೇನೆ ಎಂದಿದ್ರು..

ಇದೀಗ ರಾಕಿ ಭಾಯ್ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.. ಅಮೀರ್ ಜೀ ನಿಮ್ಮ ಅನಿವಾರ್ಯತೆ ನಮಗೆ ಅರ್ಥವಾಗುತ್ತೆ. ಪರವಾಗಿಲ್ಲ ನೀವೂ ಅಂದೇ ಸಿನಿಮಾವನ್ನು ರಿಲೀಸ್ ಮಾಡಬಹುದು. ನೀವು ಬಾಲಿವುಡ್ಗೆ ಹಿರಿಯರು. ನಿಮ್ಮ ಕೋರಿಕೆಯನ್ನು ತಿರಸ್ಕರಿಸಲಾಗದು. ಆದರೆ ಥಿಯೇಟರ್ಗಳಲ್ಲಿ ನಾವು ರಾಜಿಯಾಗುವುದಿಲ್ಲ. ನಮ್ಮ ನಿರ್ಮಾಪಕರಿಗೂ ಕಷ್ಟವಾಗಬಾರದಲ್ಲವೇ? ನಮ್ಮ ಹಂಚಿಕೆದಾರರ ಜೊತೆ ಈ ಬಗ್ಗೆ ಒಂದು ಸಲ ಮಾತನಾಡುತ್ತೇನೆ. ನಿಮ್ಮ ಬೆಂಬಲಕ್ಕೆ ನಾನಿರುತ್ತೇನೆ. ನೀವು ಸಹಕರಿಸಿ ಎಂದು ಉತ್ತರಿಸಿದ್ದಾರೆ.

ಇಡೀ ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಎದುರು ನೋಡ್ತಿರುವ ಚಿತ್ರ ಅಂದ್ರೆ ಅದು ಪ್ರಶಾಂತ್ ನೀಲ್ ನಿರ್ದೇಶನದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2.. ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಭಾರತದಾದ್ಯಂತ ಅಷ್ಟೇ ಅಲ್ಲ ಬೇರೆ ದೇಶಗಳ ಅಭಿಮಾನಿಗಳು ಕೂಡ ಕಾತರದಿಂದ ಕಾಯ್ತಾಯಿದ್ದಾರೆ.. ಈ ಸಿನಿಮಾ ಏಪ್ರಿಲ್ 14ರಂದು ರಿಲೀಸ್ ಆಗಲಿದೆ.. ಆದ್ರೆ ಇದೇ “ಕೆಜಿಎಫ್ ಚಾಪ್ಟರ್ 2” ಸಿನಿಮಾ ಮುಂದೆ ಧೈರ್ಯ ಮಾಡಿ ಹೋರಾಟಕ್ಕೆ ನಿಂತಿದೆ ಬಾಲಿವುಡ್ ನ ಸ್ಟಾರ್ ಖಾನ್ , ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಅವರ “ಲಾಲ್ ಸಿಂಗ್ ಚಡ್ಡಾ” ವೆಬ್ ಸೀರೀಸ್..

ಲಾಲ್ ಸಿಂಗ್ ಚಡ್ಡಾ RRR , ಗಂಗೂಭಾಯಿ ಕಾಥೇಯವಾಡಿ, ಕಿಲಾಡಿಯಂತಹ ಪ್ಯಾನ್ ಇಂಡಿಯಾ ಬಿಗ್ ಬಜೆಟ್ ಸಿನಿಮಾಗಳಿಗೆ ಹೆದರಿ 2 -3 ಸಲ ರಿಲೀಸ್ ಡೇಟ್ ಮುಂದೂಡಿ ಕಡೆಗೆ ಬಂದು ಬಂದು ಕೆಜಿಎಫ್ 2 ರಿಲೀಸ್ ದಿನದಂದೇ ಸಿನಿಮಾ ರಿಲೀಸ್ ಮಾಡುವುದಕ್ಕೆ ಪ್ಲಾನ್ ಮಾಡಿದೆ..

ಬಂಡೆ ಗಣೇಶ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದ ‘ಶಿವಾಜಿ ಸುರತ್ಕಲ್-2 ‘ಮುಹೂರ್ತ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd