ಅನಂತ್ ನಾಗ್‌ ಗೆ ಪದ್ಮ ಪ್ರಶಸ್ತಿ ಅಭಿಯಾನಕ್ಕೆ ರಾಕೀ ಭಾಯ್  ಬೆಂಬಲ..!  

1 min read

ಅನಂತ್ ನಾಗ್‌ ಗೆ ಪದ್ಮ ಪ್ರಶಸ್ತಿ ಅಭಿಯಾನಕ್ಕೆ ರಾಕೀ ಭಾಯ್  ಬೆಂಬಲ..!

ಅಭಿನಯ ಬ್ರಹ್ಮ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂಬ ಅಭಿಯಾನ ಕೆಲ ದಿನಗಳಿಂದ ನಡೆಯುತ್ತಿದೆ.. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ , ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವರು ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.. ಇದೀಗ   ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

‘ಅನಂತ್ ನಾಗ್ ಕರ್ನಾಟಕದ ಹೆಮ್ಮೆ, ಭಾರತೀಯ ಚಿತ್ರರಂಗ ಅಭಿಜ್ಞಾ’ ಎಂದು ಟ್ವಿಟ್ಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನಂತ್ ನಾಗ್ ಅವರ ಜೊತೆಗಿನ ಫೋಟೋ ಹಂಚಿಕೊಂಡಿರುವ ಯಶ್ ‘ಅಭಿನಯ ಎನ್ನುವುದು ವರ್ತನೆ ಎಂದು ಅನಂತ್ ನಾಗ್ ಅವರು ಒಮ್ಮೆ ಹೇಳಿದ್ದರು. ಆ ಮಾತು ನನ್ನಲ್ಲಿ ಇನ್ನು ಉಳಿದಿದೆ. ಅವರ ಹಾಸ್ಯ ಪ್ರಧಾನ ಸಿನಿಮಾಗಳನ್ನು ನೋಡಿ ನಕ್ಕವನು ನಾನು ಬೆಳೆದವನು ನಾನು. ಅವರ ಅತ್ತಾಗ ನನ್ನ ಕಣ್ಣು ಸಹ ಒದ್ದೆಯಾಗಿತ್ತು. ಆ ಮಹಾನ್ ಕಲಾವಿದನ ಜೊತೆ ನಟಿಸಬೇಕು ಎನ್ನುವ ಹಂಬಲ ಎಂದೆಂದಿಗೂ ಇರಲಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.saakshatv

ಅಲ್ಲದೇ  ‘ಅವರ ಸಿನಿಮಾಗಳು ಇಂದಿಗೂ ಪ್ರಸ್ತುತ. ಕಿರುತೆರೆಯಿಂದ ಹಿಡಿದು ನನ್ನ ಸಿನಿಮಾ ಪಯಣದ ಆರಂಭದ ದಿನಗಳಿಂದಲೂ ಈ ಅದ್ಭುತ ಕಲಾವಿದನ ಜೊತೆ ನಟಿಸುವ ಅದೃಷ್ಟ ನನಗೆ ಸಿಕ್ಕಿದೆ. ಅನಂತ್ ನಾಗ್ ಅವರ ಅಪಾರ ಜ್ಞಾನ ನನಗೆ ಪ್ರೇರಣೆಯಾಗಿದೆ. ಅನಂತ್ ನಾಗ್ ಕರ್ನಾಟಕ ಹೆಮ್ಮೆ. ಅವರು ಕೇವಲ ನಟರಲ್ಲ ಅವರು ಭಾರತೀಯ ಸಿನಿಮಾರಂಗದ ಅಭಿಜ್ಞಾ. ಪದ್ಮ ಪ್ರಶಸ್ತಿಗೆ ಇವರಿಗಿಂತ ಉತ್ತಮರು ಯಾರು?’ ಎಂದು ನಟ ಯಶ್ ಪ್ರಶ್ನಿಸಿದ್ದಾರೆ.

ಜನರ ಅಭಿಪ್ರಾಯ ಸಂಗ್ರಹ ಭಾರತದಲ್ಲಿ ನೀಡಲಾಗುವ ಅತ್ಯಂತ ಗೌರವವಾನ್ವಿತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗೆ ಹೆಸರು ಸೂಚಿಸುವಂತೆ ಕೇಂದ್ರ ಸರ್ಕಾರ ‘ಪೀಪಲ್ಸ್ ಪದ್ಮ’ ಹೆಸರಿನಡಿಯಲ್ಲಿ ಕರೆ ನೀಡಿದೆ. ಈ ಸಾಲಿನ ಪದ್ಮ ಪ್ರಶಸ್ತಿಗಾಗಿ ಕರ್ನಾಟಕದಿಂದ ಹಿರಿಯ ನಟ ಅನಂತ್ ನಾಗ್, ಹಂಸಲೇಖ, ಹಿರಿಯ ಕಲಾವಿದ ಬಿರಾದರ್ ಅಂತವರ ಹೆಸರು ಮುಂಚೂಣಿಯಲ್ಲಿದೆ.yash saakshatv

ರಾಕಿಂಗ್ ಸ್ಟಾರ್ ಯಶ್ ಅವರ ನಟನೆಯ ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ಕೆಜಿಎಫ್ 2 ಸಿನಿಮಾ ರಿಲೀಸ್ ದಿನಾಂಕ ಮುಂದೂಡಿಕೆಯಾಗಿದೆ.. ಶೀಘ್ರವೇ ಹೊಸ ದಿನಾಂಕ ತಿಳಿಸೋದಾಗಿ ಚಿತ್ರತಂಡ ಹೇಳಿಕೊಂಡಿದೆ.. ಈ ನಡುವೆ ರಾಕಿಂಗ್ ಸ್ಟಾರ್ ಯಶ್ ಮಾಸ್ ಸಿನಿಮಾಗಳ ಖ್ಯಾತಿಯ ನಿರ್ದೇಶ ಬೋಯಪಾಟಿ ಶ್ರೀನು ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದಾರೆ ಎನ್ನಲಾಗ್ತಿದೆ.. ಆದ್ರೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಅಶ್ಲೀಲ ವಿಡಿಯೋ ಕೇಸ್ :  “ಹೊಳೆಯೋದೆಲ್ಲಾ ಚಿನ್ನವಲ್ಲ” – ಕುಂದ್ರಾ ವಿರುದ್ಧ ಕಂಗನಾ ವ್ಯಂಗ್ಯ..!

“ಜೆಂಟಲ್ ಮೆನ್” ಆಗಿ ಹಿರಿತೆರೆಯಿಂದ ಕಿರುತೆರೆಗೆ ಬರುತ್ತಿದ್ದಾರೆ ಡೈನಾಮಿಕ್ ಪ್ರಿನ್ಸ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd