yash radhika
ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ದಂಪತಿ ಇಂದು ತಮ್ಮ ಮಗ ಯಥರ್ವ್ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. ಇಂದು ಅವರ 2ನೇ ಮಗನ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಮಗನ ಹುಟ್ಟುಹಬ್ಬದ ಸಂಭ್ರದಲ್ಲಿರುವ ಯಶ್ – ರಾಧಿಕಾ ದಂಪತಿ ಮಗನ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಆದ್ರೆ ಕೊರೊನಾ ಕಾರಣ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡದೇ ಸರಳವಾಗಿ ಸೆಲೆಬ್ರೇಟ್ ಮಾಡ್ತಾಯಿದ್ದಾರೆ.
ಮುದ್ದು ಮಗನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಪ್ಲಾನ್ ಮಾಡಿದ್ದರು, ಆದರೀಗ ಸರಳವಾಗಿ ತೀರಾ ಆಪ್ತರ ಜೊತೆ ಮಾತ್ರ ಸೆಲೆಬ್ರೇಟ್ ಮಾಡಲಾಗುತ್ತೆ ಎಂದು ಹೇಳಲಾಗುತ್ತಿದೆ. ಅಂದ್ಹಾಗೆ ಮುದ್ದು ಮಗನ ಹುಟ್ಟುಹಬ್ಬಕ್ಕೆ ರಾಧಿಕಾ ಪಂಡಿತ್ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಮಗನ ಅಪರೂಪದ ಫೋಟೋಗಳನ್ನು ರಾಧಿಕಾ ಹಂಚಿಕೊಂಡಿದ್ದಾರೆ. ಗರ್ಭಿಣಿ ಆಗಿದ್ದ ಫೋಟೋದಿಂದ ಯಥರ್ವ್ ನಿಗೆ ಒಂದು ವರ್ಷ ತುಂಬುವವರೆಗಿನ ಎಲ್ಲಾ ಫೋಟೋವನ್ನು ಶೇರ್ ಮಾಡಿದ್ದಾರೆ. ರಾಧಿಕಾ ಶೇರ್ ಮಾಡಿರುವ ಫೋಟೋಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಫೋಟೋ ಅಂದ್ರೆ ಅದು ಯಥರ್ವ್ ಜನಿಸಿದಾಗ ಯಶ್ ಮಗುವನ್ನು ರಾಧಿಕಾಗೆ ತೋರಿಸುತ್ತಿರುವ ಸುಂದರ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮುದ್ದು ಮಗನಿಗೆ ವಿಶ್ ಮಾಡಿರುವ ರಾಧಿಕಾ “ಹುಟ್ಟುಹಬ್ಬ ಶುಭಾಶಯಗಳು ನನ್ನ ಪ್ರೀತಿಯ ಮಗನೆ. ಯಾವಾಗಲು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಶುಭ ಹಾರೈಸಿದ್ದಾರೆ. ಇನ್ನೂ ರಾಧಿಕಾ ಪೋಸ್ಟ್ ಗೆ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬರುತ್ತಿದೆ. ಅಲ್ಲದೆ ಯಶ್ ರಾಧಿಕಾ ಪುತ್ರನಿಗೆ ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದಾರೆ.
yash radhika
ಈ ಸಲ ಕಂಗನಾ ಸುದ್ದಿಯಲ್ಲಿರೋದೇ ಬೇರೆಯ ವಿಚಾರಕ್ಕೆ : ಈ ನಟಿ ಹೊಗಳಿದ್ದು ಯಾರನ್ನ..!
‘ಲಕ್ಷ್ಮಿ ಬಾಂಬ್’ ಅಲ್ಲ “ಲಕ್ಷ್ಮಿ”ಯಾಗಿ ಬರುತ್ತಿದ್ದಾರೆ ಅಕ್ಷಯ್ ಕುಮಾರ್…! ವಿರೋಧಕ್ಕೆ ಮಣಿದು ಹೆಸರು ಬದಲಾವಣೆ..
“ಅಧೀರನ” ಹೊಸ ಗೆಟಪ್ ಗೆ ಅಭಿಮಾನಿಗಳು ಫಿದಾ.! ಹೇಗಿದೆ ಹೊಸ ಹೇರಸ್ಟೈಲ್..
ಕಂಗನಾ ಹಾಗೂ ಸಹೋದರಿ ರಂಗೋಲಿಗೆ ಎದುರಾಯ್ತು ಮತ್ತೊಂದು ಸಂಕಷ್ಟ..!
ರಾರಾ ಅಖಾಡದಲ್ಲಿ ಡಿ ಬಾಸ್ ಪ್ರಚಾರ : ಇದೆಲ್ಲಾ ವರ್ಕೌಟ್ ಆಗಲ್ಲ ಎಂದ ದಳಪತಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel